ಉದಯವಾಹಿನಿ , ಟಿ20 ವಿಶ್ವಕಪ್‌ನಲ್ಲಿ ಆಲ್‌ರೌಂಡರ್ ಪ್ರದರ್ಶನ ನೀಡಿದ ಹಾರ್ದಿಕ್ ಪಾಂಡ್ಯ ಹೊಸ ಸೂಪರ್ ಕಾರು ಖರೀದಿಸಿದ್ದಾರೆ. 12 ಕೋಟಿ ರೂ. ಮೌಲ್ಯದ ಕಪ್ಪು ಬಣ್ಣದ ಐಷಾರಾಮಿ ಫೆರಾರಿ 12 ಸಿಲಿಂಡ್ರಿಯನ್ನು ಖರೀದಿಸಿ ಗೆಳತಿ ಮಹೀಕಾ ಶರ್ಮಾ ಜೊತೆ ರೌಂಡ್ಸ್ ಹಾಕಿದ್ದಾರೆ.
ಈಗಾಗಲೇ ಪಾಂಡ್ಯ ಜೊತೆ ರೋಲ್ಸ್ ರಾಯ್ಸ್ ಫ್ಯಾಂಟಮ್, ಲಂಬೋರ್ಘಿನಿ ಹುರಾಕನ್ ಇವಿಒ, ಲಂಬೋರ್ಘಿನಿ ಉರಸ್, ಮರ್ಸಿಡಿಸ್-ಎಎಂಜಿ ಜಿ63, ರೇಂಜ್ ರೋವರ್ ವೋಗ್ ಮತ್ತು ಔಡಿ ಎ6 ನಂತಹ ಕಾರುಗಳ ಜೊತೆ ಹೊಸದಾಗಿ ಫೆರಾರಿ 12 ಸಿಲಿಂಡ್ರಿ ಸೇರ್ಪಡೆಯಾಗಿದೆ.
6.5-ಲೀಟರ್ V12 ಎಂಜಿನ್ ಹೊಂದಿರುವ ಕಾರಿನ ಗರಿಷ್ಠ ಶಕ್ತಿ 9,500 rpm ನಲ್ಲಿ 818 bhp ಆಗಿದ್ದು, ಗರಿಷ್ಠ ಟಾರ್ಕ್ 7,250 rpm ನಲ್ಲಿ 678 Nm ಆಗಿದೆ. ಗಂಟೆಗೆ 340 ಕಿ.ಮೀ. ಗರಿಷ್ಠ ವೇಗ ಹೊಂದಿರುವ ಈ ಕಾರು ಕೇವಲ 2.9 ಸೆಕೆಂಡುಗಳಲ್ಲಿ 0 ರಿಂದ 100 ತಲುಪುತ್ತದೆ. ಚಾಲಕ ಸೇರಿದಂತೆ ಇಬ್ಬರು ಕುಳಿತುಕೊಳ್ಳಬಹುದಾದ ಕಾರಿನಲ್ಲಿ 92 ಲೀಟರ್ ಇಂಧನ ತುಂಬಿಸಬಹುದು. 32 ವರ್ಷದ ಪಾಂಡ್ಯ ಟಿ20 ವಿಶ್ವಕಪ್‌ನ 9 ಇನ್ನಿಂಗ್ಸ್‌ಗಳಲ್ಲಿ 27.12 ಸರಾಸರಿ ಮತ್ತು 160.74 ಸ್ಟ್ರೈಕ್ ರೇಟ್‌ನಲ್ಲಿ 217 ರನ್ ಹೊಡೆದಿದ್ದಾರೆ. ಎರಡು ಅರ್ಧಶತಕದೊಂದಿಗೆ 9 ವಿಕೆಟ್ ಕಿತ್ತಿದ್ದಾರೆ. . ಐಸಿಸಿ ಟಿ20 ವಿಶ್ವಕಪ್ ನಂತರ ಪ್ರಕಟಿಸಿದ ಆಲ್‌ರೌಂಡರ್ ರ‍್ಯಾಕಿಂಗ್ ಪಟ್ಟಿಯಲ್ಲಿ ಪಾಂಡ್ಯ 299 ರೇಟಿಂಗ್‌ನಲ್ಲಿ 2ನೇ ಸ್ಥಾನ ಪಡೆದಿದ್ದಾರೆ.
