ಉದಯವಾಹಿನಿ , ಅಕ್ರಮವಾಗಿ ಕಾಂಪೌಂಡ್ ನಿರ್ಮಿಸಿದ್ದಾರೆಂದು ಆರೋಪಿಸಿ, ಕಾಂಪೌಂಡ್ ಧ್ವಂಸಗೊಳಿಸಿದ ವಿಚಾರಕ್ಕೆ ಸಂಬಂಧಪಟ್ಟಂತೆ ಯಶ್ ತಾಯಿ ಪುಷ್ಪಾ ಅರುಣ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಹಾಸನದ ವಿದ್ಯಾನಗರದಲ್ಲಿರುವ ನಿವೇಶನದಲ್ಲಿ ನಿರ್ಮಿಸಿದ್ದ ಕಾಂಪೌಂಡ್ ಅಕ್ರಮವಾಗಿ ನಿರ್ಮಾಣ ಮಾಡಲಾಗಿದೆ ಎನ್ನೋ ಆರೋಪವನ್ನ ಯಶ್ ತಾಯಿ ತಳ್ಳಿಹಾಕಿದ್ದಾರೆ. ತೆರವುಗೊಳಿಸಿದವರ ವಿರುದ್ಧ ಹಾಗೂ ಪಿಡಿಓ ನಟರಾಜ್ ವಿರುದ್ಧ ಕೆಂಡಕಾರಿದ್ದಾರೆ.
ಯಾರು ಖಾಲಿ ಸೈಟ್ ಇರುತ್ತೋ ಹುಡುಗರನ್ನ ಬಿಟ್ಟು ಹೀಗೆ ಮಾಡ್ತಿದಾರೆ. ದುಡ್ಡು ಬೇಕು ಅಂತಾ ನಮ್ಮ ಬಳಿ ಡಿಮ್ಯಾಂಡ್ ಮಾಡ್ತಿದಾರೆ. ಕೋರ್ಟ್ ಆರ್ಡರ್ ಎನ್ನುತ್ತಿರುವುದು ಸುಳ್ಳು. ನಾವು ಊರಲ್ಲಿ ಇಲ್ಲದೇ ಇರುವ ಸಮಯ ನೋಡಿ ಈ ಕೆಲಸ ಮಾಡಿದ್ದಾರೆ. ಯಶ್ ಅವ್ರ ಸೈಟ್ ಒಡೆದಾಕಿದ್ದೀನಿ ಅಂತಾ ಹೀರೋ ಆಗೋಕೆ ಹೋಗ್ತಿದಾರೆ. ನಾನು ಕೋರ್ಟ್‌ಗೆ ಹಾಜರಾಗಿಲ್ಲ ಅಂತ ಆರೋಪ ಮಾಡ್ತಿದ್ದಾರೆ. ನಮ್ಮ ಲಾಯರ್ ಹಾಜರಾಗಿದ್ದಾರೆ. ನಮ್ಮ ಪಕ್ಕದ ಸೈಟ್ ಅವ್ರು ಪೊಲೀಸಿನವರು. ಅವರಿಗೂ ಬೆದರಿಕೆ ಹಾಕಿದ್ದಾರೆ ಎಂದು ಪುಷ್ಪಾ ಅರುಣ್ ಕುಮಾರ್ ಆರೋಪಿಸಿದ್ದಾರೆ.
ಪಿಡಿಓ ನಟರಾಜ್ ಅಂತಾ ಇದ್ದಾರೆ. ಇದೆಲ್ಲ ಅವರ ಕುಮ್ಮಕ್ಕಿನಿಂದ ನಡೀತಿದೆ. ನಾವು ಜಾಗಕ್ಕೆ ಟ್ಯಾಕ್ಸ್ ಕಟ್ಟಿದ್ದೀವಿ. ಎಲ್ಲ ದಾಖಲೆ ನನ್ ಕಡೆ ಇದೆ. ಕಾನೂನು ಮುಖಾಂತರ ಎಲ್ಲದಕ್ಕೂ ಉತ್ತರ ಕೊಡ್ತೀನಿ ಎಂದಿದ್ದಾರೆ. ಜೊತೆಗೆ ಅವರ ಮೇಲೆ ಮಾನಹಾನಿ ಮೊಕದ್ದಮೆ ಹಾಕ್ತೀನಿ. ಅವರು ಇದಕ್ಕೆ ಉತ್ತರ ಕೊಡ್ಬೇಕು. ಯಶ್ ಹೆಸರು ಹೇಳಿಕೊಂಡು ಮೈಲೇಜ್ ತಗೋಳೋಕೆ ನೋಡ್ತಿದ್ದಾರೆ. ಕೋರ್ಟ್ ಆರ್ಡರ್ ನಮ್ಮ ಗಮನಕ್ಕೆ ತಂದಿಲ್ಲ. ನಾನು ಕಾನೂನು ಹೋರಾಟ ಮಾಡ್ತೀನಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
