ಉದಯವಾಹಿನಿ, ಮುಂಬೈ: ಮಲ್ಟಿ ಕಮಾಡಿಟಿ ಎಕ್ಸ್ ಚೇಂಜ್‌ನಲ್ಲಿ ಬೆಳ್ಳಿಯ (Silver) ಫ್ಯೂಚರ್‌ಗಳು ಮೊದಲ ಬಾರಿಗೆ ಪ್ರತಿ ಕೆಜಿಗೆ 2.50 ಲಕ್ಷ ರೂ. ತಲುಪಿ ನಂತರ ದಿಢೀರ್ 21 ಸಾವಿರ ರೂ. ಇಳಿಕೆಯಾಗಿದೆ.ಮಾರ್ಚ್ 2026ರ ವಿತರಣೆಗೆ ನಿಗದಿಯಾಗಿದ್ದ ಈ ಫ್ಯೂಚರ್‌ಗಳ ಬೆಲೆ ಮಾರ್ಕೆಟ್ ತೆರೆದ ಆರಂಭದಲ್ಲೇ 2,54,174 ರೂ.ಗೆ ಏರಿಕೆಯಾಗಿತ್ತು. ನಂತರ ಇಳಿಕೆಯಾಗುತ್ತಾ ಸಾಗಿ ಮಧ್ಯಾಹ್ನ 2:41ರ ವೇಳೆಗೆ 2,33,880 ರೂ. ತಲುಪಿತ್ತು.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಳ್ಳಿ ಬೆಲೆಗಳು ಮೊದಲ ಬಾರಿಗೆ ಪ್ರತಿ ಔನ್ಸ್‌ಗೆ 80 ಡಾಲರ್ ಏರಿಕೆಯಾಗಿತ್ತು. ಭಾನುವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ನಡುವೆ ಸಂಭಾವ್ಯ ಶಾಂತಿ ಒಪ್ಪಂದದ ಕುರಿತು ನಡೆಸಿದ ಮಾತುಕತೆ ಫಲಪ್ರದವಾಗಿದೆ ಎಂಬ ವರದಿಯ ಬಳಿಕ ಬೆಲೆ 5 ಡಾಲರ್ ಇಳಿಕೆಯಾಯಿತು.
