ಉದಯವಾಹಿನಿ , ಬಾಲಿವುಡ್‌ ಸ್ಟಾರ್‌ ರಣವೀರ್‌ ಸಿಂಗ್‌ ಅಭಿನಯದ ಧುರಂಧರ್‌-2 ಸಿನಿಮಾ ರಿಲೀಸ್‌ಗೂ ಮುನ್ನವೇ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿದೆ. ಬಿಡುಗಡೆಗೂ ಮುನ್ನ ಸಿನಿಮಾ 100 ಕೋಟಿ ರೂ. ಕ್ಲಬ್‌ ಸೇರಿದೆ.

‘ಧುರಂಧರ್’ ಚಿತ್ರದ ಮೂಲಕ ಹಲವಾರು ಬಾಕ್ಸ್ ಆಫೀಸ್ ದಾಖಲೆಗಳನ್ನು ಉಡೀಸ್‌ ಮಾಡಿದ್ದ ರಣವೀರ್ ಸಿಂಗ್ ಈಗ ‘ಧುರಂಧರ್ 2: ದಿ ರಿವೆಂಜ್’ ಮೂಲಕ ಮತ್ತೆ ಪ್ರೇಕ್ಷಕರನ್ನು ಮೆಚ್ಚಿಸಲು ಸಜ್ಜಾಗಿದ್ದಾರೆ. ಆದಿತ್ಯ ಧಾರ್ ನಿರ್ದೇಶನದ ಈ ಬಹು ನಿರೀಕ್ಷಿತ ಪಾರ್ಟ್‌ 2 ಇದೇ ಮಾ.19 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಮಾ.18 ರಂದು ಪ್ರೀಮಿಯರ್‌ ಶೋ ನಿಗದಿಪಡಿಸಲಾಗಿದೆ. ಕೆಲವು ದಿನಗಳ ಹಿಂದೆ ಮುಂಗಡ ಬುಕಿಂಗ್‌ಗಳು ಪ್ರಾರಂಭವಾದವು. ಚಿತ್ರವು ಈಗಾಗಲೇ ಭಾರತೀಯ ಚಿತ್ರರಂಗದ ಅತಿದೊಡ್ಡ ಹಿಟ್‌ಗಳಲ್ಲಿ ಒಂದನ್ನು ತಲುಪಿಸುವ ಹಾದಿಯಲ್ಲಿದೆ.

ಪೇಯ್ಡ್‌ ಪ್ರಿವೀವ್ಸ್‌ ಮಾತ್ರ ಮುಂಗಡ ಟಿಕೆಟ್ ಮಾರಾಟದ ಮೂಲಕ 37.11 ಕೋಟಿ ರೂ. ಗಳಿಸಿವೆ. ಮೊದಲ ದಿನ (ಮಾರ್ಚ್ 19)ದ ಹೊತ್ತಿಗೆ, ಈ ಸ್ಪೈ ಆಕ್ಷನ್ ಥ್ರಿಲ್ಲರ್ ದೇಶಾದ್ಯಂತ 10,000 ಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ 6.1 ಲಕ್ಷ ಟಿಕೆಟ್‌ಗಳನ್ನು ಮಾರಾಟ ಮಾಡಿದೆ. ಮುಂಗಡ ಬುಕಿಂಗ್‌ನಿಂದ ಆರಂಭಿಕ ದಿನದ ಸಂಗ್ರಹವು ಇಲ್ಲಿಯವರೆಗೆ 22.70 ಕೋಟಿ ರೂ. ತಲುಪಿದೆ.

Leave a Reply

Your email address will not be published. Required fields are marked *

error: Content is protected !!