ಉದಯವಾಹಿನಿ, ರುಚಿಯಲ್ಲಿ ಹುಳಿ ಸಿಹಿ ಇರುವ ಈ ಕಿತ್ತಳೆ ಹಣ್ಣುಗಳು ಚಳಿಗಾಲದ ಸಮಯದಲ್ಲಿ ಹೇರಳವಾಗಿ ಕಂಡುಬರುತ್ತದೆ. ಪ್ರಮುಖವಾಗಿ ಸಿಟ್ರಸ್ ಹಣ್ಣುಗಳ ಗುಂಪಿಗೆ ಸೇರಿರುವ ಈ ಹಣ್ಣುಗಳಲ್ಲಿ ವಿಟಮಿನ್ ಸಿ ಹೆಚ್ಚಾಗಿರುವುರ ಜೊತೆಗೆ ವಿಟಮಿನ್ ಬಿ -6, ಫೊಲೇಟ್, ಮೆಗ್ನೀಶಿಯಮ್, ಮ್ಯಾಂಗನೀಸ್, ಸೆಲೆನಿಯಮ್ ದಂತಹ ಪ್ರಮುಖ ಖನಿಜಾಂಶಗಳು ಕಂಡು ಬರುವುದರಿಂದ ಮನುಷ್ಯನ ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ತಜ್ಞರು ಕೂಡ ಸಲಹೆ ನೀಡುತ್ತಾರೆ. ಪ್ರಮುಖವಾಗಿ ಈ ಹಣ್ಣನ್ನು ನಿಯಮಿತವಾಗಿ ತನ್ನುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚಾಗುವುದರ ಜೊತೆಗೆ ಹೃದಯಾಘಾತ ಮತ್ತು ಇತರ ಹೃದಯ ಸಂಬಂಧಿ ಕಾಯಿಲೆಗಳು ಕೂಡ ನಮ್ಮಿಂದ ದೂರವಾಗುತ್ತದೆ ಎಂದು ತಜ್ಞರು ಕೂಡ ಸಲಹೆ ನೀಡುತ್ತಾರೆ.
ಸಾಮಾನ್ಯವಾಗಿ ಡಿಸೆಂಬರ್ ನಿಂದ ಹಿಡಿದು, ಮಾರ್ಚ್ ವರೆಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಕಿತ್ತಳೆಹಣ್ಣನ್ನು ಹಾಗೆ ತಿನ್ನಬಹುದು ಹಾಗೂ ಈ ಹಣ್ಣಿನ ಜ್ಯೂಸ್ ಮಾಡಿ ಕೂಡ ಕುಡಿಯಬಹುದು.ಒಟ್ಟಾರೆ ನಮ್ಮ ದೈನಂದಿನ ಆಹಾರಪದ್ಧತಿ ಯಲ್ಲಿ ಸೇರಿಸಿಕೊಂಡರೆ, ದುಪ್ಪಟ್ಟು ಲಾಭ ಪಡೆದುಕೊಳ್ಳಬಹುದು.
ಇತ್ತೀಚಿನ ಸಂಶೋಧನೆಯು 100% ಕಿತ್ತಳೆಹಣ್ಣಿನ ರಸವು ಕೇವಲ ಸಿಹಿ ಪಾನೀಯ ವಲ್ಲ, ಬದಲಾಗಿ, ಮಿತವಾಗಿ ಸೇವಿಸಿದಾಗ ಅದು ಹಲವಾರು ಆರೋಗ್ಯ ಪ್ರಯೋಜ ನಗಳನ್ನು ನೀಡುತ್ತದೆ ಎಂದು ತೋರಿಸಿದೆ. ಆದ್ದರಿಂದ, ನೀವು ಪ್ರಸ್ತುತ ಇದನ್ನು ಕೇವಲ ರಸವೆಂದು ಪರಿಗಣಿಸಿದರೆ, ಅದರ ಹಲವು ಪ್ರಮುಖ ಪ್ರಯೋಜನಗಳ ಬಗ್ಗೆ ನಿಮಗೆ ತಿಳಿದಿಲ್ಲದಿರಬಹುದು. ಕಿತ್ತಳೆ ರಸದಲ್ಲಿರುವ ಉತ್ಕರ್ಷಣ ನಿರೋಧಕಗಳ ಬಗ್ಗೆ ವಿಜ್ಞಾನಿಗಳು ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ.
ನ್ಯೂಟ್ರಿಷನ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಕಿತ್ತಳೆ ರಸ ಸೇವನೆಯು ದೇಹದಲ್ಲಿನ ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತದ ಗುರುತು ಗಳನ್ನು ಕಡಿಮೆ ಮಾಡುತ್ತದೆ. ಕಿತ್ತಳೆ ರಸದಲ್ಲಿರುವ ವಿಟಮಿನ್ ಸಿ ಕ್ಯಾರೊಟಿನಾಯ್ಡ್‌ಗಳು ಮತ್ತು ಫ್ಲೇವನಾಯ್ಡ್ ಗಳು, ಫ್ರೀ ರಾಡಿಕಲ್‌ಗಳನ್ನು ತಟಸ್ಥಗೊಳಿಸಲು ಮತ್ತು ಪ್ರತಿರಕ್ಷಣಾ ವ್ಯವಸ್ಥೆ ಯನ್ನು ಬೆಂಬಲಿಸಲು ಸಹಾಯ ಮಾಡುತ್ತದೆ.
