ಉದಯವಾಹಿನಿ, ಮುಂಬೈ: ಭಾರತದ ಮೊದಲ ಬುಲೆಟ್ ಟ್ರೈನ್ ಕಾರಿಡಾರ್ ಯೋಜನೆಯು ಮಹತ್ವದ ಮೈಲುಗಲ್ಲು ಸಾಧಿಸಿದೆ. ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಮೊದಲ ಪರ್ವತ ಸುರಂಗ ಯಶಸ್ವಿಯಾಗಿ ಕೊರೆಯಲಾಗಿದ್ದು, ಈ ಸಾಧನೆಯನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಸುದ್ದಿಗೋಷ್ಠಿಯಲ್ಲಿ ಘೋಷಿಸಿದರು.ಮುಂಬೈ-ಅಹಮದಾಬಾದ್ ಹೈ ಸ್ಪೀಡ್ ರೈಲ್ ಕಾರಿಡಾರ್ 508 ಕಿಲೋಮೀಟರ್ ಉದ್ದವಿದ್ದು, ಇದರಲ್ಲಿ ಒಟ್ಟು 27.4 ಕಿಲೋಮೀಟರ್ ಸುರಂಗಗಳಿವೆ. ಇವುಗಳಲ್ಲಿ 21 ಕಿಲೋಮೀಟರ್ ಭೂಗತ ಸುರಂಗಗಳು ಮತ್ತು 6.4 ಕಿಲೋಮೀಟರ್ ಮೇಲ್ಮೈ ಸುರಂಗಗಳು ಸೇರಿವೆ. ಇದನ್ನೂ ಓದಿ: ದೇಶದ ಮೊದಲ ಬುಲೆಟ್‌ ರೈಲು 2027ರ ಆಗಸ್ಟ್‌ 15 ರಂದು ಸಂಚಾರಯೋಜನೆಯಲ್ಲಿ ಒಟ್ಟು 8 ಪರ್ವತ ಸುರಂಗಗಳಿವೆ. ಮಹಾರಾಷ್ಟ್ರದಲ್ಲಿ 7 (ಒಟ್ಟು 6.05 ಕಿಮೀ) ಮತ್ತು ಗುಜರಾತ್‌ನಲ್ಲಿ ಒಂದು (350 ಮೀಟರ್). ಇದಲ್ಲದೆ ಒಂದು ಸಮುದ್ರದಡಿ ಸುರಂಗವೂ ಇದೆ. ಪಾಲ್ಘರ್‌ನಲ್ಲಿ ಪೂರ್ಣಗೊಂಡ ಮೌಂಟೇನ್ ಟನಲ್ 5 ಸುರಂಗವು 1.48 ಕಿಲೋಮೀಟರ್ ಉದ್ದವಿದ್ದು (ಹುಡ್ ಮತ್ತು ಪೋರ್ಟಲ್‌ಗಳನ್ನು ಹೊರತುಪಡಿಸಿ 1.39 ಕಿಮೀ), ಮಹಾರಾಷ್ಟ್ರದ 7 ಪರ್ವತ ಸುರಂಗಗಳಲ್ಲಿ ಮೊದಲನೆಯದು ಮತ್ತು ಅತಿ ಉದ್ದದ್ದು. ಇದು ವಿರಾರ್ ಮತ್ತು ಬೋಯ್ಸಾರ್ ಬುಲೆಟ್ ಟ್ರೈನ್ ನಿಲ್ದಾಣಗಳ ನಡುವೆ ನಿರ್ಮಾಣವಾಗಿದೆ.ಸಚಿವ ಅಶ್ವಿನಿ ವೈಷ್ಣವ್ ಅವರು ರೈಲ್ ಭವನದಿಂದ ವೀಡಿಯೊ ಕಾನ್ಫರೆನ್ಸ್ ಮೂಲಕ ಈ ಕಾರ್ಯವನ್ನು ನೇರವಾಗಿ ವೀಕ್ಷಿಸಿದರು.

Leave a Reply

Your email address will not be published. Required fields are marked *

error: Content is protected !!