
ಉದಯವಾಹಿನಿ ಕುಶಾಲನಗರ:- ಕುಶಾಲನಗರ ತಾಲೂಕು ವ್ಯಾಪ್ತಿಯ ಹೇರೂರು ಗ್ರಾಮದ ಹಾರಂಗಿ ಹಿನ್ನಿರಿನಲ್ಲಿ ಬಿಳಿ ಗ್ರಾನೈಟ್ ಶಾಸನ. ಬಿಳಿ ಗ್ರಾನೈಟ್ ಕಲ್ಲಿನಿಂದ ಮಾಡಿರುವ ಈ ಶಾಸನ ನಾಲ್ಕು ಅಡಿ ಎತ್ತರ ನಾಲ್ಕು ಅಡಿ ಅಗಲವಿದ್ದು ಬಲಭಾಗ 20 ಸಾಲುಗಳಿಂದ ಮತ್ತು ಎಡಭಾಗ 13 ಸಾಲುಗಳಿಂದ ಹಳೆಯ ಕನ್ನಡ ಪದಗಳನ್ನು ಹೊಂದಿದೆ ಈ ಶಾಸನದ ಅಕ್ಷರಗಳು ಮಾಸಿದ್ದು ಇದರಲ್ಲಿ’ ಹೆರುರ’ಹೇರೂರು ಗ್ರಾಮ ಎತ್ತಿ ಕಟ್ಟಿ ಮತ್ತಿತರ ವಿಷಯಗಳಿಂದ ಕೂಡಿದೆ ಎಂದು ಸಾಸನ ಓದಿದ ಮೈಸೂರು ಅಂಡ್ ಕುರ್ಕ್ ಫ್ರಮ್ ಇನ್ವೆಂಷನ್ ಡಾಕ್ಟರ್ ಭೈರವ ತಿಳಿಸಿರುವುದಾಗಿ ಡಾ ಅರುಣ್ ಕುಮಾರ್ ಹೇಳುತ್ತಾರೆ ಈ ಕಲ್ಲು ಕೆಳಭಾಗದಲ್ಲಿ ಮುರಿದಿದೆ.
ಎಡ ಬಲ ನಿಂತ ಅಪ್ಸರೆಯರು. ಈ ಶಾಸನವಿರುವ ವೀರಗಲ್ಲು ಮೂರು ಪಟ್ಟಿಗಳಿಂದ ಕೂಡಿದ್ದು ಮೊದಲ ಪಟ್ಟಿಯಲ್ಲಿ ಗೋವಿನ ಕರುವಿನ ರಕ್ಷಣೆಗೆ ವೀರ ಬಲ ಭಾಗ ಮತ್ತು ಎಡ ಭಾಗದಲ್ಲಿರುವ ಕುದುರೆ ಮೇಲೆ ಬಂದ ಶತ್ರು ವಿರುದ್ಧ ಬಲಗೈಯಲ್ಲಿ ಬಿಲ್ಲು ಎಡಗೈಯಲ್ಲಿ ಬಾಣ ಹಿಡಿದು ಹೋರಾಟ ಮಾಡುತ್ತಿರುವ ದೃಶ್ಯ ಕಂಡು ಬರುತ್ತದೆ. ಎರಡನೇ ಪಟ್ಟಿಯಲ್ಲಿ ಶತ್ರು ವಿರುದ್ಧ ಹೋರಾಟ ಮಾಡಿ ವೀರಮರಣ ಹೊಂದಿದ ಮೇಲೆ ಸ್ವರ್ಗ ಲೋಕದ ಅಪ್ಸರೆಯರು ಸ್ವರ್ಗಲೋಕಕ್ಕೆ ಕರೆದೊಯ್ಯುವ ದೃಶ್ಯವಿದೆ ಮೂರನೇ ಪಟ್ಟಿಯಲ್ಲಿ ಸ್ವರ್ಗ ಲೋಕದಲ್ಲಿ ಶಿವಲಿಂಗದ ಮುಂದೆ ಧ್ಯಾನಸ್ಥನಾಗಿ ಕುಳಿತಿರುವ ವೀರ ಎಡಭಾಗ ಮತ್ತು ಬಲಭಾಗ ಅಪ್ಸರೆಯರನ್ನು ಕಾಣಬಹುದಾಗಿದೆ ಶಾಸನದ ಮೇಲ್ಭಾಗದಲ್ಲಿ ಸೂರ್ಯ ಮತ್ತು ಚಂದ್ರರ ಚಿನ್ನೆಗಳಿದ್ದು ಈ ವೀರ ಅಜರಾಮರ ಎಂಬುದನ್ನು ತೋರಿಸುತ್ತದೆ ಪಕ್ಕದಲ್ಲಿ ಈ ವೀರನ ಹೆಂಡತಿ ಸತಿ ಸಹಗಮನದ ವೀರ ಮಾಸ್ತಿಗಲ್ಲು ಇದೆ ಮುಂದೆ ಅನೇಕ ಬಲಿಪೀಠಗಳು ಕಂಡುಬರುತ್ತವೆ ಮತ್ತು ಒಂದು ಕಿಲೋಮೀಟರ್ ದೂರದಲ್ಲಿ ಬಿಳಿ ಗ್ರಾನೈಟ್ ಶಿಲೆಯಿಂದ ಗಂಗಾ ಹೊಯ್ಸಳ ವಿಜಯನಗರ ಕಾಲದ ಏಕಕೂಟ ಶೈವ ದೇವಾಲಯ ಕಂಡು ಬರುತ್ತದೆ ಇದು ಮಳೆಗಾಲದಲ್ಲಿ ಸಂಪೂರ್ಣವಾಗಿ ಮುಳುಗಿದ್ದು ಬೇಸಿಗೆ ಕಾಲದಲ್ಲಿ ಕಣ್ಣಿಗೆ ಕಾಣಿಸುತ್ತದೆ ಇದರಲ್ಲಿ ಯಾವುದೇ ಲಿಪಿಗಳು ಕಂಡುಬರುವುದಿಲ್ಲ ಗರ್ಭ ಗ್ರಹದಲ್ಲಿ ಶಿವಲಿಂಗ ಹಾಳಾಗಿದ್ದು ಪಾಣಿಪೀಠ ಮಾತ್ರವೇ ಇದೆ ಮೇಲ್ಭಾಗ ಭುವನೇಶ್ವರಿ ಪದ್ಮದಳದಿಂದ ಕೂಡಿದೆ. ನವರಂಗ ಎರಡು ಕಂಬಗಳನ್ನು ಹೊಂದಿದ್ದು ದ್ವಾರದ ಬಾಗಿಲಿನಲ್ಲಿ ಗಜಲಕ್ಷ್ಮಿಯ ಕೆತ್ತನೆ ಇದೆ ಬಲ ಭಾಗ ಮತ್ತು ಎಡಭಾಗ ಮದನಿಕೆ ವಿಗ್ರಹಗಳು ಕಂಡುಬರುತ್ತವೆ ಜೊತೆಗೆ ಗಣಪತಿ ಶಿಲ್ಪವಿದೆ ಇದು ಸಂಪೂರ್ಣ ಆಳಾಗಿದ್ದು ಗೋಡೆಗಳ ಮೇಲೆ ಬೇರೆ ಯಾವುದೇ ತರಹದ ಶಿಲ್ಪಗಳು ಕಣ್ಣಿಗೆ ಕಾಣಿಸುವುದಿಲ್ಲ.
ಕ್ಷೇತ್ರ ಕಾರ್ಯದಲ್ಲಿ ಡಾಕ್ಟರ್ ಎಚ್ ಆರ್ ಅರುಣ್ ಕುಮಾರ್ ಜೊತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಗನ್ನಾಥ್ ಏರೂರು ಗ್ರಾಮದ ಗಗನ್ ಗೌಡ ಮುಂಡೋಡಿ ದಿಲನ್ ಶಿವು ದಾಸ್ ಹಾಗೂ ರವಿ ಸಹಕರಿಸಿದ್ದರು
