ಉದಯವಾಹಿನಿ, ಬೆಂಗಳೂರು: ಸರ್ಕಾರ ಕರ್ನಾಟಕದ್ದು.. ರೂಲ್ ಕೇರಳದ್ದಾ..!? ಕೋಗಿಲು ಲೇಔಟ್ ಅಕ್ರಮದಲ್ಲಿ ಕೇರಳ ಹಸ್ತಕ್ಷೇಪಕ್ಕೆ ಬಿಜೆಪಿ ಮುಗಿಬಿದ್ದಿದೆ. ವೇಣುಗೋಪಾಲ್ ಮಧ್ಯಪ್ರವೇಶದಿಂದ ರಾಜ್ಯ ಸರ್ಕಾರ ಥಂಡಾ ಹೊಡೆದಿದೆ. ರಾಜ್ಯ ಸರ್ಕಾರ ಮಾತ್ರ ಅಕ್ರಮ ನಿಜ.. ಆದರೆ ಪುನರ್ವಸತಿ ಕಲ್ಪಿಸುತ್ತೇವೆ ಅಂತಾ ಹೊಸ ರಾಗ ತೆಗೆದಿದೆ. ಹಾಗಾದ್ರೆ ಅಕ್ರಮದಾರರಿಗೆಲ್ಲರಿಗೂ ಪುನರ್ವಸತಿ ಭಾಗ್ಯನಾ..!? ಡಿಟೇಲ್ ಸ್ಟೋರಿ ಇಲ್ಲಿದೆ ನೋಡಿ.
ಆನೆ ತುಳಿದು ಸತ್ತರೂ ಪರಿಹಾರ.. ಮನೆ ಕುಸಿತಕ್ಕೂ ಸೂರು ವ್ಯವಸ್ಥೆ.. ಮಾತೆತ್ತಿದ್ರೆ ಮಾನವೀಯತೆಯ ಅಸ್ತ್ರ..! ಕೇರಳದಲ್ಲಿ ಏನೇ ಆದರೂ ಕರ್ನಾಟಕ ಹೆಲ್ಪ್ ಮಾಡಬೇಕು.. ಕೇರಳದವರೂ ಏನೇ ಹೇಳಿದರೂ ಅದಕ್ಕೆ ಪರಿಹಾರ ಕೊಡಬೇಕು. ಈಗ ಅಕ್ರಮದಾರರಿಗೆ ಪರ್ಯಾಯ ಸೂರಿನ ಭಾಗ್ಯ. ಇದು ಕರ್ನಾಟಕ ಸರ್ಕಾರದ ಸಕಲ ವ್ಯವಸ್ಥೆಯ ಪರಿ. ಯೆಸ್, ಕೋಗಿಲು ಲೇಔಟ್ ಅಕ್ರಮಕ್ಕೆ ಬೈಯ್ಯಪ್ಪನಹಳ್ಳಿಯಲ್ಲಿ ಪುನರ್ ವಸತಿ ಕಲ್ಪಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಒಂಟಿ ಮನೆ ಸ್ಕೀಂ ಮತ್ತು ರಾಜೀವ್ ಗಾಂಧಿ ವಸತಿ ಯೋಜನೆ ಅಡಿ ಅರ್ಹರಿಗೆ ಪುನರ್ವಸತಿ ಕಲ್ಪಿಸಲು ಪ್ಲ್ಯಾನ್ ಮಾಡಿದೆ. ಯಾವಾಗ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧ್ಯಪ್ರವೇಶ ಮಾಡಿದ್ರೋ ಆಗಲೇ ರಾಜ್ಯ ಸರ್ಕಾರ ಆಲರ್ಟ್ ಆಗಿದೆ. ಅಕ್ರಮ ಎಂದು ತೆರವು ನಡೆಸಿದ ಸರ್ಕಾರವೇ, ಅದೇ ಅಕ್ರಮದಾರರಿಗೆ ಅರ್ಹರ ಹೆಸರಿನಲ್ಲಿ ಪರ್ಯಾಯ ಸೂರಿನ ವ್ಯವಸ್ಥೆಗೆ ಸಿದ್ಧತೆ ನಡೆಸಿದೆ. ನಿನ್ನೆ ಜಮೀರ್, ಇವತ್ತು ಡಿಸಿಎಂ ಸ್ಪಾಟ್ ವಿಸಿಟ್ ಮಾಡಿದ್ದಾರೆ. ಇಬ್ಬರು ಸಿಎಂಗೆ ವರದಿ ಸಲ್ಲಿಸಲಿದ್ರು. ಸಿಎಂ ಸಿದ್ದರಾಮಯ್ಯ ಕಾವೇರಿ ನಿವಾಸದಲ್ಲಿ ಸಭೆ ನಡೆಸಿ ಆರ್ಹರಿಗೆ ಪುನರ್ವಸತಿ ಎಂದು ಘೋಷಣೆ ಮಾಡಿದ್ರು.

Leave a Reply

Your email address will not be published. Required fields are marked *

error: Content is protected !!