ಉದಯವಾಹಿನಿ, ಬೀದರ್ :ಭಾರತೀಯ ಸಂಸ್ಕೃತಿ, ಸಂಸ್ಕಾರಗಳು ಇಡೀ ಜಗತ್ತಿಗೆ ಮಾದರಿಯಾಗಿದ್ದು, ಅಂಥ ಶ್ರೀಮಂತ ಸಂಸ್ಕೃತಿ ಮರೆಯಾಗಬಾರದು ಎಂದು ಭಾಲ್ಕಿ ಶ್ರೀಗಳಾದ ಗುರುಬಸವ ಪಟ್ಟದ್ದೇವರು ಹೇಳಿದರು. ಪಟ್ಟಣದ ಬಸವ ಗುರುಕುಲ ಶಾಲೆಯಲ್ಲಿ ಶುಕ್ರವಾರ ಸಂಜೆ ಶ್ರಾವಣ ಮಾಸದಲ್ಲಿ ನಡೆಯುವ ಅಧ್ಯಾತ್ಮಿಕ ಪ್ರವಚನದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಆರ್ಶೀವಚನ ನೀಡಿದರು. ಎಲ್ಲ ರಾಷ್ಟ್ರಗಳು ಕೈ, ಕಾಲುಗಳು ಇದ್ದಂತೆ, ಆದರೆ ಭಾರತ ಹೃದಯವಿದೆ. ಅಧ್ಯಾತ್ಮಿಕದ ತವರು ಭಾರತ. ನಾವುಗಳು ಅನೇಕ ಹಬ್ಬಗಳು ಆಚರಣೆ ಮಾಡುತ್ತೇವೆ. ಎಲ್ಲದಕ್ಕೂ ವೈಶಿಷ್ಟ್ಯತೆ ಇದೆ ಎಂದರು. ವಿದೇಶಿ ಸಂಸ್ಕೃತಿಯಿಂದ ದೇಶದ ಮೂಲ ಸಂಸ್ಕೃತಿಗೆ ಧಕ್ಕೆ ಬರದಂತೆ ಎಲ್ಲರೂ ನೋಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
       ದ್ವೇಷ ಮರೆತು ಬದುಕಲು ಸಂಕ್ರಾಂತಿ ಹಬ್ಬ ಆಚರಿಸಿದರೇ, ರಕ್ಷಾ ಬಂಧನ ಅಣ್ಣ-ತಂಗಿಯರ ಬಾಂಧವ್ಯ ಗಟ್ಟಿಗೊಳಿಸುವ ಹಬ್ಬವಾಗಿದೆ ಎಂದರು. ಶ್ರಾವಣ ಮಾಸವು ಹಿಂದು ಭಕ್ತರಿಗೆ ಅತ್ಯಂತ ಪವಿತ್ರ ತಿಂಗಳಾಗಿರುತ್ತದೆ. ಪಟ್ಟಣ ಬಸವ ಮಂಟಪದಲ್ಲಿ ನಿತ್ಯ ಸಂಜೆ 7 ಗಂಟೆಯಿಂದ 8 ಗಂಟೆಯವರೆಗೆ ಪ್ರವಚನ ನಡೆಯಲಿದೆ. ಈ ವರ್ಷವು ಪ್ರವಚನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುವ ಮೂಲಕ ಉಪಯೋಗ ಪಡೆದುಕೊಳ್ಳಬೇಕು ಎಂದರು.
    ಈ ವೇಳೆ ಕೆಲವರು ಅನುಭವ ಮಂಟಪದ ಕಾಮಗಾರಿ ತ್ವರಿತವಾಗಿ ಮಾಡಿ ಪ್ರವಚನ ನಡೆಸುವಂತೆ ತಿಳಿಸಿದರು.  ಪ್ರಮುಖರಾದ ಪ್ರಕಾಶ ಘೂಳೆ, ಕಲ್ಲಪ್ಪ ಮುದ್ದಾ, ಮನ್ಮತಪ್ಪ ಹುಗ್ಗೆ, ಡಾ. ಧನ್ನರಾಜ ರಾಗಾ, ಬಂಡೆಪ್ಪ ಕಂಟೆ, ಡಾ. ಸಂಜುಕುಮಾರ ಜುಮ್ಮಾ, ಕಲ್ಲಪ್ಪ ದೇಶಮುಖ, ಅಮರ ಎಡವೆ, ಅಡವೆಪ್ಪ ಪಟ್ನೆ, ಚಂದ್ರಕಾಂತ ಘೂಳೆ, ಧನ್ನರಾಜ ನಿಟ್ಟೂರೆ, ಮಲ್ಲಿಕಾರ್ಜುನ ಟಂಕಸಾಲೆ, ಶರಣಪ್ಪ ಚಿಟಮೇ, ಶರಣಪ್ಪ ನೌಬಾದೆ, ಸತೀಶ ಗಂದಿಗೂಡೆ ಸೇರಿದಂತೆ ಅನೇಕರಿದ್ದರು. ಇದೇ ವೇಳೆ ಪ್ರವಚನ ಸಮಿತಿಯ ಅಧ್ಯಕ್ಷರನ್ನಾಗಿ ಧನ್ನರಾಜ ರಾಗಾ ಅವರಿಗೆ ಆಯ್ಕೆ ಮಾಡಲಾಯಿತು.

Leave a Reply

Your email address will not be published. Required fields are marked *

error: Content is protected !!