ಉದಯವಾಹಿನಿ ಕುಶಾಲನಗರ:-ಹಾರಂಗಿ ಜಲಾಶಯನ ವ್ಯಾಪ್ತಿಯಲ್ಲಿ ವ್ಯಾಪಕ ಮಳೆ ಹಿನ್ನಲೆ ಜಲಾಶಯಕ್ಕೆ ಒಳಹರಿವು ಹೆಚ್ಚಾದ ಕಾರಣ ಅಣೆಕಟ್ಟೆಯ 4 ಕ್ರಸ್ಟ್ ಗೇಟ್ ಗಳ ಮುಖಾಂತರ ಇಂದು ಸಂಜೆ 6:30ಕ್ಕೆ ನದಿಗೆ 4,600 ಕ್ಯೂ ಸೆಕ್ಸ್ ನೀರನ್ನು  ನದಿಗೆ ಹರಿಸಲಾಯಿತು.  ಮಳೆ ಹೆಚ್ಚಾದ ಹಿನ್ನೆಲೆ ಜಲಾಶಯಕ್ಕೆ 20,000 ಕ್ಯೂಸೆಕ್ಸ್ ನೀರಿನ ಒಳ ಹರಿವು ಹೆಚ್ಚಾದ ಹಿನ್ನೆಲೆ 4,600 ಕ್ಯೂಸೆಕ್ಸ ನೀರನ್ನು ಬಿಡುಗಡೆ ಮಾಡಲಾಯಿತು. ಈ ಸಂದರ್ಭ ಮಡಿಕೇರಿ ಕ್ಷೇತ್ರದ ಶಾಸಕರಾದ ಮಂತರ್ ಗೌಡ ಪೂಜಿ ಸಲ್ಲಿಸಿ ನೀರು ಬಿಡುಗಡೆಗೆ ಚಾಲನೆ ನೀಡಿದರು. ಅಣೆಕಟ್ಟು ಸಹಾಯಕ ಕಾರ್ಯ ಪಾಲಕ ಅಭಿಯಂತರ ಐ.ಕೆ ಪುಟ್ಟಸ್ವಾಮಿ ಇಲಾಖೆ ಸಿಬ್ಬಂದಿಗಳು ಪತ್ರಕರ್ತರು ಹಾಜರಿದ್ದರು

Leave a Reply

Your email address will not be published. Required fields are marked *

error: Content is protected !!