ಉದಯವಾಹಿನಿ, ಬೆಂಗಳೂರು: ಕರ್ನಾಟಕದ ದೀರ್ಘಾವಧಿ ಮುಖ್ಯಮಂತ್ರಿ ದಾಖಲೆ ಬರೆದು ಸಿದ್ದರಾಮಯ್ಯ ಅವರು ಇವತ್ತಿಗೆ ರೆಕಾರ್ಡ್ ರಾಮಯ್ಯ ಆಗಿದ್ದಾರೆ. ಇದರ ಜೊತೆಗೆ ಇನ್ನೊಂದು ದಾಖಲೆಗೂ ಸಿದ್ಧವಾಗ್ತಿದ್ದಾರೆ ಸಿದ್ದು. ಈ ನಡುವೆ ಪವರ್ ಶೇರ್ ಕಥೆ ಏನು? ಸಿದ್ದರಾಮಯ್ಯ ನೆಕ್ಸ್ಟ್ ಗೇಮ್ ಏನು? ಎಂಬ ಕುತೂಹಲ ಇದೆ.
ವಿರೋಧಿಗಳಿಗೆ ನಾಕ್. ನಾಕ್. ನಾಕ್ ಔಟ್. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ನಾಟ್ ಔಟ್. ದೇವರಾಜು ಅರಸು ಅವರ ದಾಖಲೆ ಅಳಿಸಿ ಇವತ್ತಿಗೆ ಸಿದ್ದರಾಮಯ್ಯ ತಮ್ಮ ಹೆಸರಲ್ಲಿ ದಾಖಲೆ ಬರೆದಿದ್ದಾರೆ. ಕರ್ನಾಟಕದ ದೀರ್ಘಾವಧಿ ಸಿಎಂ ಆಗಿ ಸಿದ್ದರಾಮಯ್ಯ ರಾಜಕೀಯದಲ್ಲಿ ಮಿಂಚಿದ್ದಾರೆ.
ದೇವರಾಜ ಅರಸು ಅವರ 2,792 ದಿನಗಳ ಅಧಿಕಾರ ಅವಧಿಯನ್ನ ದಾಟಿ 2793 ದಿನದ ದಾಖಲೆ ಬರೆದು ಮುನ್ನುಗ್ಗುತ್ತಿದ್ದಾರೆ. ಇವತ್ತು ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ಹಲವು ಸಚಿವರು, ಶಾಸಕರು ಭೇಟಿ ಮಾಡಿ ವಿಶ್ ಮಾಡಿದ್ರು. ಈ ನಡುವೆ ಸಂಕ್ರಾಂತಿ ಬಳಿಕ ಸಿಎಂ ಸಿದ್ದರಾಮಯ್ಯ ದೆಹಲಿ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಇನ್ನೊಂದೆಡೆ ನಾಟ್ ಔಟ್ ಸಮಾವೇಶಕ್ಕೆ ಭರ್ಜರಿ ಗೇಮ್ ಪ್ಲ್ಯಾನ್ ನಡೆದಿದ್ದು, ಹೈಕಮಾಂಡ್ ತೀರ್ಮಾನದ ಬಳಿಕ ಅನುಮತಿ ಸಾಧ್ಯತೆ ಇದೆ.
ಡೆಲ್ಲಿ ವಿಸಿಟ್ ವೇಳೆ ಬಜೆಟ್ ತಯಾರಿ, ಸಂಪುಟ ಪುನಾರಚನೆಗೆ ಹೈಕಮಾಂಡ್ ಮುಂದೆ ಕ್ಲೈಮ್ ಮಾಡುವ ಗೇಮ್ ಸಿದ್ದರಾಮಯ್ಯ ಅವರದ್ದು ಎಂದು ಆಪ್ತ ಮೂಲಗಳು ಮಾಹಿತಿ ನೀಡಿವೆ. ಆಗ ಹೈಕಮಾಂಡ್ ಏನ್ ಹೇಳುತ್ತೆ ಎಂಬ ಆಧಾರದ ಮೇಲೆ ಸಮಾವೇಶ ನಿಗದಿ ಆಗಲಿದ್ದು, ಮೈಸೂರು, ಕೊಪ್ಪಳ, ಹುಬ್ಬಳಿ ಮೂರು ಸ್ಥಳಗಳ ಬಗ್ಗೆ ಚರ್ಚೆ ನಡೆದಿದೆ. ಆ ಸಮಾವೇಶದ ಮೂಲಕವೇ ಎಲ್ಲದಕ್ಕೂ ಉತ್ತರ ಕೊಡಲು ಸಜ್ಜಾಗಿದ್ದು, ನಾಟ್‌ಔಟ್ ಸಮಾವೇಶ ಕುತೂಹಲ ಇದೆ. ಈ ನಡುವೆ ಡಿಕೆಶಿ ಬೆಂಬಲಿಗರು ಸಿಎಂಗೆ ವಿಶ್ ಮಾಡಿದ್ದಾರೆ.
