ಉದಯವಾಹಿನಿ, ಕಾಕಿನಾಡ (ಆಂಧ್ರಪ್ರದೇಶ): ಆಟ ಆಡ್ತಾ ಆಕಸ್ಮಿಕವಾಗಿ ಸಣ್ಣ ಪ್ಲಾಸ್ಟಿಕ್ ಡಬ್ಬಿಯನ್ನು ನುಂಗಿದ್ದ ಎಂಟು ತಿಂಗಳು ಕಂದಮ್ಮನನ್ನು ಕಾಕಿನಾಡಿನ ಸರ್ಕಾರಿ ಜನರಲ್ ಆಸ್ಪತ್ರೆಯ ವೈದ್ಯರು ಸಮಯ ಪ್ರಜ್ಞೆಯಿಂದ ಬದುಕುಳಿಸಿದ ಘಟನೆ ನಡೆದಿದೆ. ಸರಿಯಾದ ಸಮಯಕ್ಕೆ ವೈದ್ಯರ ತಂಡದ ಸಂಘಟಿತ ಪ್ರಯತ್ನದಿಂದ ಹೆಣ್ಣು ಮಗು ಪ್ರಾಣಾಪಾಯದಿಂದ ಪಾರಾಗಿದೆ.ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ ದೇವಿಪಟ್ಟಣಂ ತಾಲೂಕಿನ ದಮನಪಲ್ಲಿ ಗ್ರಾಮದ ನಿವಾಸಿ ಪಂಡಾಲ್ ವಿಜಯದುರ್ಗ ಅವರ 8 ತಿಂಗಳ ಹೆಣ್ಣು ಮಗು ಅದೃಷ್ಟವಶಾತ್ ಬದುಕುಳಿದಿದೆ. ವಿಜಯದುರ್ಗ ಅವರನ್ನು ಮೂರು ದಿನಗಳ ಹಿಂದೆ ಅನಾರೋಗ್ಯದ ಹಿನ್ನೆಲೆ ಇಲ್ಲಿನ
ಶುಕ್ರವಾರ, ಪೋಷಕರು ವೈದ್ಯರನ್ನು ಸಂಪರ್ಕಿಸಲು ಹೋದಾಗ ಮಗುವನ್ನು ಅಲ್ಲೇ ವಾರ್ಡ್ನಲ್ಲಿ ಸ್ವಲ್ಪ ಸಮಯದವರೆಗೆ ಬಿಟ್ಟಿದ್ದರು. ಈ ಸಮಯದಲ್ಲಿ, ಮಗು ಆಟವಾಡುತ್ತಾ ಅಲ್ಲಿದ್ದ ಸಣ್ಣ ಮೆಂಥೋ ಪ್ಲಸ್ ಬಾಮ್ ಪ್ಲಾಸ್ಟಿಕ್ ಡಬ್ಬಿಯನ್ನು ಆಕಸ್ಮಿಕವಾಗಿ ನುಂಗಿತ್ತು. ಇದರಿಂದ ಮಗು ಅಲ್ಲೇ ಒದ್ದಾಡುತ್ತಿತ್ತು. ಇದನ್ನು ವಾರ್ಡ್‌ನಲ್ಲಿದ್ದ ಇತರ ರೋಗಿಗಳು ಮತ್ತು ಸಹಾಯಕರು ಗಮನಿಸಿ ತಕ್ಷಣ ಅವಳನ್ನು ತುರ್ತು ವಿಭಾಗಕ್ಕೆ ಕರೆದೊಯ್ದಿದ್ದರು.ಮಗುವನ್ನು ತುರ್ತು ಚಿಕಿತ್ಸೆಗೆ ತರುವ ಹೊತ್ತಿಗೆ ಬಾಯಿಯಿಂದ ರಕ್ತಸ್ರಾವವಾಗಲು ಆರಂಭಿಸಿ, ಪ್ರಜ್ಞಾಹೀನಳಾಗಿದ್ದಳು. ಇದು ವೈದ್ಯಕೀಯ ಸಿಬ್ಬಂದಿಯಲ್ಲಿ ಗಂಭೀರ ಕಳವಳವನ್ನು ಉಂಟುಮಾಡಿತ್ತು. ಈ ವೇಳೆ ಕರ್ತವ್ಯದಲ್ಲಿದ್ದ CMO ಡಾ. ಸುಷ್ಮಾ ಅವರು ತಡ ಮಾಡದೆ ಚಿಕಿತ್ಸೆ ಆರಂಭಿಸಿದ್ದರು. ಆಗ ಡಾ. ಸತ್ಯವಾಣಿ, ಡಾ. ಮಾಣಿಕ್ಯಂ ಮತ್ತು ಡಾ. ಕಾಂತಿಮಾ ಅವರು ಜೊತೆ ಸೇರಿ ತುರ್ತು ಚಿಕಿತ್ಸೆ ಮತ್ತು ತಮ್ಮ ಕೌಶಲ್ಯದಿಂದ ಮಗುವಿನ ಗಂಟಲಿನಲ್ಲಿ ಸಿಲುಕಿದ್ದ ಪ್ಲಾಸ್ಟಿಕ್ ಅನ್ನು ಡಬ್ಬಿಯನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಮಗುವಿನ ಆರೋಗ್ಯ ಸದ್ಯ ಸ್ಥಿರವಾಗಿದ್ದು, ಚಿಕಿತ್ಸೆಗೆ ಉತ್ತಮವಾಗಿ ಪ್ರತಿಕ್ರಿಯಿಸುತ್ತಿದ್ದಾಳೆ. ಗಂಟಲಿಗೆ ಆದ ಗಾಯದಿಂದ ಸಮಸ್ಯೆ ಉಂಟಾಗದಂತೆ ಮಗುವನ್ನು ನಿರಂತರ ವೀಕ್ಷಣೆಯಲ್ಲಿ ಇರಿಸಲಾಗಿದೆ ಎಂದು ಮಕ್ಕಳ ತಜ್ಞ ಡಾ. ವೆಂಕಟೇಶ್ವರಲು ಹೇಳಿದ್ದಾರೆ.
