ಉದಯವಾಹಿನಿ, ಅತೀ ಆರೋಗ್ಯಕರ ಆಹಾರಗಳ ಪಟ್ಟಿಯಲ್ಲಿ ಬಾದಾಮಿ ಅಗ್ರ ಸ್ಥಾನದಲ್ಲಿ ಬಂದು ನಿಲ್ಲುತ್ತದೆ. ಇನ್ನು ಡ್ರೈ ಫ್ರೂಟ್ಸ್ ಗಳನ್ನು ಖರೀದಿಸುವಾಗಲೂ ಕೂಡ ಅಷ್ಟೇ ಬಾದಾಮಿಯನ್ನು ಸ್ವಲ್ಪ ಹೆಚ್ಚಾಗಿ ಖರೀಸುತ್ತೇವೆ. ಬೆಲೆಯಲ್ಲಿ ದುಬಾರಿ ಎನ್ನುವ ಒಂದೇ ಕಾರಣ ಬಿಟ್ಟರೆ, ಇದರಲ್ಲಿ ಮನುಷ್ಯನ ಆರೋಗ್ಯಕ್ಕೆ ಬೇಕಾಗುವ ಎಲ್ಲಾ ಬಗೆಯ ಪೌಷ್ಟಿಕಾಂಶಗಳು ಕೂಡ ಕಂಡು ಬರುತ್ತದೆ. ಪ್ರಮುಖವಾಗಿ ಇದರಲ್ಲಿ ಕಂಡು ಬರುವ ಪ್ರೋಟೀನ್, ವಿಟಮಿನ್ ಇ, ಹೃದಯಕ್ಕೆ ನೆರವಾಗುವ ಮೆಗ್ನೀಸಿಯಮ್ ಹಾಗೂ ಇತರ ಬಗೆಯ ಪೋಷಕಾಂಶ ಗಳು ಮನುಷ್ಯನ ಆರೋಗ್ಯ ವೃದ್ಧಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಆದರೆ ಸಾಮಾನ್ಯ ಪ್ರಶ್ನೆಯೆಂದರೆ ಬಾದಾಮಿಯನ್ನು ಸಿಪ್ಪೆ ಸುಲಿದು ತಿನ್ನುವುದು ಹೆಚ್ಚು ಪ್ರಯೋಜನಕಾರಿಯೇ ಅಥವಾ ಸಿಪ್ಪೆ ಸುಲಿಯದೇ ತಿನ್ನುವುದು ಉತ್ತಮವೇ? ಈ ಬೀಜಗಳನ್ನು ಹೇಗೆ ತಿಂದರೆ ದೇಹದ ತೂಕವನ್ನು ಇಳಿಸಿಕೊಳ್ಳಬಹುದು? ನೋಡೋಣ ಬನ್ನಿ
ಬಾದಾಮಿ ಸಿಪ್ಪೆಯೊಂದಿಗೆ ತಿನ್ನುವುದು ಒಳ್ಳೆಯದಲ್ಲ ಎಂದು ನೀವು ಅಂದು ಕೊಂಡಿದ್ದರೆ ಅದು ತಪ್ಪುಕಲ್ಪನೆ. ಬಾದಾಮಿಯನ್ನು ಸಿಪ್ಪೆಯೊಂದಿಗೆ ಸವಿಯುವುದು ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ. ಆರೋಗ್ಯ ತಜ್ಞರು.ಬಾದಾಮಿ ಬೀಜಗಳು ಉತ್ಕರ್ಷಣ ನಿರೋಧಕಗಳಲ್ಲಿ, ವಿಶೇಷ ವಾಗಿ ಪಾಲಿಫಿನಾಲ್‌ಗಳಲ್ಲಿ ಸಮೃದ್ಧವಾಗಿದೆ. ಪೌಷ್ಟಿಕತಜ್ಞರು ಮತ್ತು ಸಂಶೋಧ ನೆಯ ಪ್ರಕಾರ, ಬಾದಾಮಿಯಲ್ಲಿರುವ ಸುಮಾರು 70% ಉತ್ಕರ್ಷಣ ನಿರೋಧಕ ಗಳು ಇದರ ಮೇಲ್ಮೈ ಸಿಪ್ಪೆಯಲ್ಲಿ ಕಂಡು ಬರುತ್ತದೆಯಂತೆ.
ಈ ಉತ್ಕರ್ಷಣ ನಿರೋಧಕಗಳು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡಲು, ಜೀವಕೋಶಗಳನ್ನು ಹಾನಿಯಿಂದ ರಕ್ಷಿಸಲು ಮತ್ತು ವಯಸ್ಸಾದ ಪ್ರಕ್ರಿಯೆಯನ್ನು ನಿಧಾನಗೊಳಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ಬಾದಾಮಿ ಸಿಪ್ಪೆ ಸುಲಿಯುವುದರಿಂದ ಅನೇಕ ಅಗತ್ಯ ಪೋಷಕಾಂಶಗಳು ನಷ್ಟವಾಗುತ್ತವೆ. TOI ವರದಿಯ ಪ್ರಕಾರ, ಬಾದಾಮಿಯಲ್ಲಿ ಪ್ರೋಟೀನ್, ಫೈಬರ್ ಮತ್ತು ಏಕ-ಅಪ ರ್ಯಾಪ್ತ ಕೊಬ್ಬುಗಳಿವೆ, ಇವೆಲ್ಲವೂ ಹೃದಯ ಮತ್ತು ಮೂಳೆಗಳ ಆರೋಗ್ಯ ವನ್ನು ಬೆಂಬಲಿಸುತ್ತವೆ. ಬಾದಾಮಿ ತಿನ್ನುವುದು ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ತೂಕ ನಿಯಂತ್ರಣವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ನೀವು ಬಾದಾಮಿಯನ್ನು ಹುರಿದ, ಹಸಿ, ನೀರಿನಲ್ಲಿ ನೆನೆಸಿ ತಿನ್ನಬಹುದು ಅಥವಾ ಸಿಹಿ ತಿನಿಸುಗಳು, ಬಿರಿಯಾನಿ, ಸ್ಮೂಥಿಗಳು, ಶೇಕ್‌ಗಳು ಇತ್ಯಾದಿಗಳನ್ನು ಒಳಗೊಂಡಂತೆ ಯಾವುದೇ ಖಾದ್ಯಕ್ಕೆ ಸೇರಿಸಬಹುದು.
ರಾತ್ರಿಯಿಡೀ ನೆನೆಸಿದ ನಂತರ ಬಾದಾಮಿಯನ್ನು ಸೇವಿಸುವುದರಿಂದ ಜೀರ್ಣ ಕ್ರಿಯೆ ಸುಧಾರಿಸುತ್ತದೆ ಮತ್ತು ಪೋಷಕಾಂಶಗಳ ಲಭ್ಯತೆ ಹೆಚ್ಚಾಗುತ್ತದೆ.
ನೀವು ಬಾದಾಮಿಯನ್ನು ಸಿಪ್ಪೆ ಸುಲಿದ ಮತ್ತು ಸಿಪ್ಪೆ ಸುಲಿದ ಎರಡನ್ನೂ ತಿನ್ನಬಹುದು. ಆದಾಗ್ಯೂ, ಅವುಗಳನ್ನು ನೀರಿನಲ್ಲಿ ನೆನೆಸಿ ಸಿಪ್ಪೆ ತೆಗೆದ ನಂತರ ತಿನ್ನುವುದರಿಂದ ಹೆಚ್ಚಿನ ಪ್ರಯೋಜನಗಳಿವೆ. ದೇಹವು ಹೆಚ್ಚಿನ ಪೋಷಕಾಂಶ ಗಳನ್ನು ಪಡೆಯುತ್ತದೆ.
