ಉದಯವಾಹಿನಿ, ಫಿಲಿಪೈನ್ಸ್‌ನ ಸೆಬು ನಗರದಲ್ಲಿ ಭೂಕುಸಿತ ಸಂಭವಿಸಿ, ಬೃಹತ್ ಕಸದ ರಾಶಿ ಬಿದ್ದು ಓರ್ವ ಸಾವನ್ನಪ್ಪಿ, 27 ಮಂದಿ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. ಜನರು ಕಸದರಾಶಿಯ ಒಳಗೆ ಹುಗಿದು ಹೋಗಿದ್ದಾರೆ. ಅವರ ರಕ್ಷಣಾ ಕಾರ್ಯ ಮುಂದುವರೆದಿದೆ. ಬಿನಾಲಿವ್ ಗ್ರಾಮದ ತ್ಯಾಜ್ಯ ವಿಂಗಡಣಾ ಕೇಂದ್ರದಲ್ಲಿ ಈ ಅಪಘಾತ ಸಂಭವಿಸಿದೆ. ಕಾರ್ಮಿಕರು ತ್ಯಾಜ್ಯ ವಿಂಗಡಣೆಯಲ್ಲಿ ನಿರತರಾಗಿದ್ದರು.ಕಸದ ರಾಶಿ ಹಠಾತ್ತನೆ ಕುಸಿದಿದ್ದರಿಂದ ಹಲವು ಜನರು ಗಾಯಗೊಂಡಿದ್ದಾರೆ. ಇಲ್ಲಿಯವರೆಗೆ 8 ಜನರನ್ನು ಕಸದ ರಾಶಿಯಿಂದ ಜೀವಂತವಾಗಿ ಹೊರಕ್ಕೆ ಎಳೆಯಲಾಗಿದೆ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಓರ್ವ ಕಾರ್ಮಿಕ ಸಾವನ್ನಪ್ಪಿದ್ದಾರೆ. ಉಳಿದ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾರ್ಯಾಚರಣೆ ಮುಂದುವರೆದಿದ್ದು, ಕಾಣೆಯಾದ ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಸಾಧ್ಯತೆ ಇದೆ ಎಂದು ಪ್ರಾದೇಶಿಕ ಪೊಲೀಸ್ ನಿರ್ದೇಶಕ ಬ್ರಿಗೇಡಿಯರ್ ಜನರಲ್ ರೊಡೆರಿಕ್ ಮಾರನನ್ ಹೇಳಿದ್ದಾರೆ. ಘಟನಾ ಸ್ಥಳದಲ್ಲಿ ಕಾರ್ಮಿಕರು ಮಾತ್ರ ಇದ್ದಾರೆಯೇ ಅಥವಾ ಹತ್ತಿರದ ನಿವಾಸಿಗಳ ಮೇಲೂ ಸಹ ಪರಿಣಾಮ ಬೀರಿದೆಯೇ ಎಂಬುದಿನ್ನೂ ಸ್ಪಷ್ಟವಾಗಿಲ್ಲ.

Leave a Reply

Your email address will not be published. Required fields are marked *

error: Content is protected !!