ಉದಯವಾಹಿನಿ, ವಿಯೆಟ್ನಾಂ : ರಾಜ್ಯದಲ್ಲಿ ಮಹಿಳೆಯರ ಮೇಲೆ ಜಗಳ, ಹಲ್ಲೆ, ದೌರ್ಜನ್ಯದಂತಹ ಘಟನೆ ಗಳು ದಿನೇ ದಿನೇ ಹೆಚ್ಚಾಗುತ್ತಲೇ ಇವೆ. ಇದಕ್ಕೆ ಸಾಕ್ಷಿ ಎಂಬಂತೆ ಮಹಿಳೆಯೊಬ್ಬರಿಗೆ ಕ್ಲುಲ್ಲಕ ಕಾರಣಕ್ಕೆ ಮನಸೋ ಇಚ್ಛೆ ಹಲ್ಲೆ ಮಾಡಿರುವ ಘಟನೆವೊಂದು ವರದಿಯಾಗಿದೆ. ಸಂತ್ರಸ್ತ ಮಹಿಳೆಯ ಮಗು, ಆರೋಪಿಯ ಮಗನ ಜೊತೆ ಆಟವಾಡಲು ನಿರಾಕರಿಸಿದೆ ಎಂಬ ಸಣ್ಣ ವಿಚಾರಕ್ಕೆ ಜಗಳ ಉಂಟಾಗಿದೆ. ಕ್ಷುಲ್ಲಕ ಕಾರಣಕ್ಕಾಗಿಯೇ ಮಹಿಳೆಯ ಮೇಲೆ ಆ ವ್ಯಕ್ತಿ ಸಾರ್ವಜನಿಕವಾಗಿ ಅತ್ಯಂತ ಕ್ರೂರವಾಗಿ ಹಲ್ಲೆ ಮಾಡಿರುವ ಘಟನೆ ವಿಯೆಟ್ನಾಂನ ಹನೋಯಿಯಲ್ಲಿ ನಡೆದಿದೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ವ್ಯಕ್ತಿಯ ನಡೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಯೆಟ್ನಾಂನ ಹನೋಯ್‌ನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಆರೋಪಿಯನ್ನು ಡ್ಯಾಂಗ್ ಚಿ ಥಾನ್ ಎಂದು ಗುರುತಿಸಲಾಗಿದೆ. ಸಂತ್ರಸ್ತ ಮಹಿಳೆಯ ಮಗು ಆರೋಪಿಯ ಮಗನ ಜೊತೆ ಆಟ ವಾಡಲು ನಿರಾಕರಣೆ ಮಾಡಿತ್ತು.. ಇದೇ ವಿಷಯವಾಗಿ ಇಬ್ಬರ ನಡುವೆ ಜಗಳ ಉಂಟಾಗಿದೆ. ಆತ ತನ್ನ ಮಗನಿಗೆ ಮಹಿಳೆ ನೋವುಂಟು ಮಾಡಿದ್ದಾಳೆ ಎಂದು ಆರೋಪ ಮಾಡಿ ಮಹಿಳೆಗೆ ಸರಿಯಾಗಿ ಹಿಂಸಿಸಿದ್ದಾನೆ. ಸೇರಿದ್ದ ಜನರ ಮುಂದೆಯೇ ಮಹಿಳೆಯನ್ನು ಆತ ಹಲವು ಬಾರಿ ಹೊಡೆದು ಒದೆಯುವುದನ್ನು ವಿಡಿಯೊದಲ್ಲಿ ನೋಡಬಹುದು.
