ಉದಯವಾಹಿನಿ,ಚಿಂಚೋಳಿ: ತಾಲ್ಲೂಕಿನ ಗಾರಂಪಳ್ಳಿ,ಚಿಮ್ಮನಚೋಡ,ಸುಲೇಪೇಟ ಗ್ರಾಮಗಳಿಗೆ ಹಾಗೂ ನಾಗರಾಳ ಜಲಾಶಯಕ್ಕೆ ಜಿಲ್ಲಾ ಪಂಚಾಯತ್ ಸಿಇಓ ಭಂವಾರ್ ಸಿಂಗ್ ಮೀನಾ ಭೇಟಿನೀಡಿ ವಿಕ್ಷಣೆ ಮಾಡಿದ್ದರು. ಗಾರಂಪಳ್ಳಿ ಗ್ರಾಮಕ್ಕೆ ಸಂಪರ್ಕಿಸುವ ಸೇತುವೆ ಮುಳುಗಡೆಯಾಗಿದ್ದು ವಿಕ್ಷಣೆ ಮಾಡಿ ನಂತರ ಗ್ರಾಮ ಪಂಚಾಯತಗೆ ಭೇಟಿಯಾಗಿ ಗ್ರಾಪಂ.ಕಟ್ಟಡ ನೋಡಿ ಪಿಡಿಓ ಹಾಗೂ ಅಧ್ಯಕ್ಷರಿಗೆ ಶ್ಲಾಘಿಸಿ,ಗೃಹಲಕ್ಷ್ಮಿ ಯೋಜನೆಯ ಪ್ರಮಾಣಪತ್ರ ವಿತರಿಸಿದ್ದರು,ನಂತರ ಶಿಶು ಪಾಲನಾ ಕೇಂದ್ರಕ್ಕೆ ಭೇಟಿಯಾಗಿ ಚಾಲನೆ ನೀಡಿದ್ದರು.
     ನಂತರ ಮಾತನಾಡಿದ ಅವರು,ಶಿಶು ಪಾಲನಾ ಕೇಂದ್ರದಲ್ಲಿ ನರೇಗಾ ಯೋಜನೆಯಡಿಯಲ್ಲಿ ಕೆಲಸ ಮಾಡುವ ಕೂಲಿಕಾರ್ಮಿಕರ ಮಕ್ಕಳು ಈ ಕೇಂದ್ರದಲ್ಲಿ ಇರಬಹುದು,ಎಲ್ಲಾ ಗ್ರಾಪಂ.ಕೇಂದ್ರಗಳಲ್ಲಿ ಶಿಶು ಪಾಲನಾ ಕೇಂದ್ರ ಮಾಡಬೇಕು. ತಾಲ್ಲೂಕಿನಲ್ಲಿ ಹೆಚ್ಚಿನ ಮಳೆ ಸುರಿಯುತ್ತಿರುವುದರಿಂದ ಜಲಾಶಯ ಭರ್ತಿ ಆಗಿರುವುದರಿಂದ ನೀರು ಯಾವಾಗಲು ಬೀಡುವ ಸಂದರ್ಭ ಇರುತ್ತದೆ ಕಾರಣ ನದಿಯ ಪಾತ್ರದಲ್ಲಿರುವ ಗ್ರಾಮಗಳಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಡೊಂಗೂರು,ಮೈಕ್ ಮೂಲಕ ಜನರಿಗೆ ಜಾಗೃತಿಗೊಳಿಸಬೇಕು ಎಂದರು.
      ಚಿಮ್ಮನಚೋಡ ಗ್ರಾಮದಲ್ಲಿ ಕಾಲರಾ ರೋಗ ಕಾಣಿಸಿಕೊಂಡಿರುವುದರಿಂದ ಗ್ರಾಮದ ಹರಿಜನವಾಡ ಕಾಲೋನಿಗೆ ಭೇಟಿಯಾಗಿ ಚರ್ಚಿಸಿ ಗ್ರಾಮದಲ್ಲಿ ಸ್ವಚ್ಚತೆ ಕಾಪಾಡಿ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಎಂದು ಪಿಡಿಓ ಗುರುನಾಥರೆಡ್ಡಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಪಿ.ಆರ್.ಇ ಎಇಇ ರಾಜೇಶ ಪಾಟೀಲ,ಟಿಹೆಚ್ಓ ಡಾ.ಮಹ್ಮುದ್ ಗಫಾರ,ಗಾರಂಪಳ್ಳಿ ಅಧ್ಯಕ್ಷ ಮಹೇಶ ಗುತ್ತೇದಾರ,ಗಾರಂಪಳ್ಳಿ ಪಿಡಿಓ ಯಲಗೊಂಡ ಪೂಜಾರಿ,ಜೆಇ ಅಬ್ದುಲ್ ಜಾವೀದ್ ಪಟೇಲ,ತಾಪಂ ಎಡಿ ಶಿಶಶಂಕರಯ್ಯಸ್ವಾಮಿ,ನರೇಗಾ ಎಡಿ ನಾಗೇಂದ್ರಪ್ಪಾ ಅನೇಕರಿದ್ದರು.

Leave a Reply

Your email address will not be published. Required fields are marked *

error: Content is protected !!