ಉದಯವಾಹಿನಿ, ಉತ್ತಮ ಗುಣಮಟ್ಟದ ಪ್ರೋಟೀನ್‌ನಿಂದ ಸಮೃದ್ಧವಾಗಿರುವ ಮೊಟ್ಟೆ ತಿನ್ನುವುದರಿಂದ ಸರ್ವಾಂಗಕ್ಕೂ ಪ್ರಯೋಜನವಿದೆ. ಇದರಲ್ಲಿರುವ ಪೋಷಕಾಂಶಗಳು ಮೆದುಳನ್ನು ಚುರುಕುಗೊಳಿಸುವುದರಿಂದ ಹಿಡಿದು ಮೂಳೆಗಳನ್ನು ಗಟ್ಟಿಗೊಳಿಸುವವರೆಗೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ. ಮೊಟ್ಟೆಯಲ್ಲಿ ವಿಟಮಿನ್ ಎ, ಬಿ12, ಬಿ6, ಡಿ, ಇ ಜೊತೆಗೆ ಉತ್ತಮ ಪ್ರಮಾಣದ ಖನಿಜಗಳನ್ನು ಹೊಂದಿದೆ. ಪ್ರತಿ ದಿನ ಕೇವಲ ಮೂರೇ ಮೂರು ಮೊಟ್ಟೆಗಳನ್ನು ತಿನ್ನುವ ಅಭ್ಯಾಸವನ್ನು ರೂಢಿಸಿಕೊಂಡರೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಂದ ದೂರ ಉಳಿಯಬಹುದು ಎನ್ನಲಾಗುತ್ತದೆ. ಮೊಟ್ಟೆ ತಿನ್ನುವುದರ ಪ್ರಯೋಜನಗಳನ್ನು ತಿಳಿಯೋಣ.. ದಿನಕ್ಕೆ ಮೂರು ಮೊಟ್ಟೆ ತಿನ್ನುವುದರಿಂದ ಇದು ಹೊಟ್ಟೆ ತುಂಬಿದಂತಿರುತ್ತದೆ. ಇದರಿಂದ ಅನಾವಶ್ಯಕವಾಗಿ ಪದೇ ಪದೇ ತಿನ್ನುವುದನ್ನು ತಪ್ಪಿಸುತ್ತದೆ. ಇದರಿಂದ ತೂಕ ಇಳಿಕೆಗೆ ಸಹಕಾರಿ ಆಗಲಿದೆ. ಮೊಟ್ಟೆಯಲ್ಲಿರುವ ವಿಟಮಿನ್ ಎ, ಡಿ, ಇ ಜೊತೆಗೆ ಆ್ಯಂಟಿಆಕ್ಸಿಡೆಂಟ್‌ಗಳು ಕಣ್ಣಿನ ಸಮಸ್ಯೆಗಳಿಂದ ಪರಿಹಾರ ನೀಡಿ ತೀಕ್ಷ್ಣ ದೃಷ್ಟಿಯನ್ನು ಹೊಂದಲು ಸಹಕಾರಿ ಆಗಿದೆ. ಮೊಟ್ಟೆಯಲ್ಲಿರುವ ಉತ್ತಮ ಪೋಷಕಾಂಶಗಳು, ಕೋಲೀನ್‌ನಂತಹ ಖನಿಜಗಳು ಮೆದುಳಿನ ಬೆಳವಣಿಗೆ ಸಹಕಾರಿ ಆಗಿದೆ. ಇದು ಮೆದುಳನ್ನು ಚುರುಕುಗೊಳಿಸುವಲ್ಲಿ ಪರಿಣಾಮಕಾರಿ ಎಂದು ಸಾಬೀತುಪಡಿಸಲಿದೆ.
