ಉದಯವಾಹಿನಿ, ಕೊಟ್ಟಾಯಂ: ದೇಶದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಅತ್ಯಂತ ಕಿರಿಯ ಪುರಸಭೆ ಅಧ್ಯಕ್ಷೆಯಾಗಿ ಕೇರಳದಲ್ಲಿ ದಿಯಾ ಬಿನು ಪುಲ್ಲಿಕ್ಕಕಂಡಮ್ ಆಯ್ಕೆಯಾಗಿದ್ದಾರೆ. ಪಾಲಾ ಪುರಸಭೆಯ 15ನೇ ವಾರ್ಡ್‌ನಿಂದ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ 21 ವರ್ಷದ ದಿಯಾ ಬಿನು ಅವರನ್ನು ಕೇರಳದ ಮೊದಲ ಜನರಲ್ ಝಡ್ ಅಧ್ಯಕ್ಷೆಯಾಗಿ ನೇಮಕ ಮಾಡಲಾಗಿದೆ. ಈ ಮೂಲಕ ಅವರು ದೇಶದ ಅತ್ಯಂತ ಕಿರಿಯ ಪುರಸಭೆಯ ಅಧ್ಯಕ್ಷೆಯಾಗಿ ಗುರುತಿಸಲ್ಪಟ್ಟಿದ್ದಾರೆ.
ಚುನಾವಣೆಯಲ್ಲಿ ಬಂದ ತೀರ್ಪು ಗೊಂದಲಮಯವಾಗಿದ್ದರಿಂದ ಉಂಟಾದ ರಾಜಕೀಯ ಅನಿಶ್ಚಿತತೆಯ ಬಳಿಕ ಕೊಟ್ಟಾಯಂ ಜಿಲ್ಲೆಯ ಪಾಲಾ ಪುರಸಭೆಯ ಅಧ್ಯಕ್ಷೆಯಾಗಿ ದಿಯಾ ಬಿನು ಪುಲ್ಲಿಕ್ಕಕಂಡಮ್ ಅವರನ್ನು ನೇಮಕ ಮಾಡಲಾಗಿದೆ. ದಿಯಾ ಅವರು ಪಾಲಾ ಪುರಸಭೆಯ 15 ನೇ ವಾರ್ಡ್‌ನಿಂದ ಸ್ವತಂತ್ರ ಅಭ್ಯರ್ಥಿಯಾಗಿ 131 ಮತಗಳನ್ನು ಪಡೆದು ಗೆಲುವು ದಾಖಲಿಸಿದ್ದರು. ಇವರ ತಂದೆ ಬಿನು ಪುಲ್ಲಿಕ್ಕಕಂಡಮ್ ಮತ್ತು ಚಿಕ್ಕಪ್ಪ ಬಿಜು ಪುಲ್ಲಿಕ್ಕಕಂಡಮ್ ಕೂಡ ಸ್ವತಂತ್ರ ಅಭ್ಯರ್ಥಿಗಳಾಗಿ ಜಯಗಳಿಸಿದರು. ಇದರಿಂದ ಪುಲ್ಲಿಕ್ಕಕಂಡಮ್ ಕುಟುಂಬಕ್ಕೆ ಆಡಳಿತ ಮಂಡಳಿಯ ರಚನೆಯಲ್ಲಿ ಪ್ರಮುಖ ಸ್ಥಾನ ನೀಡಲಾಯಿತು.
