ಉದಯವಾಹಿನಿ, ಕ್ರಿಕೆಟ್ ಲೋಕದ ಅತ್ಯಂತ ಪ್ರತಿಷ್ಠಿತ ‘ಆ್ಯಶಸ್’ ಸರಣಿಯ ಅಂತಿಮ ಹಣಾಹಣಿಗೆ ಸಿಡ್ನಕ್ರಿಕೆಟ್ ಗೌಂಡ್ (SCG) ಸಾಕ್ಷಿಯಾಗುತ್ತಿದೆ. ಆದರೆ, ಈ ಪಂದ್ಯವು ಕೇವಲ ಆಟದ ಕಾರಣಕ್ಕಷ್ಟೇ ಅಲ್ಲದೆ, ಆಸ್ಟ್ರೇಲಿಯಾ ತಂಡವು ಮಾಡಿರುವ ಒಂದು ಐತಿಹಾಸಿಕ ಬದಲಾವಣೆಯಿಂದಾಗಿ ಸುದ್ದಿಯ ಕೇಂದ್ರಬಿಂದುವಾಗಿದೆ.
ಸಾಮಾನ್ಯವಾಗಿ ಸ್ಪಿನ್ ಬೌಲಿಂಗ್‌ಗೆ ಹೆಚ್ಚು ಪೂರಕವಾಗಿರುವ ಸಿಡ್ನಿ ಮೈದಾನದಲ್ಲಿ ಆಸ್ಟ್ರೇಲಿಯಾ ತಂಡವು ಬರೊಬ್ಬರಿ 138 ವರ್ಷಗಳ ಬಳಿಕ ಮೊದಲ ಬಾರಿಗೆ ಯಾವುದೇ ಪ್ರಮುಖ ಸ್ಪಿನ್ನರ್ ಇಲ್ಲದೆ ಕಣಕ್ಕಿಳಿಯುವ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ. ಕಳೆದ ಒಂದು ಶತಮಾನಕ್ಕೂ ಹೆಚ್ಚಿನ ಅವಧಿಯಲ್ಲಿ ಆಸೀಸ್ ಪಡೆ ಸ್ಪಿನ್ನರ್ ಇಲ್ಲದೆ ಸಿಡ್ನಿಯಲ್ಲಿ ಎಂದೂ ಪಂದ್ಯವಾಡಿರಲಿಲ್ಲ.
ಈ ಬಾರಿ ತಂಡವು ಸ್ಪಿನ್ನರ್ ಬದಲಿಗೆ ಆಲ್‌ರೌಂಡರ್ ಬ್ಯೂ ವೆಬ್‌ಸ್ಟರ್ ಅವರಿಗೆ ಅವಕಾಶ ನೀಡಿದ್ದು, ವೇಗದ ಬೌಲಿಂಗ್ ಹಾಗೂ ಆಲ್‌ರೌಂಡ್ ಸಾಮರ್ಥ್ಯದ ಮೇಲೆ ಹೆಚ್ಚು ನಂಬಿಕೆ ಇಟ್ಟಿದೆ. ತಂಡದ ನಾಯಕತ್ವವನ್ನು ಸ್ಟೀವ್ ಸ್ಮಿತ್ ವಹಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾ: ಸ್ಟೀವ್ ಸ್ಮಿತ್ (ನಾಯಕ), ಟ್ರಾವಿಸ್ ಹೆಡ್, ಜೇಕ್ ವೆದರಾಲ್ಡ್, ಮಾರ್ನಸ್ ಲ್ಯಾಬುಶೇನ್, ಉಸ್ಮಾನ್ ಸ್ವಾಜಾ, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಕ್ಯಾಮರೂನ್ ಗ್ರೀನ್, ಬ್ಯೂ ವೆಬ್‌ಸ್ಟರ್, ಮೈಕೆಲ್ ನೇಸರ್, ಮಿಚೆಲ್ ಸ್ಟಾರ್ಕ್, ಸ್ಕಾಟ್ ಬೋಲ್ಯಾಂಡ್. ಇಂಗ್ಲೆಂಡ್: ಝಾಕ್ ಕ್ರಾಲಿ, ಬೆನ್ ಡಕೆಟ್, ಜೇಕಬ್ ಬೆಥೆಲ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜೇಮಿ ಸ್ಮಿತ್ (ವಿಕೆಟ್ ಕೀಪರ್), ವಿಲ್ ಜ್ಯಾಕ್ಸ್, ಬ್ರೆಡನ್ ಕಾರ್ಸ್, ಮ್ಯಾಥ್ಯ ಪಾಟ್ಸ್, ಜೋಶ್ ಟಂಗ್.
