
ಉದಯವಾಹಿನಿ,ಮಸ್ಕಿ: ಪಟ್ಟಣದಲ್ಲಿ ಡಿವೈಡರ್ ರಸ್ತೆ ನಿರ್ಮಾಣಕ್ಕೆ ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರು ಮಂಗಳವಾರ ಸಂಜೆ ಭೂಮಿ ಪೂಜೆ ನೆರವೇರಿಸಿದರು.
ಮುದಗಲ್ಲ ಕ್ರಾಸದಿಂದ ಎಪಿಎಂಸಿವರೆಗೆ 2ಕಿ.ಮೀ ವಿಭಜಕ ರಸ್ತೆ 14ಕೋಟಿ ವೆಚ್ಚದಲ್ಲಿ ಡಿವೈಡರ್ ರಸ್ತೆ ನಿರ್ಮಾಣ ಮಾಡಲಾಗುವುದು. 150ಎ ರಾಷ್ಟ್ರೀಯ ಹೆದ್ದಾರಿ ಹೊಂದಿಕೊಂಡಿರುವುದರಿಂದ ವಾಹನಗಳು ಹೆಚ್ಚಾಗಿ ಒಡಾಡಿ ಟ್ರಾಪಿಕ್ ಜ್ರಾಮ್ ಉಂಟಾಗುತ್ತದೆ. ಡಿವೈಡರ್ ನಿರ್ಮಿಸುವುದರಿಂದ ಸುಗಮ ಸಂಚಾರಕ್ಕೆ ಅನುಕೂಲವಾಗುತ್ತದೆ, ವಾಹನ ಸವಾರರಿಗೆ ಸಮಯ ಉಳಿತಾಯವಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ಮಹಾದೇವಪ್ಪಗೌಡ,ಅಂದಾನಪ್ಪ ಗುಂಡಳ್ಳಿ, ಶರಣಬಸವ ಸೊಪ್ಪಿಮಠ, ಮಲ್ಲಪ್ಪ ಅಂಕುಶದೊಡ್ಡಿ, ಮಸೂದ್ ಪಾಷಾ, ಭರತಶೇಠ, ಮೌನೇಶ ನಾಯಕ ವೆಂಕಟೇಶ ನಾಯಕ,ಅಂಬಾಡಿ ಮಲ್ಲಯ್ಯ, ಡಾ.ಪಂಚಾಕ್ಷರಯ್ಯ ಸೇರಿದಂತೆ ಇನ್ನಿತರಿದ್ದರು
