ಉದಯವಾಹಿನಿ, ಕೋಳಿ ಮೊಟ್ಟೆಗಳಲ್ಲಿ ಅನೇಕ ಪೋಷಕಾಂಶಗಳಿವೆ. ಪ್ರೋಟೀನ್, ವಿಟಮಿನ್‌ಗಳು ಹಾಗೂ ಖನಿಜಗಳು ಸಮೃದ್ಧವಾಗಿವೆ. ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡಲು ಹಾಗೂ ಶಕ್ತಿ ತುಂಬಲು ಮೊಟ್ಟೆಗಳನ್ನು ಹೆಚ್ಚು ಸೇವಿಸಲಾಗುತ್ತದೆ. ಮೊಟ್ಟೆಗಳನ್ನು ಸರಿಯಾಗಿ ಸಂಗ್ರಹಿಸದಿದ್ದರೆ, ಅವುಗಳಿಂದ ಲಭಿಸುವ ಲಾಭಕ್ಕಿಂತಲೂ ಹೆಚ್ಚು ಹಾನಿಕಾರಕವಾಗಬಹುದು.
ಮೊಟ್ಟೆಗಳು ಹಾಳಾಗುವುದು ಹೇಗೆೆ?: ಸಾಲ್ಮೊನೆಲ್ಲಾ ಎಂಬ ಬ್ಯಾಕ್ಟೀರಿಯಾ ಮೊಟ್ಟೆ ಹಾಳಾಗಲು ಮುಖ್ಯ ಕಾರಣ. ಈ ಬ್ಯಾಕ್ಟೀರಿಯಾ ವೇಗವಾಗಿ ಬೆಳೆದಂತೆ ಮೊಟ್ಟೆ ಬೇಗ ಹಾಳಾಗುತ್ತದೆ. ಅಂತಹ ಮೊಟ್ಟೆಗಳನ್ನು ಸೇವಿಸುವುದರಿಂದ ಆಹಾರ ವಿಷ, ವಾಂತಿ, ಅತಿಸಾರ ಹಾಗೂ ಜ್ವರದಂತಹ ಸಮಸ್ಯೆಗಳು ಉಂಟಾಗಬಹುದು.

ಕೋಳಿ ಮೊಟ್ಟೆಗಳನ್ನು ಎಷ್ಟು ದಿನ ಇಡಬಹುದು?: ಮೊಟ್ಟೆಗಳನ್ನು ತಾಜಾವಾಗಿಡಲು ಖರೀದಿಸಿದ ದಿನಾಂಕದಿಂದ ಲೆಕ್ಕಹಾಕಬೇಕಾಗುತ್ತದೆ. ಅಂದ್ರೆ, ಹಸಿ ಮೊಟ್ಟೆಗಳನ್ನು ರೆಫ್ರಿಜರೇಟರ್‌ನಲ್ಲಿ 3ರಿಂದ 5 ವಾರಗಳವರೆಗೆ ಸಂಗ್ರಹಿಸಬಹುದು. ಹೆಚ್ಚೆಂದ್ರೆ 5ರಿಂದ 7 ದಿನಗಳವರೆಗೆ ಸಂಗ್ರಹಿಸಬಹುದು. ಇವುಗಳನ್ನು ರೆಫ್ರಿಜರೇಟರ್‌ನಲ್ಲಿಯೂ ಇಡಬಹುದು. ಬೇಯಿಸಿದ ಮೊಟ್ಟೆಗಳನ್ನು ಶೆಲ್ ಇಲ್ಲದೆ 2ರಿಂದ 3 ದಿನಗಳವರೆಗೆ ಸಂಗ್ರಹಿಸಬಹುದು.

ಮೊಟ್ಟೆಗಳನ್ನು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸುವಾಗಲೂ ಅವುಗಳನ್ನು ಪಾತ್ರೆಯಲ್ಲಿ ಇಡುವುದು ಉತ್ತಮ. ಅನೇಕ ಜನರು ಅವುಗಳನ್ನು ರೆಫ್ರಿಜರೇಟರ್ ಬಾಗಿಲಲ್ಲಿ ಇಡುತ್ತಾರೆ, ಈ ರೀತಿ ಮಾಡಬಾರದು. ಮೊಟ್ಟೆಗಳನ್ನು ರೆಫ್ರಿಜರೇಟರ್‌ನ ಒಳಗೆಯೇ ಸಂಗ್ರಹಿಸಬೇಕಾಗುತ್ತದೆ.

 

Leave a Reply

Your email address will not be published. Required fields are marked *

error: Content is protected !!