ಉದಯವಾಹಿನಿ, ಬೆಂಗಳೂರು: ಹೊಸ ವರ್ಷಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಹೀಗಾಗಿ ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಸಿಲಿಕಾನ್ ಸಿಟಿಯಲ್ಲಿ ಹೊಸ ವರ್ಷಾಚರಣೆಗೆ 10 ಲಕ್ಷ ಮಂದಿ ಭಾಗಿಯಾಗುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ನಗರದ ಪ್ರಮುಖ ಸ್ಥಳಗಳಾದ ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್, ಎಂ.ಜಿ.ರೋಡ್, ಇಂದಿರಾ ನಗರ, ನೀಲಾದ್ರಿ ರೋಡ್, ಹೆಚ್‌ಎಸ್‌ಆರ್ ಲೇಔಟ್, ಕೋರಮಂಗಲ, ಬಾಣಸವಾಡಿ ಭಾಗದಲ್ಲಿ ಲಕ್ಷ ಲಕ್ಷ ಮಂದಿ ಸೇರಿ ಹೊಸ ವರ್ಷವನ್ನು ಬರಮಾಡಿಕೊಳ್ಳುತ್ತಾರೆ. ಈ ಹಿನ್ನೆಲೆ ಪೊಲೀಸರು ಮುಂಜಾಗೃತ ಕ್ರಮವಾಗಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ದೊಡ್ಡಮಟ್ಟದಲ್ಲಿ ಭದ್ರತೆ ಮಾಡಿಕೊಳ್ಳುತ್ತಿದ್ದಾರೆ.

ಅಕ್ರಮ ಚಟುವಟಿಕೆ, ಗಲಾಟೆ, ಗೂಂಡಾಗಿರಿ, ಮದ್ಯಪಾನ ಮಾಡಿ, ಸಾರ್ವಜನಿಕವಾಗಿ ಅಶಾಂತಿ ಸೃಷ್ಟಿಸುವವರ ಮೇಲೆ ಕಾನೂನು ಕ್ರಮ
ಸಾರ್ವಜನಿಕ ಸ್ಥಳಗಳಲ್ಲಿ ಅಶ್ಲೀಲ ವರ್ತನೆ, ಶಬ್ದ ಮಾಲಿನ್ಯ, ಅಪಾಯಕಾರಿ ಸ್ಟಂಟ್, ಅಕ್ರಮ ಪಾರ್ಟಿ ಮಾಡುವಂತಿಲ್ಲ.
ಹೋಟೆಲ್, ಪಬ್, ಕ್ಲಬ್, ರೆಸಾರ್ಟ್‌ಗಳಿಗೆ ನಿಗದಿತ ಸಮಯದ ಮಿತಿ ವಿಧಿಸಲಾಗಿದೆ.
ಡಿಜೆ, ಲೌಡ್‌ಸ್ಪೀಕರ್ ಬಳಕೆಗೆ ಅನುಮತಿ ಹಾಗೂ ಸಮಯ ಮಿತಿ ಕಡ್ಡಾಯ.
ಮದ್ಯಪಾನ ಮಾಡಿ, ವಾಹನ ಚಾಲನೆ ಮಾಡುವವರ ವಿರುದ್ಧ ಕಠಿಣ ದಂಡ ಹಾಗೂ ಪ್ರಕರಣ ದಾಖಲು
ಮಹಿಳೆಯರ ಸುರಕ್ಷತೆಗೆ ವಿಶೇಷ ಗಮನ ನೀಡಿ ಪೆಟ್ರೋಲಿಂಗ್ ಹೆಚ್ಚಳ
CCTV, ಡ್ರೋನ್, ಇತರೆ ತಾಂತ್ರಿಕ ಸಾಧನಗಳ ಮೂಲಕ ನಿಗಾ
ಯಾವುದೇ ಅಹಿತಕರ ಘಟನೆ ನಡೆದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲು ಸಾರ್ವಜನಿಕರಿಗೆ ಸೂಚನೆ.
ಭದ್ರತೆಗಾಗಿ 20,000 ಪೊಲೀಸರ ನಿಯೋಜನೆ

ಫೋಲಿಸ್ ಕಂಟ್ರೋಲ್ ರೂಂ – 4
ವಾಚ್ ಟವರ್‌ಗಳು – 78
ಮಹಿಳಾ ಸಹಾಯ ಕೇಂದ್ರ – 164
ಅಂಬ್ಯುಲೆನ್ಸ್‌ಗಳು – 46
ಅಗ್ನಿಶಾಮಕ ವಾಹನಗಳು – 55
ಅಗ್ನಿಶಾಮಕ ಸಿಬ್ಬಂದಿ – 37
ಸಿವಿಲ್ ಪೊಲೀಸ್ – 10,122
ಸಂಚಾರ ಪೊಲೀಸ್ – 2,436
ಕ್ವಿಕ್ ಆಕ್ಷನ್ ಪಡೆಗಳು (88 ಪ್ಲಟೂನ್ ) – 1,936
ಸಿ.ಎ.ಆರ್ ಪಡೆಗಳು (21 ಪ್ಲಟೂನ್ ) – 168
ಹೋಮ್ ಗಾರ್ಡ್‌ಗಳು – 3,341
ಸಿವಿಲ್ ಡಿಫೆನ್ಸ್ – 916
ಟ್ರಾಫಿಕ್ ವಾರ್ಡನ್ – 400
ಸಿ-ಸ್ವಾಟ್ – 4
ಕಮಾಂಡೋ ಟೀಂ – 3
ವಾಟರ್ ಜೆಟ್ – 2
ಕುದುರೆ – 246
ಶ್ವಾನ ದಳ – 249
ಸಂಭ್ರಮಾಚರಣೆ ಬಳಿಕ ಕುಡಿದು ವಾಹನ ಚಾಲನೆ ಹಾಗೂ ವಿಲ್ಹಿಂಗ್ ಮಾಡುತ್ತಾರೆ. ಕುಡಿದ ಅಮಲಿನಲ್ಲಿ ವಾಹನ ಚಾಲನೆ ಮಾಡುವುದರಿಂದ ಅಪಘಾತಗಳಾಗಿ ಸಾವು ನೋವುಗಳಾಗುತ್ತವೆ. ಹೀಗಾಗಿ 2025 ಡಿ.31ರ ರಾತ್ರಿ 11 ಗಂಟೆಯಿಂದ 2026 ಜ.1ರ ಬೆಳಿಗ್ಗೆ 6ರವರೆಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ಮೇಲ್ಸೇತುವೆಯನ್ನು ಹೊರತುಪಡಿಸಿ, ಬೆಂಗಳೂರು ನಗರದ 50ಕ್ಕೂ ಹೆಚ್ಚು ಮೇಲ್ಸೇತುವೆಗಳನ್ನು ಬಂದ್ ಮಾಡಲಾಗಿರುತ್ತದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲ್ಸೇತುವೆ ಮೇಲೆ ಬೈಕ್‌ಗಳ ಸಂಚಾರ ನಿಷೇಧಿಸಲಾಗಿರುತ್ತದೆ.

Leave a Reply

Your email address will not be published. Required fields are marked *

error: Content is protected !!