ಉದಯವಾಹಿನಿ, ರಾಕಿಂಗ್‌ಸ್ಟಾರ್ ಯಶ್ ಹುಟ್ಟುಹಬ್ಬದ ಪ್ರಯುಕ್ತ ಕ್ಯಾರೆಕ್ಟರ್ ಇಂಟ್ರೊಡಕ್ಷನ್ ಟೀಸರ್ ರಿಲೀಸ್ ಮಾಡಿದೆ ಚಿತ್ರತಂಡ. ರಾಕಿಂಗ್‌ಸ್ಟಾರ್ ಯಶ್ ಭೇಟಿ ಮಾಡಿ, ಶುಭಾಶಯ ತಿಳಿಸಲು ಕಾಯ್ತಿದ್ದ ಅಭಿಮಾನಿಗಳು ಈ ಬಾರಿ ಹುಟ್ಟುಹಬ್ಬದ ಸಂಭ್ರವಿಲ್ಲ ಅಂತಾ ಕೇಳಿ ಬೇಸರ ಪಟ್ಟುಕೊಂಡಿದ್ದರು. ಆದರೆ ತಮ್ಮ ಅಭಿಮಾನಿಗಳಿಗೆ ಯಶ್ ಅಂಡ್ ಟೀಂ ಕೊಟ್ಟ ಉಡುಗೊರೆ ಮಾತ್ರ ಅದ್ಭುತ.. ಅಮೋಘ.
ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಟೀಸರ್‌ಗೆ ಫಿದಾ ಆಗದವ್ರೇ ಇಲ್ಲ. ಯಶ್ ಇಂಟ್ರೋ ಟೀಸರ್ ನೋಡಿ ಪ್ರೇಕ್ಷಕರು, ಸಿನಿಮಾ ಸ್ಟರ‍್ಸ್, ನಿರ್ದೇಶಕರುಗಳು ತಮ್ಮ ಅಭಿಪ್ರಾಯಗಳನ್ನ ಹಂಚಿಕೊಳ್ಳುತ್ತಿದ್ದಾರೆ. ಅದೇ ನಿಟ್ಟಿನಲ್ಲಿ ರಾಮ್‌ಗೋಪಾಲ್ ವರ್ಮಾ ಟೀಸರ್ ನೋಡಿ ಮೆಚ್ಚಿಕೊಂಡಿದ್ದಾರೆ. ನಿರ್ದೇಶಕಿ ಗೀತು ಮೋಹನ್ ದಾಸ್ ಅವರನ್ನ ಹಾಡಿ ಹೊಗಳಿದ್ದಾರೆ.
ಟಾಲಿವುಡ್‌ನ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ತಮ್ಮ ಎಕ್ಸ್ ಖಾತೆಯಲ್ಲಿ ಗೀತು ಮೋಹನ್‌ದಾಸ್ ಬಗ್ಗೆ ಹಾಡಿ ಹೊಗಳಿದ್ದಾರೆ. ಟಾಕ್ಸಿಕ್ ಟೀಸರ್ ನೋಡಿದ ನಂತರ, ‘ಈ ಮಹಿಳಾ ನಿರ್ದೇಶಕಿ ಯಾವ ಪುರುಷ ನಿರ್ದೇಶಕರಿಗೂ ಕಮ್ಮಿ ಎನ್ನುವಂತಿಲ್ಲ. ಗೀತು ಮೋಹನ್ ದಾಸ್ ಇದನ್ನು ನಿರ್ದೇಶನ ಮಾಡಿದ್ದಾರೆ ಎಂದರೆ ನಂಬೋಕೆ ಸಾಧ್ಯವಾಗ್ತಿಲ್ಲ. ಅದ್ಭುತವಾಗಿ ಟೀಸರ್ ಮೂಡಿಬಂದಿದ’ ಎಂದಿದ್ದಾರೆ.
