ಉದಯವಾಹಿನಿ, ಲಖನೌ : ಟ್ರಾಫಿಕ್ ಜಾಮ್ ಸಂದರ್ಭದಲ್ಲಿ ಮಹಿಳಾ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ದಂಪತಿಯನ್ನು ನಿಂದಿಸಿ ಬೆದರಿಸುತ್ತಿರುವ ವಿಡಿಯೊವೊಂದು ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಉತ್ತರ ಪ್ರದೇಶದಲ್ಲಿ ಡಿಸೆಂಬರ್ 29ರ ಸಂಜೆ ಮೀರತ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಜನನಿಬಿಡ ರಸ್ತೆಯಲ್ಲಿ ಭಾರಿ ಸಂಚಾರ ದಟ್ಟಣೆಯಿಂದಾಗಿ ವಾಹನಗಳು ಸ್ಥಗಿತಗೊಂಡವು.
ವೈರಲ್ ಆಗಿರುವ ವಿಡಿಯೊದಲ್ಲಿ ಮಹಿಳಾ ಅಧಿಕಾರಿ ತಮ್ಮ ಕಾರಿನಿಂದ ಇಳಿದು ಮತ್ತೊಂದು ವಾಹನದ ಪ್ರಯಾಣಿಕರನ್ನು ಸಾರ್ವಜನಿಕರ ಮುಂದೆಯೇ ಕೆಟ್ಟ ಭಾಷೆಯಲ್ಲಿ ಬೈದಿರುವುದು ಕಂಡು ಬಂದಿದೆ. ಪ್ರಯಾಣಿಕರಿಗೆ ನಿಂದನೀಯ ಭಾಷೆಯನ್ನು ಬಳಸಿದ್ದು, ಬೆದರಿಕೆ ಹಾಕಿದ್ದಾರೆ. ಮುಖದ ಮೇಲೆ ಮೂತ್ರ ವಿಸರ್ಜಿಸುತ್ತೇನೆ ಎಂದೂ ಅಸಭ್ಯವಾಗಿ ಮಾತನಾಡಿದ್ದಾರೆ. ಮಾಹಿತಿಯ ಪ್ರಕಾರ, ಸಂಜೆ 7 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಸಂಚಾರ ದಟ್ಟಣೆಯಿಂದಾಗಿ ವಾಹನಗಳು ಒಂದರ ನಂತರ ಒಂದರಂತೆ ಸಿಲುಕಿಕೊಂಡವು. ಐ20 ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಅಧಿಕಾರಿಯು ಜಾಮ್‌ನಲ್ಲಿ ಸಿಲುಕಿಕೊಂಡ ನಂತರ ಕೋಪಗೊಂಡಿದ್ದರು ಎನ್ನಲಾಗಿದೆ.
