ಉದಯವಾಹಿನಿ, ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಬಿಸಿ ನೀರಿಗೆ ನಿಂಬೆರಸ ಹಾಕಿ ಕುಡಿಯುವ ಅಭ್ಯಾಸ ಇತ್ತೀಚಿನ ದಿನಗಳಲ್ಲಿ ಬಹಳ ಜನಪ್ರಿಯವಾಗಿದೆ. ತೂಕ ಇಳಿಕೆ, ಡಿಟಾಕ್ಸ್, ರೋಗನಿರೋಧಕ ಶಕ್ತಿ ಹೆಚ್ಚಳ ಎನ್ನುವ ಕಾರಣಗಳಿಂದ ಹಲವರು ಇದನ್ನು ದಿನನಿತ್ಯ ಪಾಲಿಸುತ್ತಿದ್ದಾರೆ. ಆದರೆ ಯಾವುದೇ ಆರೋಗ್ಯಕರ ಅಭ್ಯಾಸವಾಗಲಿ, ಅದರ ಲಾಭಗಳ ಜೊತೆಗೆ ಮಿತಿಗಳು ಹಾಗೂ ಅಡ್ಡಪರಿಣಾಮಗಳನ್ನು ತಿಳಿದುಕೊಳ್ಳುವುದು ಅತ್ಯಂತ ಅಗತ್ಯ. ಈ ನಿಂಬೆರಸ ಎಲ್ಲರಿಗೂ ಒಂದೇ ರೀತಿ ಸೂಟ್ ಆಗಲ್ಲ. ಅದಕ್ಕಾಗಿ ಇದನ್ನು ಸರಿಯಾದ ರೀತಿಯಲ್ಲಿ, ಸರಿಯಾದ ಪ್ರಮಾಣದಲ್ಲಿ ಸೇವಿಸಬೇಕು.
ಜೀರ್ಣಕ್ರಿಯೆಗೆ ನೆರವು: ಬಿಸಿ ನೀರು ಮತ್ತು ನಿಂಬೆರಸ ಸಂಯೋಜನೆ ಜೀರ್ಣಕ್ರಿಯೆಯನ್ನು ಚುರುಕುಗೊಳಿಸಲು ಸಹಕಾರಿ. ಊಟಕ್ಕೂ ಮುನ್ನ ಸೇವಿಸಿದರೆ ಆಹಾರ ಸರಿಯಾಗಿ ಜೀರ್ಣವಾಗಲು ಸಹಾಯ ಮಾಡುತ್ತದೆ.
ತೂಕ ನಿಯಂತ್ರಣದಲ್ಲಿಡಲು ಸಹಕಾರಿ: ನಿಂಬು ಪಾನೀಯ ದೇಹದ ಮೆಟಾಬಾಲಿಸಂ ಹೆಚ್ಚಿಸಲು ನೆರವಾಗುತ್ತದೆ. ನಿಯಮಿತ ವ್ಯಾಯಾಮ, ಉತ್ತಮ ಆಹಾರದ ಜೊತೆಗೆ ಸೇವಿಸಿದರೆ ತೂಕ ನಿಯಂತ್ರಣಕ್ಕೆ ಸಹಾಯವಾಗಬಹುದು.
ಎದೆಯುರಿ ಇರುವವರು ಎಚ್ಚರಿಕೆ ವಹಿಸಬೇಕು: ಆಸಿಡ್ ರಿಪ್ಲೆಕ್ಸ್ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆ ಇರುವವರಿಗೆ ನಿಂಬೆರಸ ಅಸೌಕರ್ಯ ಉಂಟುಮಾಡಬಹುದು. ಇಂಥವರು ವೈದ್ಯರ ಸಲಹೆ ಪಡೆಯುವುದು ಒಳಿತು.
ಹಲ್ಲುಗಳ ಮೇಲೆ ಪರಿಣಾಮ: ನಿಂಬಿನಲ್ಲಿರುವ ಸಿಟ್ರಿಕ್ ಆಮ್ಲ ಹಲ್ಲಿನ ಎನಾಮೆಲ್‌ಗೆ ಹಾನಿ ಮಾಡಬಹುದು. ಸ್ಟ್ರಾ ಬಳಸುವುದು ಹಾಗೂ ಕುಡಿದ ನಂತರ ಬಾಯಿ ತೊಳೆಯುವುದು ಉತ್ತಮ.
. ಅಲರ್ಜಿ ಉಂಟಾಗಬಹುದು: ಕೆಲವರಿಗೆ ನಿಂಬೆ ಹಣ್ಣಿನ ರಸದಿಂದ ಅಲರ್ಜಿ ಉಂಟಾಗಬಹುದು. ಅಲರ್ಜಿ ಉಂಟಾಗುವ ಸಂಭವ ತೀರಾ ಅಪರೂಪ. ಒಂದು ವೇಳೆ ನಿಂಬು ಪಾನೀಯ ಕುಡಿದಾಗ ಶರೀರದಲ್ಲಿ ಏನಾದರು ಅಲರ್ಜಿ ರಿಯಾಕ್ಷನ್ ಉಂಟಾದರೆ ನೀವು ನಿಂಬು ಪಾನೀಯ ಕುಡಿಯಲು ಹೋಗಬೇಡಿ.
ಮಿತಿಯೇ ಮಂತ್ರ: ದಿನಕ್ಕೆ ಒಂದು ಲೋಟಕ್ಕಿಂತ ಹೆಚ್ಚು ಕುಡಿಯಬಾರದು. ಅತಿಯಾದ ಸೇವನೆ ದೇಹದ ಖನಿಜಾಂಶ ಹೀರಿಕೊಳ್ಳುವಿಕೆಗೆ ಅಡ್ಡಿಯಾಗಬಹುದು.

Leave a Reply

Your email address will not be published. Required fields are marked *

error: Content is protected !!