ಉದಯವಾಹಿನಿ , ಪ್ರತಿಯೊಬ್ಬರು ಇಷ್ಟ ಪಡುವ ಹಣ್ಣು ಎಂದರೆ ಅದು ದ್ರಾಕ್ಷಿ. ಮಾರ್ಕೆಟ್‌ನಲ್ಲಿ ಕಂಡರೆ ಸಾಕು ಒಂದನ್ನಾದರೂ ಬಾಯಲ್ಲಿ ಹಾಕ್ಕೊಂಡು ದ್ರಾಕ್ಷಿ ರೇಟ್ ಎಷ್ಟು ಎಂದು ಕೇಳುತ್ತೇವೆ. ಅಷ್ಟೊಂದು ಆಹ್ಲಾದಕರವಾದ ರುಚಿಯನ್ನು ದ್ರಾಕ್ಷಿ ಕೊಡುತ್ತದೆ. ದ್ರಾಕ್ಷಿ ಆರೋಗ್ಯಕ್ಕೆ ಎಷ್ಟು ಉಪಯೋಗ ಇದೆಯೋ ಅಷ್ಟೇ ಅಪಾಯವನ್ನು ತರುವ ಸಾಧ್ಯತೆ ಇದೆ. ಅದರಲ್ಲಿ ಈ ಕಾಯಿಲೆಗಳಿಂದ ಬಳಲುವರು ದ್ರಾಕ್ಷಿನ ತಿನ್ನಬಾರದು. ಸೀಮೀತವಾಗಿ ದ್ರಾಕ್ಷಿ ತಿನ್ನುವುದರಿಂದ ಯಾವುದೇ ಅಪಾಯ ಇರುವುದಿಲ್ಲ. ದ್ರಾಕ್ಷಿಯಲ್ಲಿ ಅಧಿಕ ಮಟ್ಟದಲ್ಲಿ ಸಕ್ಕರೆ ಇರುವುದರಿಂದ ಮಧುಮೇಹಿಗಳಿಗೆ ತೊಂದರೆಯನ್ನುಂಟು ಮಾಡಬಹುದು. ಹೀಗಾಗಿ ಅವರು ದ್ರಾಕ್ಷಿನ ಹೆಚ್ಚಾಗಿ ತಿನ್ನಲೇಬಾರದು. ನೀವು ಮಧುಮೇಹಿಗಳು ಆಗಿದ್ರೆ ಸಕ್ಕರೆ ಮಟ್ಟವನ್ನು ನಿಯಂತ್ರಿಸಬೇಕು ಎಂದುಕೊಂಡಿದ್ರೆ ದ್ರಾಕ್ಷಿನ ತಿನ್ನದೇ ಇರುವುದು ಆರೋಗ್ಯಕ್ಕೆ ಒಳ್ಳೆಯದು.
ದ್ರಾಕ್ಷಿಯಲ್ಲಿ ಕರಗದಂತಹ ನಾರಿನ ಅಂಶ ಇರುತ್ತದೆ. ಇವುಗಳನ್ನು ಅತಿಯಾಗಿ ತಿನ್ನುತ್ತ ಹೋದರೆ ಹೊಟ್ಟೆ ನೋವು ಹಾಗೂ ಅತಿಸಾರ ಬರುವ ಸಾಧ್ಯತೆಯೂ ಇದೆ. ಇದರಲ್ಲಿನ ಸಕ್ಕರೆಯ ಅಂಶವೇ ಅತಿಸಾರಕ್ಕೆ ಕಾರಣವಾಗುತ್ತವೆ. ಇವುಗಳಲ್ಲಿನ ನಾರಿನ ಅಂಶ ಹೊಟ್ಟೆಯಲ್ಲಿ ಕರಗದೇ ಇರುವುದರಿಂದ ಜೀರ್ಣಕ್ರಿಯೆಯ ಸಮಸ್ಯೆಗಳು ತಲೆದೂರುತ್ತವೆ.
ಮೂತ್ರಪಿಂಡದಲ್ಲಿ ಕಲ್ಲು ಅಂದರೆ ಕಿಡ್ನಿ ಸಮಸ್ಯೆ ಇದ್ದವರು ದ್ರಾಕ್ಷಿಯಿಂದ ಅಂತರ ಕಾಪಾಡಿಕೊಳ್ಳಬೇಕು. ಕಪ್ಪು ದ್ರಾಕ್ಷಿನ ಜೂಸ್ ಮಾಡಿ ಕುಡಿಯುವುದರಿಂದ ಪೊಟ್ಯಾಸಿಯಂ ಅಂಶ ದೇಹ ಸೇರುತ್ತದೆ. ಇದು ಕಿಡ್ನಿ ಸಮಸ್ಯೆ ಅಥವಾ ಹೈಪರ್‌ಕೆಲಮಿಯಾ ಇರುವವರಿಗೆ ಹಾನಿ ಉಂಟು ಮಾಡುತ್ತದೆ. ದ್ರಾಕ್ಷಿಯಲ್ಲಿ ಕ್ಯಾಲೋರಿಗಳು ಇರುವುದರಿಂದ ಅತಿಯಾಗಿ ತಿನ್ನುವುದರಿಂದ ದೇಹ ದಪ್ಪವಾಗುತ್ತದೆ. ಹೊಟ್ಟೆಯಲ್ಲಿ ಜೀರ್ಣಕ್ರಿಯೆ ಸಮಸ್ಯೆ, ತೂಕ ಇಳಿಸಿಕೊಳ್ಳಬೇಕು ಎನ್ನುವವರು, ಕಿಡ್ನಿ ಸಮಸ್ಯೆ ಇರುವವರು, ಮಧುಮೇಹಿಗಳು ದ್ರಾಕ್ಷಿಯಿಂದ ಕೊಂಚ ಅಂತರ ಕಾಪಾಡಿಕೊಳ್ಳಿ. ತಿನ್ನಬೇಕು ಎನಿಸಿದರೆ ವೈದ್ಯರ ಸಲಹೆ ಪಡೆಯಬಹುದು. ಹೆಚ್ಚಾಗಿ ತಿನ್ನುವುದಕ್ಕಿಂತ ಮಿತವಾಗಿ ತಿಂದರೆ ಅದು ನಿಮ್ಮ ಆರೋಗ್ಯವನ್ನ ಚೆನ್ನಾಗಿ ಇಡುತ್ತದೆ.
