
ಉದಯವಾಹಿನಿ, ಔರಾದ್ : ರಾಜ್ಯದ ಗಡಿ ಅಂಚಿಗೆ ಕೇವಲ 3 ಕಿ.ಮೀ ಅಂತರದಲ್ಲಿರುವ ಕರ್ನಾಟಕ -ತೆಲಂಗಾಣ ರಸ್ತೆಗಳು ಸಂಪೂರ್ಣ ಹದಗೆಟ್ಟಿದೆ. ರಾಜ್ಯಗಳ ಕೊಂಡಿಯಂತಿರುವ ಈ ರಸ್ತೆಯು ರಾಜ್ಯದ ಮಾನ ಮರ್ಯಾದೆಯನ್ನೆ ಹರಾಜು ಹಾಕುತ್ತಿವೆ. ತೆಲಂಗಾಣದ ಪ್ರಮುಖ ಕೇಂದ್ ಪಿಟ್ಲಂ, ಕಂಗಟಿ, ನಾರಾಯಣಖೇಡ ಹೈದರಾಬಾದ್ ಸೇರಿದಂತೆ ವಿವಿಧ ನಗರಗಳಿಗೆ ಸಂಚರಿಸುವ ವಾಹನ ಚಾಲಕರಂತೂ ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸಬೇಕು. ದ್ವಿಚಕ್ರ ವಾಹನ ಸವಾರರು ಈ ಬದಿಯಿಂದ ಆ ಬದಿಗೆ ಡೊಂಬರಾಟ ನಡೆಸಿ ಸಾಹಸ ತೋರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಇನ್ನೂಂದೆಡೆ ಕರಂಜಿ ಬಿ ಇಂದ ತೆಲಂಗಾಣದ ಜುಕ್ಕಲ, ಬಿಚ್ಕುಂದ, ನಿಜಾಮಾಬಾದ್ ಕಡೆಗೆ ಸಂಪರ್ಕಿಸುವ 3 ಕಿ.ಮೀ ಹದಗೆಟ್ಟ ರಸ್ತೆಯ ಸಂಚಾರದಿಂದ ಭಾರಿ ಸಮಸ್ಯೆ ಎದುರಾಗಿದೆ. ಔರಾದ ಪಟ್ಟಣಕ್ಕೆ ನಿತ್ಯ ಸಾವಿರಾರು ವಾಹನಗಳು ಬರುತ್ತವೆ. ದೊಡ್ಡ ದೊಡ್ಡ ಹೋಂಡಗಳಿಂದ ಕೆಟ್ಟ ರಸ್ತೆಯು ಪ್ರಯಾಣದಿಂದ ಜನ ತೀವ್ರ ಬೇಸತ್ತಿದ್ದಾರೆ. ಚಿಂತಾಕಿಯಿಂದ ನಾಗನಪಲ್ಲಿ ಹೋರವಲಯದ ವರೆಗೆ ರಸ್ತೆ ನಿರ್ಮಾಣ ಮಾಡಿದ್ದು ನಾಗನಪಲ್ಲಿ ಹೋರವಲಯದಿಂದ ಕರ್ನಾಟಕ ಗಡಿ ವರೆಗೆ ರಸ್ತೆ ಅಗೆದು ಬಿಟ್ಟಿದ್ದು ಮಳೆಯಿಂದಾಗಿ ದೂಡ್ಡ ದೊಡ್ಡ ಮರಳಿನ ಲಾರಿಗಳು ಸಿಲುಕುವ ಮೂಲಕ ರಸ್ತೆ ಅಪಾಯ ತಂದೂಡ್ಡಿದೆ. ಇದರಿಂದಾಗಿ ತೆಲಂಗಾಣಕ್ಕೆ ತೆರಳುವ ಕರ್ನಾಟಕದ ಸಾರಿಗೆ ಚಾಲಕರು ಜೀವ ಭಯದಲ್ಲಿ ಚಾಲನೆ ಮಾಡುತಿದ್ದು ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಸಂಭಂಧ ಪಟ್ಟ ಅಧಿಕಾರಿಗಳಿಗೆ ತಿಳಿಸಿದರು ಯಾವುದೇ ಪ್ರಯೋಜನವಾಗುತಿಲ್ಲ ನಿತ್ಯ ಹಂಚಾರ ಹೈರಾಣಾಗುತ್ತಿದೆ ಎಂದು ನಾಗನಪಲ್ಲಿ ಗ್ರಾಮಸ್ಥರು ದೂರಿದ್ದಾರೆ.
