ಉದಯವಾಹಿನಿ, ಶಾಪಿಂಗ್ ಮಾಲ್‌ನ ಕಾರಿಡಾರ್‌ನಲ್ಲಿ ಮೋಜು ಮಾಡಲು ಹೋಗಿ ಇಬ್ಬರು ಸ್ನೇಹಿತರು ತಮ್ಮ ಪ್ರಾಣವನ್ನೇ ಕಳೆದುಕೊಂಡಿರುವ ದಾರುಣ ಘಟನೆ ನಡೆದಿದೆ. ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ. ವೈರಲ್ ವಿಡಿಯೋದ ಪ್ರಕಾರ, ಇಬ್ಬರು ಸ್ನೇಹಿತರು ಮಾಲ್‌ನ ಮೇಲಿನ ಅಂತಸ್ತಿನ ಕಾರಿಡಾರ್‌ನಲ್ಲಿ ನಡೆದು ಹೋಗುತ್ತಿರುತ್ತಾರೆ. ಈ ವೇಳೆ ಒಬ್ಬ ಸ್ನೇಹಿತ ಮತ್ತೊಬ್ಬನ ಹೆಗಲ ಮೇಲೆ ಹತ್ತಿ ಕುಳಿತುಕೊಳ್ಳುತ್ತಾನೆ.
ಈ ರೀತಿ ಮೋಜು ಮಾಡುತ್ತಾ ಸಾಗುವಾಗ, ಕಾರಿಡಾರ್‌ನ ರೇಲಿಂಗ್ ಬಳಿ ಹೋದಾಗ ಮೇಲೆ ಕುಳಿತಿದ್ದ ವ್ಯಕ್ತಿ ಆಯತಪ್ಪಿ ರೇಲಿಂಗ್ ಮೇಲೆ ಬೀಳುತ್ತಾನೆ. ಅವನನ್ನು ಹಿಡಿಯಲು ಹೋದ ಕೆಳಗಿದ್ದ ಸ್ನೇಹಿತನೂ ನಿಯಂತ್ರಣ ಕಳೆದುಕೊಂಡು, ಇಬ್ಬರೂ ರೇಲಿಂಗ್‌ನಿಂದ ನೇರವಾಗಿ ಮಾಲ್‌ನ ನೆಲ ಅಂತಸ್ತಿಗೆ ಬಿದ್ದಿದ್ದಾರೆ.

Leave a Reply

Your email address will not be published. Required fields are marked *

error: Content is protected !!