ಉದಯವಾಹಿನಿ ಕುಶಾಲನಗರ:-ಕರ್ನಾಟಕದ ಜೀ ಕನ್ನಡದ ವಾಹಿನಿಯಲ್ಲಿ ಪ್ರಸಾರವಾದ ಸರಿಗಮಪ ಲಿಟಲ್ ಚಾಂಪ್ಸ್ 19ರ ಸೀಸನ್ ನಲ್ಲಿ ಸ್ಪರ್ಧಿಸಿ ವಿನ್ನರ್ ಪಟ್ಟ ಪಡೆದಿದ್ದ ಕುಶಾಲನಗರ ತಾಲೂಕಿನ ಪ್ರೌಢಶಾಲೆಯ ವಿದ್ಯಾರ್ಥಿನಿ ಪ್ರಗತಿ ಬಡಿಗೇರ್ ನ ಹಾಡಿಗೆ ಇಡೀ ಕರ್ನಾಟಕವೇ ಮಂತ್ರಮುಗ್ಧವಾಗಿತ್ತು. ಈ ಹಿನ್ನಲೆ ಇತ್ತೀಚೆಗೆ ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕರಾದ ಡಾಕ್ಟರ್ ಮಂತರ್ ಗೌಡರವರು ಮುಖ್ಯ ಅತಿಥಿಯಾಗಿ ಆಗಮಿಸಿದ ಸಂದರ್ಭ ಪ್ರಗತಿಬಡಿಗೇರನ ಸಾಧನೆಯನ್ನು ಮನಗಂಡು ಶಾಸಕರು ಆಕೆಯನ್ನು ವೇದಿಕೆಗೆ ಕರೆಸಿ ಸನ್ಮಾನಿಸಿ ಪ್ರೋತ್ಸಾಹಿಸಿ ಶುಭ ಹಾರೈಸಿದ ರು
