ಉದಯವಾಹಿನಿ, ಉತ್ತರ ಚೀನಾ : ವಿಶ್ವದ ಎಲ್ಲ ದೇಶಗಳಲ್ಲಿ ವಿಧ ವಿಧವಾದ ಸಂಪ್ರದಾಯಗಳು, ಪದ್ಧತಿಗಳು, ಸಾಂಸ್ಕೃತಿಕ ಆಚರಣೆಗಳು ಇವು. ಇದರಲ್ಲಿಯೂ ಕೆಲವೊಂದು ವಿಭಿನ್ನವಾಗಿವೆ. ಇವುಗಳನ್ನು ಕೇಳಿದರೆ ಅಯ್ಯೋ ಹೀಗೂ ಆಚರಣೆಗಳು ಇರುತ್ತವಾ? ಎಂದು ನಿಮಗೆ ಅನಿಸುತ್ತದೆ. ಸದ್ಯ ಅಂತಹದ್ದೇ ಪದ್ಧತಿ ಇಲ್ಲೊಂದು ಇದ್ದು ಮದುವೆಯಾದ ಬಳಿಕ ನವವಧುವನ್ನು ಬೇರೆಯವರ ಮನೆಗೆ ಕಳುಹಿಸಿ ಕೊಡಲಾಗುತ್ತದೆ. ಅದು ಯಾಕೆ ಎನ್ನುವುದೇ ಭಾರೀ ಕುತೂಹಲವಾಗಿದೆ.

ತನ್ನ ಗಂಡನ ಮನೆಯನ್ನು ಬಿಟ್ಟು ವಧು ಬೇರೆಯೊಬ್ಬರ ಮನೆಯಲ್ಲಿ ಲ್ಯಾಂಟರ್ನ್‌ ಹಬ್ಬವನ್ನು ಆಚರಣೆ ಮಾಡುತ್ತಾಳೆ. ತವರು ಮನೆಗೆ ಹೋಗಬಹುದು ಅಲ್ವಾ ಅಂದರೆ, ಇದಕ್ಕೂ ಅವಕಾಶ ಇರಲ್ವಂತೆ. ಅಯ್ಯೋ, ವರನ ಪಕ್ಕದ ಮನೆಯ ಬೇರೊಬ್ಬರ ಮನೆಯಲ್ಲಿ ಹೇಗೆ ಇರೋದು ಎಂದರೆ ಇದು ಸಂಪ್ರದಾಯವಾಗಿದೆ. ವಧು ಮಾಡಲೇಬೇಕಂತೆ. ಚೀನಾದಲ್ಲಿ ದೀಪಗಳಿಗೆ ಬೆಳಕು ಮತ್ತು ಭರವಸೆಯ ಸಂಕೇತವಾಗಿ ಪರಿಗಣಿಸಲಾಗುತ್ತದೆ.

ಚೀನಾದಲ್ಲಿ ಈ ಹಬ್ಬವನ್ನು ಡುಯೋಡೆಂಗ್ ಎನ್ನುತ್ತಾರೆ. ನವವಧು ಮದುವೆ ನಂತರ ಮನೆಗೆ ಹಿಂದಿರುಗಿದ ಮೇಲೆ ಹಬ್ಬದ ರಾತ್ರಿ ತನ್ನ ಗಂಡನ ಮನೆಯನ್ನು ಬಿಟ್ಟು ಪಕ್ಕದ ಮನೆಯಲ್ಲಿ ನೆಲೆ ಪಡೆಯಬೇಕು. ವರನ ಮನೆಯಲ್ಲಿ ಬೆಳಗುವ ದೀಪಗಳನ್ನು ವಧು ನೋಡಲೇಬಾರದಂತೆ. ಇದು ಕೇವಲ ಮದುವೆಯಾದ ಒಂದು ವರ್ಷವಲ್ಲ, ಮೂರು ವರ್ಷ ಹಬ್ಬದಂದು ವಧು ಬೇರೆಯವರ ಮನೆಯಲ್ಲಿ ಆಶ್ರಯ ಪಡೆಯಲೇಬೇಕಾಗಿದೆ. ನವ ದಂಪತಿ ಈ ರೀತಿ ಆಚರಣೆ ಮಾಡುವುದರಿಂದ ಮನೆಗೆ ಒಳ್ಳೆದಾಗುತ್ತದೆ. ಅಂದರೆ ವಧುವಿನ ಅತ್ತೆ ಹಾಗೂ ಮಾವಗೆ ಯಾವುದೇ ತೊಂದರೆಗಳು ಕಾಡುವುದಿಲ್ವಂತೆ. ಅವರ ಸುದೀರ್ಘಬಾಗಿ ಬದುಕಿ ಬಾಳುತ್ತಾರೆ ಎನ್ನುವುದು ಅಲ್ಲಿನ ಸ್ಥಳೀಯರ ಬಲವಾದ ನಂಬಿಕೆ ಅಗಿದೆ.

Leave a Reply

Your email address will not be published. Required fields are marked *

error: Content is protected !!