ಉದಯವಾಹಿನಿ , ಬೆಂಗಳೂರು: ಕೋಗಿಲು ಲೇಔಟ್‌ನಲ್ಲಿದ್ದ 161 ಮನೆ ನೆಲಸಮ ಆಗಿದೆ. ದಾಖಲಾತಿ ಪರಿಶೀಲನೆ ಆಗುತ್ತಿದೆ. 26 ಜನರಿಗೆ ಮನೆ ಕೊಡಬಹುದು ಎಂದು ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ.
ಕೋಗಿಲು ಲೇಔಟ್‌ನಲ್ಲಿ ನಿರಾಶ್ರಿತರಿಗೆ ಗೃಹ ಭಾಗ್ಯ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಲ್ಲರ ದಾಖಲೆ ನೋಡಬೇಕು. ದಾಖಲಾತಿ ಪರಿಶೀಲನೆ ಆಗುತ್ತಿದೆ. ಕಂಡೀಷನ್ ಹಾಕಿ ಮನೆ ಕೊಡುತ್ತೇವೆ. ವಲಸಿಗರಿಗೆ ಯಾವ ಕಾರಣಕ್ಕೂ ಕೊಡಲ್ಲ. ಸ್ಥಳೀಯರು ಆಗಿರಬೇಕು, ಅವರಿಗೆ ಮಾತ್ರ ಮನೆ ಎಂದರು. ಕ್ಯಾಬಿನೆಟ್‌ನಲ್ಲಿ ಯಾವುದೇ ಚರ್ಚೆ ಮಾಡಲ್ಲ, ಸಿಎಂ ಈಗಾಗಲೇ ಮೀಟಿಂಗ್ ಮಾಡಿ ಸೂಚನೆ ಕೊಟ್ಟಿದ್ದಾರೆ. 26 ಜನರ ದಾಖಲೆಗಳು ಕ್ಲಿಯರ್ ಆಗಿದೆಯಂತೆ. ಅವರಿಗೆ ಇವತ್ತು ಮನೆ ಕೊಡಬಹುದು ಎಂದು ತಿಳಿಸಿದರು.
ಕೋಗಿಲು ಬಡಾವಣೆಯಲ್ಲಿರುವ ಒಟ್ಟು 119 ಕುಟುಂಬಗಳ ಪೈಕಿ 76 ಕುಟುಂಬಗಳು ವಾಸ ಮಾಡ್ತಿರೋದು ಕಳೆದ 6 ತಿಂಗಳಿನಿAದ. ಉಳಿದ 43 ಕುಟುಂಬಗಳಲ್ಲಿ 37 ಕುಟುಂಬಗಳು ಬೆಂಗಳೂರು ಮೂಲದವರೇ, ಇನ್ನುಳಿದ 6 ಕುಟುಂಬಗಳು ಕೆಲ ವರ್ಷಗಳ ಹಿಂದೆ ಕೋಗಿಲು ಲೇಔಟ್‌ಗೆ ಬಂದು ನೆಲೆಸಿದ್ದಾರೆ. ಹೀಗಾಗಿ 37 ಕುಟುಂಬಗಳು ಹೊರತುಪಡಿಸಿದ್ರೆ, ಉಳಿದೆಲ್ಲರು ವಲಸಿಗರು ಎಂದು ಪರಿಗಣಿಸಲಾಗಿದೆ.
