ಉದಯವಾಹಿನಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯ ಮತ್ತು ಸಂಕಲನಕಾರ ನರಹಳ್ಳಿ ಜ್ಞಾನೇಶ್ (48) ಅವರು ಗುರುವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು. ಜ್ಞಾನೇಶ್ ಅವರು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಮೇಲುಕೋಟೆ ಹೋಬಳಿಯ ನರಹಳ್ಳಿ ಗ್ರಾಮದ ಬಿ. ಬೋರೇಗೌಡ ಮತ್ತು ಮರಿಲಿಂಗಮ್ಮ ಪುತ್ರ.
ನಾಗಮಂಡಲ, ಹಿಮಪಾತ, ಮುಂಗಾರಿನ ಮುಂಚು, ಅಮೃತ ವರ್ಷಿಣಿ, ಲಾಲಿ ಮುಂತಾದ ಚಿತ್ರಗಳಿಗೆ ಸಹಾಯಕ ಸಂಕಲನಕಾರನಾಗಿ ಕೆಲಸ ಮಾಡಿದ್ದರು. ನಂತರ ‘ಅರ್ಥ’ ಸಿನಿಮಾದಲ್ಲಿ ಸ್ವತಂತ್ರ ಸಂಕಲನಕಾರರಾದರು.
‘ಪವಾಡ ಪುರುಷ ಶ್ರೀ ಸಿದ್ದಪ್ಪಾಜಿ’ ಮತ್ತು ‘ಪಂಚಾಮೃತ’ ಚಿತ್ರಗಳಿಗೆ ಸಹ ನಿರ್ಮಾಪಕರಾಗಿದ್ದಾರೆ. ‘ಗಾಂಧಿ ಮಾರ್ಗ’ ಹಾಗೂ ಬಿಡುಗಡೆಯಾಬೇಕಿರುವ ‘ಬನದ ಹೂ’ ಎರಡು ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
