ಉದಯವಾಹಿನಿ, ಹರ್ಗೀಸಾ: ಆಫ್ರಿಕಾ ಖಂಡದ ಸೋಮಾಲಿಲ್ಯಾಂಡ್ ಪ್ರದೇಶವನ್ನು ಸ್ವತಂತ್ರ ಮತ್ತು ಸಾರ್ವಭೌಮ ರಾಷ್ಟ್ರವೆಂದು ಇಸ್ರೇಲ್ ಅಧಿಕೃತವಾಗಿ ಘೋಷಿಸಿದೆ. ಸೋಮಾಲಿಲ್ಯಾಂಡ್‍ಗೆ ರಾಜತಾಂತ್ರಿಕ ಮಾನ್ಯತೆ ನೀಡಿದ ವಿಶ್ವದ ಮೊದಲ ರಾಷ್ಟ್ರ ಎಂಬ ಐತಿಹಾಸಿಕ ದಾಖಲೆಗೆ ಇಸ್ರೇಲ್ ಪಾತ್ರವಾಗಿದೆ. ಡಿ.25ರಂದು ನಡೆದ ವರ್ಚುವಲ್ ಸಭೆಯಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಸೋಮಾಲಿಲ್ಯಾಂಡ್ ಅಧ್ಯಕ್ಷ ಅಬ್ದಿರಹಮಾನ್ ಮೊಹಮ್ಮದ್ ಅಬ್ದುಲ್ಲಾಹಿ ಅವರು ಪರಸ್ಪರ ಶೇಕ್ ಹ್ಯಾಂಡ್ ಮಾಡುವ ಮೂಲಕ ಈ ಐತಿಹಾಸಿಕ ಮೈತ್ರಿಗೆ ಸಾಕ್ಷಿಯಾದರು. ಇಸ್ರೇಲ್ ಮಾನ್ಯತೆ ಘೋಷಿಸುತ್ತಿದ್ದಂತೆ ಡೊನಾಲ್ಡ್ ಟ್ರಂಪ್ ಸೋಮಾಲಿಲ್ಯಾಂಡ್‍ಗೆ ಅಮೆರಿಕದ ಮಾನ್ಯತೆಯನ್ನು ವಿರೋಧಿಸಿದೆ. ಆಫ್ರಿಕನ್ ಯೂನಿಯನ್ ಮತ್ತು ಟರ್ಕಿ ಜಾಗತಿಕವಾಗಿ ಕಾನೂನು ಕಳವಳ ಉಲ್ಲೇಖಿಸಿ ಈ ಕ್ರಮವನ್ನು ತಿರಸ್ಕರಿಸಿವೆ.

ಸೊಮಾಲಿಲ್ಯಾಂಡ್ 1991ರಲ್ಲಿ ಸೊಮಾಲಿಯಾ ಬಿಕ್ಕಟ್ಟಿನ ವೇಳೆ ಪ್ರತ್ಯೇಕಗೊಂಡ ಪ್ರದೇಶ. ಇದು ಗಲ್ಫ್ ಪ್ರದೇಶದ ಕೆಳಗೆ ಇದೆ. ಗಲ್ಫ್ ಪ್ರದೇಶಕ್ಕೂ ಸೊಮಾಲಿಲ್ಯಾಂಡ್​ಗೂ ನಡುವೆ ಗಲ್ಫ್ ಆಫ್ ಏಡನ್ ಬರುತ್ತದೆ. ಇದು ಬಹಳ ಕಿರಿದಾದ ಸಮುದ್ರ ಮಾರ್ಗವಾಗಿದೆ. ನಿತ್ಯವೂ ನೂರಾರು ಹಡಗುಗಳು ಇಲ್ಲಿ ಹಾದು ಹೋಗುತ್ತವೆ. ಜಾಗತಿಕ ವ್ಯಾಪಾರ ವಹಿವಾಟು ಸುಗಮವಾಗಿ ನಡೆಯಲು ಈ ಮಾರ್ಗ ಸುರಕ್ಷಿತವಾಗಿರಬೇಕಾಗುತ್ತದೆ.

Leave a Reply

Your email address will not be published. Required fields are marked *

error: Content is protected !!