ಉದಯವಾಹಿನಿ ಯಾದಗಿರಿ : ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರವು ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು 2,000 ರೂ.ಗಳನ್ನು ನೀಡುವ ಗೃಹಲಕ್ಷ್ಮೀ ಯೋಜನೆಯನ್ನು 2023ರ ಜೂನ್ 06 ರಂದು ಜಾರಿಗೊಳಿಸಲಾಗಿದ್ದು, ಅರ್ಹ ಮಹಿಳಾ ಫಲಾನುಭವಿಗಳು ಇದರ ಸದುಪಯೋಗ ಪಡೆಯುವಂತೆ  ಯಾದಗಿರಿ ಜಿಲ್ಲಾಧಿಕಾರಿ    ಡಾ. ಸುಶೀಲ.ಬಿ ಅವರು ತಿಳಿಸಿದ್ದಾರೆ.ಈ ಗೃಹಲಕ್ಷ್ಮೀ ಯೋಜನೆಯಡಿ ಫಲಾನುಭವಿಗಳನ್ನು ನೋಂದಾಯಿಸಿಕೊಳ್ಳಲು ಈಗಾಗಲೇ ಗ್ರಾಮ ಒನ್, ಕರ್ನಾಟಕ ಒನ್ ಹಾಗೂ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಅವಕಾಶ ಮಾಡಿಕೊಡಲಾಗಿದೆ. ನಗರ  ಪ್ರದೇಶ ವ್ಯಾಪ್ತಿಯಲ್ಲಿ ಈ ಯೋಜನೆಯಡಿ ಫಲಾನುಭವಿಗಳನ್ನು ನೋಂದಾಯಿಸಿಕೊಳ್ಳಲು, ಯಾದಗಿರಿ ಜಿಲ್ಲೆಯ ಯಾದಗಿರಿ ನಗರಸಭೆ ವ್ಯಾಪ್ತಿಯಲ್ಲಿ 5 ಕೇಂದ್ರಗಳು, ಶಹಾಪುರ, ನಗರಸಭೆ ವ್ಯಾಪ್ತಿಯಲ್ಲಿ 5 ಕೇಂದ್ರಗಳು, ಸುರಪುರ ನಗರಸಭೆ ವ್ಯಾಪ್ತಿಯಲ್ಲಿ 5 ಕೇಂದ್ರಗಳು, ಗುರುಮಠಕಲ್ ಪುರಸಭೆವ್ಯಾಪ್ತಿಯಲ್ಲಿ 3 ಕೇಂದ್ರಗಳು, ಕೆಂಭಾವಿ ಪುರಸಭೆ ವ್ಯಾಪ್ತಿಯಲ್ಲಿ 3 ಕೇಂದ್ರಗಳು, ಕಕ್ಕೇರಾ ಪುರಸಭೆ ವ್ಯಾಪ್ತಿಯಲ್ಲಿ 3 ಕೇಂದ್ರಗಳು, ಹುಣಸಗಿ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ 2 ಕೇಂದ್ರಗಳು ಮತ್ತು ಭೀಮರಾಯನಗುಡಿ ಅಧಿಸೂಚಿತ ಪ್ರದೇಶ ಸಮಿತಿ ವ್ಯಾಪ್ತಿಯಲ್ಲಿ 1 ಕೇಂದ್ರವನ್ನು ಸ್ಥಾಪಿಸಲಾಗಿದೆ.
  ನಗರ ಪ್ರದೇಶ ವ್ಯಾಪ್ತಿಯ ಸಾರ್ವಜನಿಕರು ಆಯಾ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ವಾರ್ಡಗಳಲ್ಲಿ ಸ್ಥಾಪಿಸಿದ ಕೇಂದ್ರಗಳಲ್ಲಿ ಈ ಯೋಜನೆಯಡಿ ಫಲಾನುಭವಿಗಳನ್ನು ನೋಂದಾಯಿಸಿಕೊಂಡು ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ಸಹಕಾರ ನೀಡಲು ತಿಳಿಸಿದೆ. ಅರ್ಹ ಮಹಿಳಾ   ಫಲಾನುಭವಿಗಳು ನಗರ ವ್ಯಾಪ್ತಿಯಲ್ಲಿ ಸ್ಥಾಪಿಸಿದ ಕೇಂದ್ರಗಳ ವಿವರಕ್ಕಾಗಿ ಆಯಾ ನಗರ ಸ್ಥಳೀಯ ಸಂಸ್ಥೆಗಳಿಗೆ ಭೇಟಿ ನೀಡಿ ಸದುಪಯೋಗ ಪಡೆದುಕೊಳ್ಳಬೇಕು.ಅರ್ಹ ಫಲಾನುಭವಿಗಳು ಪತಿ ಪತ್ನಿ  ಆಧಾರ್ ಕಾರ್ಡ್,ಯಜಮಾನಿ ಮಹಿಳೆಯ ಪಡಿತರ ಚೀಟಿ ಗಳಲ್ಲಿ ಕುಟುಂಬದ ಯಜಮಾನಿ ಎಂದೂ ನಮೂದಿಸಿರುವ ರೇಶನ್ ಕಾರ್ಡ್  ಪ್ರತಿ ಹೊಂದಿರಬೇಕು. ಈ ಯೋಜನೆಯಡಿ ಅರ್ಜಿ  ಸಲ್ಲಿಕೆಗೂ  ಮುಂಚಿತವಾಗಿ ತಮ್ಮ  ಮೊಬೈಲ್ ಗೆ ಬರುವ ಮಸೇಜ್ ಆಧಾರದಲ್ಲಿ, ಮೇಲೆ ತಿಳಿಸಿದ ಸಂಬಂಧಿಸಿದ ಕ್ಕೇಂದ್ರ ಕ್ಕೆ  ಭೇಟಿ  ನೀಡಬಹುದಾಗಿದ್ದು,ಮೊಬೈಲ್  ಮೆಸೇಜ್ ದಲ್ಲಿ  ತಿಳಿಸುವ ದಿನಾಂಕ, ಸಮಯ,ಕೇಂದ್ರ ಕ್ಕೆ ಮೇಲ್ಕಂಡ ದಾಖಲಾತಿ ಗಳೊಂದಿಗೆ  ಹಾಜರಾಗಿ ಅರ್ಜಿ ಸಲ್ಲಿಸಿ ಮಂಜೂರಾತಿ ಪತ್ರ ಪಡೆಯಬೇಕು. ತದನಂತರ ನಗದು ಸೌಲಭ್ಯವು ಆಧಾರ್ ಜೋಡಣೆಯಾಗಿರುವ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗಲಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!