ಉದಯವಾಹಿನಿ , ಚಳಿ ಹೆಚ್ಚುತ್ತಿದ್ದಂತೆ ಬಿಸಿ ಬಿಸಿಯಾಗಿರುವುದು ಏನನ್ನಾದರೂ ಕುಡಿಯಬೇಕು ಎನಿಸಿತ್ತದೆ. ಈ ವೇಳೆ ಮನಸಿಗೆ ಥಟ್ ಅಂತ ಹೊಳೆಯುವುದು ಟೀ, ಕಾಫಿಯಂತವು. ಆದರೆ ಇವುಗಳನ್ನು ಹೆಚ್ಚಾಗಿ ಯಾರು ಕುಡಿಯಲೇಬಾರದು. ಏಕೆಂದರೆ ಇವು ಆರೋಗ್ಯಕ್ಕೆ ಮಾರಕವಾಗಿವೆ. ಫುಲ್ ಚಳಿಯಾಗುತ್ತಿದೆ ಎನ್ನುವಾಗ ಮನೆಯಲ್ಲಿ ಬಿಸಿ ಬಿಸಿ ಸೂಪ್ ಮಾಡಿಕೊಂಡು ಕುಡಿಯುವುದು ಒಳ್ಳೆಯದು. ಇದರಲ್ಲಿ ಯಾವುದು ಸೂಪ್ ಉತ್ತಮ ಎನ್ನುವ ಮಾಹಿತಿ ಇಲ್ಲಿದೆ.
ಸೂಪ್‌ಗಳಲ್ಲಿ ಹಲವಾರು ವಿಧಗಳು ಇವೆ. ವಿಧವಿಧವಾದ ಸೂಪ್‌ಗಳು ರುಚಿ ರುಚಿಯಾಗಿರುತ್ತವೆ. ಚಳಿಗಾಲದಲ್ಲಿ ಯಾವುದನ್ನೂ ಕುಡಿದರೂ ಇನ್ನು ಸೂಪ್ ಕುಡಿಬೇಕು ಅನಿಸುತ್ತದೆ. ಇದರಲ್ಲಿ ಆರೋಗ್ಯಕ್ಕೆ ಒಳ್ಳೆಯದು, ಸುಲಭವಾಗಿ ತಯಾರು ಮಾಡುವಂತ ಸೂಪ್ ಎಂದರೆ ಅದು ಟೊಮೆಟೊ ಸೂಪ್. ಟೊಮೆಟೊ ಸೂಪ್‌ನಲ್ಲಿ ವಿಟಮಿನ್ ಸಿ, ಇ ಹಾಗೂ ಫ್ಲೇವನಾಯ್ಡುಗಳು ಸೇರಿದಂತೆ ಹಲವಾರು ಪೋಷಕಾಂಶಗಳು ಇವೆ. ಈ ಆಕ್ಸಿಡೆಂಟ್ಸ್ ಸೇವನೆಯಿಂದ ಕ್ಯಾನ್ಸರ್, ಹೃದಯ, ಉರಿಯೂತ ಸೇರಿದಂತೆ ಇತರೆ ಕಾಯಿಲೆಗಳನ್ನು ಬರದಂತೆ ತಡೆಯುತ್ತದೆ. ಬಿಸಿಲಿನಲ್ಲಿ ಅತಿಯಾದ ಝಳದಿಂದ ಚರ್ಮವನ್ನ ರಕ್ಷಿಸುತ್ತವೆ. ಸೂಪ್‌ನಲ್ಲಿನ ವಿಟಮಿನ್ ಎ ಕಣ್ಣಿನ ಆರೋಗ್ಯ, ದೃಷ್ಟಿಗೂ ಅತ್ಯುತ್ತಮ. ಇಷ್ಟೇ ಅಲ್ಲದೇ ದೇಹದಲ್ಲಿನ ಮೂಳೆಗಳನ್ನು ಶಕ್ತಿಯುತವಾಗಿ ಮಾಡುತ್ತವೆ.
ಟೊಮೆಟೊದಲ್ಲಿ ಲೈಕೋಪೀನ್ ಅಂಶ ಅಧಿಕ ಇರುವುದರಿಂದ ಕ್ಯಾನ್ಸರ್‌ಗಳಿಂದ ನಮ್ಮನ್ನು ಕಾಪಾಡುತ್ತದೆ. ಸ್ತನ ಕ್ಯಾನ್ಸರ್ ವಿರುದ್ಧವೂ ಇದು ಹೋರಾಡುವುದರಿಂದ ಮಹಿಳೆಯರ ಆರೋಗ್ಯಕ್ಕೂ ಇದು ಒಳ್ಳೆಯದು. ವೈದ್ಯಕೀಯ ಸಂಶೋಧನೆ ಪ್ರಕಾರ ಲೈಕೋಪೀನ್ ಅಂಶ ಹಲವು ವಿಧದ ಕ್ಯಾನ್ಸರ್ ಪೀಡಿತ ಜೀವಕೋಶಗಳನ್ನು ನಾಶ ಮಾಡಿ ರಕ್ಷಿಸುತ್ತದೆ.
