ಉದಯವಾಹಿನಿ , ಬೆಂಗಳೂರು: ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿಯ‌ 7ನೇ ವರ್ಷದ ಪ್ರಶಸ್ತಿ ಸಮಾರಂಭಕ್ಕೂ ಮುನ್ನ ಟ್ರೋಫಿ ಅನಾವರಣ ಮತ್ತು ನಾಮ ನಿರ್ದೇಶಿತರ ಹೆಸರುಗಳನ್ನು ಘೋಷಿಸಲಾಯಿತು. ಟ್ರೋಫಿ ಅನಾವರಣ ಕಾರ್ಯಕ್ರಮಕ್ಕೆ ಖ್ಯಾತ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್, ಕೆ.ಎಂ ಚೈತನ್ಯ, ಖ್ಯಾತ ನಟಿ ಪೂಜಾ ಗಾಂಧಿ ಹಾಗೂ ನಟ ಶ್ರೀನಗರ ಕಿಟ್ಟಿ, ಅಂಬರ್ಸ್ಟೋನ್ ಪ್ರಾಪರ್ಟೀಸ್ ಸೇಲ್ಸ್ ಹೆಡ್ ಸುನೀಲ್, ಮಾರ್ಕೆಟಿಂಗ್ ಹೆಡ್‌ ಅನೂಪ್, ಮಾರ್ಕೆಟಿಂಗ್ ಜನರಲ್ ಮ್ಯಾನೇಜರ್ ಶ್ವೇತಾ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಸಿನಿಮಾದ ಹಿರಿಯ ಪಿಆರ್‌ಒ ವಿಜಯ್ ಕುಮಾರ್ ಅವರ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.

ಸಿನಿಮಾ ವಿಮರ್ಶಕರು ಕೊಡುವ ಪ್ರಶಸ್ತಿಗಳಿಗೆ ತೂಕ ಇರಲಿದೆ. ಹಾಗಾಗಿ, ಅದೊಂದು ದೊಡ್ಡ ಗೌರವ ಎಂದು ನಾಗತಿಹಳ್ಳಿ ಚಂದ್ರಶೇಖರ್ ತಿಳಿಸಿದರು. ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿಯ ಪ್ರಶಸ್ತಿ ಕುರಿತಂತೆ ಮೆಚ್ಚುಗೆಯ ಮಾತುಗಳನ್ನು ಆಡಿದರು ನಟ ಶ್ರೀನಗರ ಕಿಟ್ಟಿ. ಏಳು ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿರುವ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿಯು ಮಾದರಿ ಕೆಲಸ ಮಾಡುತ್ತಿದೆ. ಪ್ರಶಸ್ತಿಗಳ ಆಯ್ಕೆಯೇ ತಿಳಿಸುತ್ತದೆ ಅಂದರು ಪೂಜಾ ಗಾಂಧಿ.

ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ನಾಮ ನಿರ್ದೇಶಿತರು 2026
ಅತ್ಯುತ್ತಮ ಚೊಚ್ಚಲ ನಿರ್ಮಾಪಕ (ಪುನೀತ್ ರಾಜಕುಮಾರ್ ಪ್ರಶಸ್ತಿ )
1. ಆದರ್ಶ್ ಅಯ್ಯಂಗಾರ್ (ತಿಮ್ಮನ ಮೊಟ್ಟೆಗಳು)
2. ನಾಗೇಶ್ ಗೋಪಾಲ್ (ನೋಡಿದವರು ಏನಂತಾರೆ)
3. ನಿವೇದಿತಾ ಶಿವರಾಜಕುಮಾರ್ ( ಫೈರ್ ಫ್ಲೈ)
4. ದೀಪಕ್ ತಿಮ್ಮಪ್ಪ (ಗತ ವೈಭವ)
5. ಸಿಆರ್ ಬಾಬಿ/ಅಜನೀಶ್ ಲೋಕನಾಥ್ (ಜಸ್ಟ್ ಮ್ಯಾರೀಡ್)

Leave a Reply

Your email address will not be published. Required fields are marked *

error: Content is protected !!