
ಉದಯವಾಹಿನಿ, ಟೊರೊಂಟೊ : ಪೋಷಕರು ಯಾವಾಗಲೂ ತಮ್ಮ ಮಕ್ಕಳಿಗೆ ಉತ್ತಮ, ವಿಶಿಷ್ಟ ಹೆಸರು ಇಡಲು ಬಯಸುತ್ತಾರೆ. ತುಂಬಾ ವಿಭಿನ್ನವಾದ ಹೆಸರನ್ನೇ ಬಹುತೇಕರು ಹುಡುಕುತ್ತಾರೆ. ಮಕ್ಕಳು ಬೆಳೆದಂತೆ ಅವರಿಗೆ ಹೆಸರು ಇಷ್ಟವಾಗಬೇಕೆಂದು ತುಂಬಾ ಹುಡುಕಿ ಇಡುತ್ತಾರೆ. ಆದರೆ ಕೆನಡಾದಲ್ಲಿ ತ್ರಿವಳಿ ಮಕ್ಕಳ ಪೋಷಕರಿಗೆ ಒಂದು ಚಿಂತೆಯಿತ್ತು. ಹೀಗಾಗಿ ಮಕ್ಕಳಿಗೆ ಬಹಳ ಸರಳ ಹೆಸರನ್ನಿಟ್ಟಿದ್ದಾರೆ.
ಹೌದು, ಟೊರೊಂಟೊದಲ್ಲಿ ಹುಟ್ಟಿದ ತ್ರಿವಳಿ ಸಹೋದರರಾದ ಆಂಡ್ರ್ಯೂ ಎ ಮೆಲೋಫ್, ಕ್ವೆಂಟಿನ್ ಬಿ ಮೆಲೋಫ್ ಮತ್ತು ಜೋಯಲ್ ಸಿ ಮೆಲೋಫ್ ಎಂಬ ಮೂವರಿಗೆ ಹೆಸರಿಡಲಾಗಿದೆ. ಹೀಗಾಗಿ ಹೆಸರಿನ ಮಧ್ಯ ಅಕ್ಷರವನ್ನಿಡಲಾಗಿದೆ. ಅವರು ಜನಿಸಿದ ಕ್ರಮಕ್ಕೆ ಅನುಗುಣವಾಗಿ ಎ, ಬಿ ಮತ್ತು ಸಿ ಎಂದು ಹೆಸರಿಡಲಾಯಿತು. ತ್ರಿವಳಿಗಳು ಕೇವಲ 45 ಸೆಕೆಂಡುಗಳ ಅಂತರದಲ್ಲಿ ಜನಿಸಿದ್ದರು. ತ್ರಿವಳಿಗಳ ಪೋಷಕರಾದ ಸುಜೇನ್ ಲಿಯಾನ್ಸ್ ಮತ್ತು ರಿಕ್ ಮೆಲೋಫ್ ಆಸ್ಪತ್ರೆಯ ದಾದಿಯರ ಸಲಹೆಯ ಮೇರೆಗೆ ಈ ಅಸಾಮಾನ್ಯ ಹೆಸರನ್ನು ಆಯ್ಕೆಯನ್ನು ಮಾಡಿದರು. ಗರ್ಭಾವಸ್ಥೆಯಲ್ಲಿ ವೈದ್ಯರು ಅಲ್ಟ್ರಾಸೌಂಡ್‌ಗಳ ಸಮಯದಲ್ಲಿ ಶಿಶುಗಳನ್ನು ABC ಎಂದು ಉಲ್ಲೇಖಿಸುತ್ತಿದ್ದರು. ಹೀಗಾಗಿ ಪೋಷಕರು ಅದಕ್ಕೆ ಒಗ್ಗಿಕೊಂಡರು. ದಾದಿಯರು A, B ಮತ್ತು C ಅನ್ನು ಮಧ್ಯದ ಹೆಸರುಗಳಾಗಿ ಬಳಸಲು ಸೂಚಿಸಿದಾಗ, ಪೋಷಕರು ಹೆಚ್ಚು ಯೋಚಿಸದೆ ಒಪ್ಪಿಕೊಂಡರು. ನಮ್ಮ ಪೋಷಕರು ಒಂದೇ ಬಾರಿಗೆ ಮೂರು ಮಕ್ಕಳನ್ನು ಹೊಂದುವ ಬಗ್ಗೆ ಒತ್ತಡಕ್ಕೊಳಗಾಗಿದ್ದರು. ಆದ್ದರಿಂದ ಅವರು ಹೆಸರಿಡುವ ನಿರ್ಧಾರವನ್ನು ಬೇರೆಯವರಿಗೆ ನೀಡಲು ನಿರ್ಧರಿಸಿದರು. ದಾದಿಯರು ಈ ಹೆಸರಿನ ಕಲ್ಪನೆಯನ್ನು ನೀಡಿದರು. ನಮ್ಮ ಪೋಷಕರು ಅದನ್ನು ಅನುಸರಿಸಿದರು ಎಂದು ಕ್ವೆಂಟಿನ್ ನೆನಪಿಸಿಕೊಂಡಿದ್ದಾರೆ.
