ಉದಯವಾಹಿನಿ, ಟೆಹರಾನ್ : ಇರಾನ್ ಜೊತೆಗಿನ ಯುದ್ಧದ ವೇಳೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನದಲ್ಲಿ ದೇವರಿಗೆ ಮೊರೆಹೋಗಿದ್ದಾರೆ.ಶುಕ್ರವಾರದಂದು ಅವರು ಅಮೆರಿಕದಾದ್ಯಂತದ ಎಲ್ಲಾ ಪಾದ್ರಿಗಳನ್ನು ಒಟ್ಟುಗೂಡಿಸಿ ಶಕ್ತಿ ತುಂಬಲು ದೇವರಿಗೆ ಬೇಡಿಕೊಂಡಿದ್ದಾರೆ.ಫೆಬ್ರವರಿ 27 ರಂದು, ಟ್ರಂಪ್ ಇರಾನ್ ಮೇಲೆ ದಾಳಿ ನಡೆದ ದಿನದಿಂದ ಈಗ ಮಧ್ಯ ಪ್ರಾಚ್ಯ ಪ್ರದೇಶಗಳಲ್ಲಿ ಯುದ್ದದ ಭೀಕರತೆ ತೀವ್ರಗೊಂಡಿದೆ.

ಈ ಹಿನ್ನೆಲೆಯಲ್ಲಿ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಶ್ವೇತಭವನದಲ್ಲಿ ಎಲ್ಲಾ ಪಾದ್ರಿಗಳನ್ನು ಕೂಡಿಸಿ ಪ್ರಾರ್ಥನೆಗೆ ಮುಂದಾಗಿದ್ದಾರೆ.ಈಗ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗುತ್ತಿದೆ.ಅಚ್ಚರಿ ಎಂದರೆ ಈಗ ತಮ್ಮ ಕಚೇರಿಯಲ್ಲಿ ಇದೆ ಮೊದಲ ಬಾರಿಗೆ ಸಾರ್ವಜನಿಕವಾಗಿ ಪ್ರಾರ್ಥನೆಗೆ ಮುಂದಾಗಿದ್ದಾರೆ.ಈ ವಿಡಿಯೋದಲ್ಲಿ ರಾಷ್ಟ್ರದ ರಕ್ಷಣೆಗಾಗಿ ಟ್ರಂಪ್ ಪ್ರಾರ್ಥನೆ ಮಾಡಿದ್ದಾರೆ.ಈಗ ಈ ವಿಡಿಯೋವನ್ನು ಟ್ರಂಪ್ ಅವರ ಶ್ವೇತಭವನದ ಸಹಾಯಕ ಡಾನ್ ಸ್ಕ್ಯಾವಿನೊ ಈ ವೀಡಿಯೊವನ್ನು ಹಂಚಿಕೊಂಡು ‘ದೇವರು ಅಮೆರಿಕವನ್ನು ಆಶೀರ್ವದಿಸಲಿ’ ಎಂದು ಬರೆದುಕೊಂಡಿದ್ದಾರೆ.

ಅಮೇರಿಕನ್ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ, ಡೊನಾಲ್ಡ್ ಟ್ರಂಪ್ ಎಲ್ಲಾ ಅಮೇರಿಕನ್ ಪಾದ್ರಿಗಳನ್ನು ಪೂಜೆ ಮತ್ತು ಪ್ರಾರ್ಥನೆಗಾಗಿ ಓವಲ್ ಕಚೇರಿಗೆ ಆಹ್ವಾನಿಸಿದ್ದಾರೆ.ಆಗ ತಮ್ಮ ಸ್ಥಾನದಲ್ಲಿ ಕುಳಿತುಕೊಂಡಾಗ ಎಲ್ಲಾ ಪಾದ್ರಿಗಳು ಅವರ ಮೇಲೆ ಕೈ ಇಟ್ಟು ಪ್ರಾರ್ಥನೆ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!