ಉದಯವಾಹಿನಿ, ಕಾರಕಸ್: ವೆನುಜುವೆಲಾದ ಅಧ್ಯಕ್ಷರಾಗಿದ್ದ ನಿಕೋಲಸ್ ಮಡುರೋ ಸತ್ಯ ಸಾಯಿಬಾಬಾ ಅವರ ಪರಮಭಕ್ತರಾಗಿದ್ದರು. ಹೌದು. ಸುಮಾರು 15 ಸಾವಿರ ಕಿ.ಮೀ ದೂರದಲ್ಲಿದ್ದರೂ ಮಡುರೋ ಎರಡು ಬಾರಿ ಆಂಧ್ರಪ್ರದೇಶದ ಪುಟ್ಟಪರ್ತಿಗೆ ಆಗಮಿಸಿದ್ದರು. ವಿದೇಶಾಂಗ ಸಚಿವರಾಗಿದ್ದ ಅವಧಿಯಲ್ಲಿ 2005 ಮತ್ತು 2012ರಲ್ಲಿ ಮಡುರೋ ಭಾರತಕ್ಕೆ ಆಗಮಿಸಿದ್ದಾಗ ಪತ್ನಿಯೊಂದಿಗೆ ಪುಟ್ಟಪರ್ತಿಗೆ ತೆರಳಿ ಸಾಯಿಬಾಬಾರನ್ನು ಭೇಟಿಯಾಗಿದ್ದರು.

2005ರಲ್ಲಿ ವಿದೇಶಾಂಗ ಸಚಿವರಾಗಿದ್ದ ವೇಳೇ ಅವರು ಭಾರತದ ಜೊತೆ ಮಾತುಕತೆಗೆ ಬಂದಿರಲಿಲ್ಲ. ಆಧ್ಯಾತ್ಮಿಕ ಗುರು ಸಾಯಿಬಾಬಾ ದರ್ಶನ ಪಡೆಯಲು ಭಾರತಕ್ಕೆ ಆಗಮಿಸಿದ್ದರು. ಸಾಯಿಬಾಬಾ ಅವರು ಕಾಲಿಗೆ ನಮಸ್ಕರಿಸಿ ದಂಪತಿ ನೆಲದಲ್ಲಿ ಕುಳಿತು ಭಕ್ತಿಯನ್ನು ಪ್ರದರ್ಶಿಸಿದ್ದರು. ಕ್ರೈಸ್ತರಾಗಿದ್ದ ದಂಪತಿ ಸಾಯಿಬಾಬಾ ಅವರ ಮೇಲಿನ ಪ್ರೇಮದಿಂದ ಹಿಂದೂ (Hindu) ಸಂಪ್ರದಾಯದ ಪಾಲನೆಯನ್ನು ಆರಂಭಿಸಿದ್ದರು. ತಮ್ಮ ಕಚೇರಿಯಲ್ಲಿ ಸೈಮನ್ ಬೊಲಿವರ್, ಚಾವೆಜ್ ಭಾವಚಿತ್ರಗಳ ಜೊತೆ ಸತ್ಯ ಸಾಯಿಬಾಬಾ ಅವರ ದೊಡ್ಡ ಫೋಟೋವನ್ನು ಇರಿಸಿದ್ದರು.ಮಡುರೋ ಅವರ ಪತ್ನಿ ಸಿಲಿಯಾ ಫ್ಲೋರ್ಸ್‌ ಸಾಯಿಬಾಬರ ಪರಮ ಭಕ್ತೆಯಾಗಿದ್ದರು. ಪತ್ನಿಯಿಂದ ಪ್ರಭಾವಿತರಾದ ಮಡುರೋ ನಂತರ ಸಾಯಿಬಾಬಾ ಅವರ ಅನುಯಾಯಿ ಆಗಿ ಬದಲಾಗಿದ್ದರು.ಏಪ್ರಿಲ್ 2011 ರಲ್ಲಿ ಸತ್ಯಸಾಯಿ ಬಾಬಾ ನಿಧನರಾದಾಗ ವಿದೇಶಾಂಗ ಸಚಿವರಾಗಿದ್ದ ಮಡುರೊ ನೇತೃತ್ವದಲ್ಲಿ ರಾಷ್ಟ್ರೀಯ ಸಭೆಯು ಅಧಿಕೃತ ಸಂತಾಪ ನಿರ್ಣಯವನ್ನು ಅಂಗೀಕರಿಸಿತ್ತು.

Leave a Reply

Your email address will not be published. Required fields are marked *

error: Content is protected !!