ಉದಯವಾಹಿನಿ, ಭಾರತದ ಪ್ರತಿಯೊಂದು ನಗರಗಳು ತಮ್ಮ ತಮ್ಮ ವೈವಿಧ್ಯಮಯ ತಿನಿಸುಗಳಿಗೆ ಹೆಸರುವಾಸಿಯಾಗಿವೆ. ಇವು ಕೇವಲ ಆಹಾರಗಳಲ್ಲ ತಿನಿಸುಗಳಲ್ಲ ಆ ಸ್ಥಳದ ಕಥೆಯನ್ನು, ಇತಿಹಾಸವನ್ನು ಉಣಬಡಿಸುತ್ತವೆ. ಪ್ರತಿಯೊಂದು ನಗರ, ಪ್ರತಿಯೊಂದು ಬೀದಿ ಮೂಲೆ ಮತ್ತು ಪ್ರತಿಯೊಂದು ಪ್ರದೇಶವು ದೇಶದ ವಿಶಾಲವಾದ ಐತಿಹಾಸಿಕ ಅಂಶವನ್ನು ಸೇರಿಸುತ್ತದೆ. ಇನ್ನು ಈ ನಗರಗಳು ರುಚಿಕರ, ಸುವಾಸನೆ ಭರಿತ ಸ್ಟ್ರೀಟ್ ಫುಡ್‌ಗಳಿಗೂ ಖ್ಯಾತಿ ಪಡೆದುಕೊಂಡಿದ್ದು ಈ ನಗರಗಳು ಹಾಗೂ ಅಲ್ಲಿನ ಬೀದಿ ಬದಿಯ ಆಹಾರಗಳ ಬಗ್ಗೆ ತಿಳಿಯೋಣ
ದೆಹಲಿಯಲ್ಲಿ ಊಟ ತಿಂಡಿ ಎಂಬುದು ಕೇವಲ ಆಹಾರವಲ್ಲ ಇದು ಒಂದು ಗುರುತಾಗಿದೆ. ಜಾಮಾ ಮಸೀದಿಯ ಗಲ್ಲಿಗಳಲ್ಲಿರುವ ಮೊಘಲೈ ಕಬಾಬ್‌ಗಳಿಂದ ಹಿಡಿದು, ಬಟರ್ ಚಿಕನ್‌ವರೆಗೆ ರಾಜಧಾನಿ ತನ್ನ ಸುವಾಸಿತ ಪರಿಮಳದ ಖ್ಯಾತಿ ಪಸರಿಸಿದೆ. ಚಾಂದನಿ ಚೌಕ್ ಪರಾಠ, ಕನ್ನಾಟ್ ಪ್ಲೇಸ್‌ನ ಚೋಲೆ ಭಟುರೆ ಹೀಗೆ ದೆಹಲಿ ವೈವಿಧ್ಯಮಯ ಖಾದ್ಯಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿರುವ ಮೊಘಲರು, ಪಂಜಾಬಿಗಳು ಪಾಕವಿಧಾನಗಳನ್ನು ಪರಂಪರೆಯಾಗಿ ಪರಿವರ್ತಿಸಿದ ವಲಸಿಗರಾಗಿದ್ದಾರೆ. ಮೋತಿ ಮಹಲ್‌ನಲ್ಲಿ ಬಟರ್ ಚಿಕನ್, ಹಳೆಯ ದೆಹಲಿಯಲ್ಲಿ ದೌಲತ್ ಕಿ ಚಾಟ್, ಲಜಪತ್ ನಗರದಲ್ಲಿ ಮೊಮೊಗಳು ಮತ್ತು ಕರೋಲ್ ಬಾಗ್‌ನಲ್ಲಿ ಕುಲ್ಫಿ ಫಲೂಡಾದ ರುಚಿ ನೋಡಲೇಬೇಕು.
ದೆಹಲಿಯಿಂದ ಕೆಲವು ಗಂಟೆಗಳ ದೂರದಲ್ಲಿರುವ ಅಮೃತಸರ್ ಕೂಡ ವೈವಿಧ್ಯಮಯ ತಿನಿಸುಗಳಿಗೆ ಖ್ಯಾತಿ ಪಡೆದುಕೊಂಡಿದೆ. ಪ್ರತಿದಿನ ಸಾವಿರಾರು ಜನರು ಊಟ ಮಾಡುವ ಗೋಲ್ಡನ್ ಟೆಂಪಲ್‌ನ ಲಂಗರ್, ನಗರದ ಒಗ್ಗಟ್ಟಿನ ಮನೋಭಾವವನ್ನು ಸೆರೆಹಿಡಿಯುತ್ತದೆ.
ಬೀದಿಗಳಲ್ಲಿ ಹೊಗೆಯಾಡುವ ತಂದೂರಿ ಮೀನು, ಸರ್ಸೋನ್ ದಾ ಸಾಗ್‌ನೊಂದಿಗೆ ಮಕ್ಕಿ ಡಿ ರೋಟಿ ಮತ್ತು ತುಪ್ಪದಲ್ಲಿ ತೊಟ್ಟಿಕ್ಕುವ ಜಿಲೇಬಿಗಳು ಹೀಗೆ ಅಮೃತ್‌ಸರ್ ನಾಲಗೆಯ ಚಪಲವನ್ನು ತೀರಿಸುತ್ತದೆ. ಗೋಲ್ಡನ್ ಟೆಂಪಲ್‌ನಲ್ಲಿ ಲಂಗರ್, ಅಮೃತಸರಿ ಕುಲ್ಚಾ, ತಂದೂರಿ ಮೀನು ಮತ್ತು ಅಹುಜಾ ಮಿಲ್ಕ್ ಭಂಡಾರ್‌ನಲ್ಲಿ ಕೆನೆ ಲಸ್ಸಿಯ ಸವಿ ನೋಡಲೇಬೇಕು. ಪುಚ್ಕಾಗಳು, ಕೋಶಾ ಮಾಂಗ್ಶೋ ಗ್ರೇವಿ ಹೀಗೆ ಕೋಲ್ಕತ್ತಾದ ಆಹಾರಗಳು ಭಾವನಾತ್ಮಕ, ಸಾಂಸ್ಕೃತಿಕ ಪ್ರತಿಬಿಂಬ ಎಂದೆನಿಸಿದೆ.
ಸಾಸಿವೆ ಎಣ್ಣೆಯ ಸುವಾಸನೆ, ಮಿಶ್ತಿ ದೋಯಿ ಮಾಧುರ್ಯ, ವಸಾಹತು ಶಾಹಿ ಬೇಕರಿಗಳಲ್ಲಿರುವ ತಿಂಡಿ ತಿನಿಸುಗಳು ಇಲ್ಲಿ ಬಂದವರಿಗೆ ಹಬ್ಬದೂಟವನ್ನೂ ಉಣಬಡಿಸುತ್ತದೆ. ನಿಜಾಮ್‌ನ ಕಥಿ ರೋಲ್ಸ್, ಗೋಲ್ಬರಿಯ ರಸಗುಲ್ಲಾ, ಮಿಶ್ತಿ ದೋಯಿ ಮತ್ತು ಕೋಶಾ ಮಾಂಗ್ಶೋದ ಸವಿಯನ್ನು ಯಾರೂ ಕೂಡ ಸವಿಯಲೇಬೇಕು.
