ಉದಯವಾಹಿನಿ, ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಎ1 ಆರೋಪಿಯಾಗಿರುವ ಪವಿತ್ರಾ ಗೌಡಗೆ ಇಂದು ಜನ್ಮದಿನದ ಸಂಭ್ರಮ. ಕಳೆದ ವರ್ಷ ಜೈಲಿನಿಂದ ಜಾಮೀನಿನ ಮೇಲೆ ರಿಲೀಸ್ ಆಗಿ ಮಗಳೊಂದಿಗೆ ಜನ್ಮದಿನ ಆಚರಿಸಿದ್ದ ಪವಿತ್ರಾ ಗೌಡ ಈ ಬಾರಿ ಪರಪ್ಪನ ಅಗ್ರಹಾರ ಜೈಲಲಲ್ಲಿ ನಾಲ್ಕು ಗೋಡೆಗಳ ನಡುವೆ ಏಕಾಂಗಿಯಾಗಿ ಜನ್ಮದಿನ ಆಚರಿಸಬೇಕಾಗಿದೆ. ಆದರೆ, ಮಗಳು ಖುಷಿ ಗೌಡ ಅಮ್ಮನನ್ನು ನೆನಪಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಜನ್ಮದಿನದ ಶುಭಾಶಯ ಕೋರಿದ್ದಾರೆ.
ಇತ್ತೀಚೆಗೆ ಪ್ರಕರಣದ ವಿಚಾರಣೆಯ ವೇಳೆ ತಮ್ಮ ಅಜ್ಜಿಯ ಜೊತೆ ಕೋರ್ಟ್‌ಗೂ ಹಾಜರಾಗಿದ್ದರು. ಅಮ್ಮನ ಜನ್ಮದಿನದ ವೇಳೆ ಪವಿತ್ರಾ ಗೌಡ ಅವರ ಚಂದದ ಫೋಟೋವನ್ನು ಇನ್ಸ್‌ಟಾಗ್ರಾಮ್‌ನಲ್ಲಿ ಸ್ಟೋರಿಯಲ್ಲಿ ಪೋಸ್ಟ್ ಮಾಡುವ ಮೂಲಕ ಶುಭ ಕೋರಿದಿದ್ದಾರೆ.
ನನ್ನ ಫಾರೆವರ್ ಕ್ಯೂಟಿಗೆ ಹ್ಯಾಪಿ ಬರ್ತ್‌ಡೇ. ಎಷ್ಟು ಬೇಗನೆ ಸಮಯ ಹೋಗುತ್ತಿದೆ ಅನ್ನುವುದನ್ನು ನಂಬೋಕೆ ಸಾಧ್ಯವಾಗುತ್ತಿಲ್ಲ. ದಿನ ಕಳೆದಂತೆ ನಾನು ನಿನ್ನೊಂದಿಗೆ ಕಳೆಯುವ ಸಮಯ ಕಡಿಮೆಯಾಗುತ್ತಲೇ ಇದೆ ಎಂದು ಖುಷಿ ಗೌಡ ಬರೆದುಕೊಂಡಿದ್ದಾರೆ.
ಹೊರಗೆ ಬಿಂದಾಸ್ ಜೀವನ ನಡೆಸ್ತಿದ್ದ ಪವಿತ್ರಾ ಗೌಡ ಜೀವನ ಜೈಲಲ್ಲಿ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ವರ್ಷವರ್ಷವೂ ಮನೆಯವರೆಯೊಂದಿಗೆ ಹಾಗೂ ಗೆಳೆಯ ದರ್ಶನ್ ಜೊತೆ ಅದ್ದೂರಿಯಾಗಿ ಜನ್ಮದಿನ ಆಚರಿಸಿಕೊಳ್ಳುತ್ತಿದ್ದ ಪವಿತ್ರಾ ಗೌಡಗೆ ಈಗ ಜೈಲಿನ ಸಹಕೈದಿಗಳೇ ಸಂಗಾತಿಗಳಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!