ಉದಯವಾಹಿನಿ , ಪ್ರಪಂಚದಾದ್ಯಂತ ಅನೇಕ ಹಳ್ಳಿಗಳು ತಮ್ಮದೇ ಆದ ವಿಶಿಷ್ಟ ಸಂಪ್ರದಾಯಗಳು ಮತ್ತು ಪದ್ಧತಿಗಳ ಮೂಲಕ ಗುರುತಿಸಿಕೊಳ್ಳುತ್ತವೆ. ಇಂತಹ ಪದ್ಧತಿಗಳನ್ನು ಆ ಹಳ್ಳಿಯ ಜನರು ತಲೆಮಾರಿನಿಂದ ತಲೆಮಾರಿಗೆ ಕಟ್ಟುನಿಟ್ಟಾಗಿ ಅನುಸರಿಸುತ್ತಾ ಬಂದಿದ್ದಾರೆ. ಕೆಲವೊಂದು ಪದ್ಧತಿಗಳು ಕೇಳಲು ಅಚ್ಚರಿಯಂತೆ ಅನಿಸಬಹುದು. ಅಂಥದ್ದೇ ಒಂದು ಅಪರೂಪದ ಹಳ್ಳಿ ಇದೀಗ ಮತ್ತೆ ಚರ್ಚೆಯಲ್ಲಿದೆ. ಸಾಮಾನ್ಯವಾಗಿ ಬಟ್ಟೆ ಧರಿಸದಿರುವುದನ್ನು ಬಡತನದ ಸಂಕೇತವೆಂದು ಭಾವಿಸಲಾಗುತ್ತದೆ. ಆದರೆ ಈ ಹಳ್ಳಿಯ ಕಥೆ ಸಂಪೂರ್ಣ ಭಿನ್ನವಾಗಿದೆ. ಇಲ್ಲಿ ಬಡತನವಲ್ಲ, ಬದಲಾಗಿ ಶ್ರೀಮಂತಿಕೆಯೇ ಹೆಚ್ಚಾಗಿದೆ. ಎಲ್ಲರಿಗೂ ಸುಂದರವಾದ ಎರಡು ಅಂತಸ್ತಿನ ಮನೆಗಳಿವೆ. ಆದರೂ ಇಲ್ಲಿ ಪುರುಷರು ಮತ್ತು ಮಹಿಳೆಯರು ತಮ್ಮ ಜೀವನದಲ್ಲಿ ಎಂದಿಗೂ ಬಟ್ಟೆ ಧರಿಸುವುದಿಲ್ಲ ಎಂಬುದು ಅಚ್ಚರಿಯ ಸಂಗತಿ.
ಈ ಅಪರೂಪದ ಹಳ್ಳಿ ಇರುವುದು ಇಂಗ್ಲೆಂಡ್‌ನ ಹರ್ಟ್‌ಫೋರ್ಡ್‌ಶೈರ್‌ನಲ್ಲಿ. ಈ ಗ್ರಾಮದ ಹೆಸರು ಸ್ಪೀಲ್‌ಪ್ಲಾಟ್ಸ್ ಸುಮಾರು 90 ವರ್ಷಗಳ ಹಿಂದೆ ಆರಂಭವಾದ ಈ ಪದ್ಧತಿ ಇಂದಿಗೂ ಮುಂದುವರಿದಿದೆ. ಪ್ರಕೃತಿಯೊಂದಿಗಿನ ನಂಟನ್ನು ಕಾಪಾಡಿಕೊಳ್ಳಲು ಮತ್ತು ಸಹಜ ಜೀವನಶೈಲಿಯನ್ನು ಅನುಸರಿಸಲು ಈ ಸಂಪ್ರದಾಯವನ್ನು ಇಲ್ಲಿನ ಜನರು ಅಳವಡಿಸಿಕೊಂಡಿದ್ದಾರೆ.

ಗ್ರಾಮದ ಒಳಗೆ ಪ್ರವೇಶಿಸುವ ಎಲ್ಲರೂ ಬಟ್ಟೆ ಧರಿಸದೇ ಇರಬೇಕೆಂಬುದು ಇಲ್ಲಿನ ಪ್ರಮುಖ ನಿಯಮ. ಇದರಲ್ಲಿ ಸ್ಥಳೀಯರು ಮಾತ್ರವಲ್ಲ, ಪ್ರವಾಸಿಗರೂ ಸೇರಿದ್ದಾರೆ. ಈ ಹಳ್ಳಿಯನ್ನು ನೋಡಲು ಬರುವವರು ಕೂಡ ತಮ್ಮ ಬಟ್ಟೆಗಳನ್ನು ತೆಗೆದ ಬಳಿಕವೇ ಗ್ರಾಮ ಪ್ರವೇಶಿಸಲು ಅವಕಾಶ ದೊರೆಯುತ್ತದೆ. ಇದರಿಂದಾಗಿ ಈ ಗ್ರಾಮ ಜಾಗತಿಕ ಮಟ್ಟದಲ್ಲೂ ಗಮನ ಸೆಳೆದಿದೆ. ಆದರೆ ಈ ನಿಯಮಗಳು ಹಳ್ಳಿಯ ಒಳಗೆ ಮಾತ್ರ ಅನ್ವಯವಾಗುತ್ತವೆ. ಗ್ರಾಮದಿಂದ ಹೊರಗೆ ಹೋಗುವಾಗ ಇಲ್ಲಿನ ನಿವಾಸಿಗಳು ಸಹಜವಾಗಿ ಬಟ್ಟೆ ಧರಿಸಿ ಹೊರಗೆ ಹೋಗುತ್ತಾರೆ. ಅಂದರೆ ಇದು ಯಾವುದೇ ಒತ್ತಾಯವಲ್ಲ, ಬದಲಾಗಿ ಅವರ ಸ್ವಯಂ ಆಯ್ಕೆಯ ಜೀವನಶೈಲಿ.

ಇಲ್ಲಿನ ಜನರು ಈ ಸಂಪ್ರದಾಯವನ್ನು ಅಶ್ಲೀಲತೆ ಅಥವಾ ವಿಚಿತ್ರತನಕ್ಕಾಗಿ ಅನುಸರಿಸುತ್ತಿಲ್ಲ. ಪ್ರಕೃತಿಯೊಂದಿಗೆ ನಿಕಟ ಸಂಪರ್ಕ, ದೇಹದ ಬಗ್ಗೆ ಯಾವುದೇ ಸಂಕೋಚವಿಲ್ಲದ ಬದುಕು ಹಾಗೂ ಮಾನಸಿಕ ಸ್ವಾತಂತ್ರ್ಯವೇ ಇದರ ಹಿಂದಿನ ಮುಖ್ಯ ಉದ್ದೇಶವಾಗಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.

Leave a Reply

Your email address will not be published. Required fields are marked *

error: Content is protected !!