ಉದಯವಾಹಿನಿ : ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಅಮೆರಿಕದ ಇಮಿಗ್ರೇಶನ್ ಅಂಡ್ ಕಸ್ಟಮ್ಸ್ ಎನ್‌ಫೋರ್ಸ್‌ಮೆಂಟ್ ಅಧಿಕಾರಿಗಳು ಬುಧವಾರ ಮಹಿಳೆಯೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಅಮೆರಿಕ ಆಡಳಿತ ಈ ಕ್ರಮವನ್ನು ಸಮರ್ಥಿಸಿಕೊಂಡಿದ್ದು, ಮಹಿಳೆ ದಂಗೆಗೆ ಕುಮ್ಮಕ್ಕು ನೀಡುತ್ತಿದ್ದರು. ಕಾನೂನು ಜಾರಿ ಅಧಿಕಾರಿಗಳ ಮೇಲೆ ವಾಹನವನ್ನು ಚಲಾಯಿಸಲು ಪ್ರಯತ್ನಿಸಿದರು ಎಂದು ಹೇಳಿಕೊಂಡಿದೆ.
“ಇಂದು ಐಇಸಿ ಅಧಿಕಾರಿಗಳು ನಲ್ಲಿ ಗುರಿನಿರ್ದೇಶಿತ ಕಾರ್ಯಾಚರಣೆ ನಡೆಸುತ್ತಿದ್ದಾಗ, ಐಸಿಇ ಅಧಿಕಾರಿಗಳನ್ನು ತಡೆಯುವ ಪ್ರಯತ್ನವನ್ನು ಗಲಭೆಕೋರರು ಮಾಡಿದರು. ಶಸ್ತ್ರಸಜ್ಜಿತ ವಾಹನದಲ್ಲಿದ್ದ ಮಹಿಳೆ ನಮ್ಮ ಕಾನೂನು ಜಾರಿ ಅಧಿಕಾರಿಗಳ ಮೇಲೆ ವಾಹನ ಚಲಾಯಿಸಿ ಅವರನ್ನು ಕೊಲ್ಲುವ ಪ್ರಯತ್ನ ಮಾಡಿದರು. ಇದು ದೇಶೀಯ ಭಯೋತ್ಪಾದನೆಯ ಕ್ರಮ” ಎಂದು ಡಿಎಚ್‌ಎಸ್ ವಕ್ತಾರ ಟ್ರಿಸಿಯಾ ಮೆಕ್‌ಲಾಗ್ಲಿನ್ ಹೇಳಿದ್ದಾರೆ.
