ಉದಯವಾಹಿನಿ, ನವದೆಹಲಿ: ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೆ ಇನ್ನೇನು ಒಂದು ತಿಂಗಳು ಬಾಕಿ ಇರುವಾಗಲೇ ಭಾರತ ತಂಡಕ್ಕೆ ಗಾಯದ ಸಮಸ್ಯೆ ಎದುರಾಗಿದೆ. ವಿಜಯ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಗಾಯಕ್ಕೆ ತುತ್ತಾಗಿದ್ದ ತಿಲಕ್‌ ವರ್ಮಾ ( ಅವರು ಇದೀಗ ನ್ಯೂಜಿಲೆಂಡ್‌ ವಿರುದ್ಧದ ಆರಂಭಿಕ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಕೊನೆಯ ಎರಡು ಪಂದ್ಯಗಳಿಗೆ ಅವರನ್ನು ಪರಿಗಣಿಸುವುದು ಕೂಡ ಅನುಮಾನ. ಜನವರಿ 21 ರಂದು ಭಾರತ ಹಾಗೂ ಕಿವೀಸ್‌ ನಡುವೆ ಟಿ20ಐ ಸರಣಿ ಆರಂಭವಾಗಲಿದೆ.

ಭಾರತ ಟಿ20ಐ ತಂಡದಲ್ಲಿ ಈಗಾಗಲೇ ಶಿವಂ ದುಬೆ ಹಾಗೂ ರಿಂಕು ಸಿಂಗ್‌ ಇದ್ದಾರೆ. ಆದರೆ, ಆರಂಭಿಕ ಮೂರು ಪಂದ್ಯಗಳಿಗೆ ತಿಲಕ್‌ ವರ್ಮಾ ಸ್ಥಾನಕ್ಕೆ ಬೇರೆ ಯಾವುದೇ ಆಟಗಾರ ಇಲ್ಲ. ಹಾಗಾಗಿ ಆಯ್ಕೆದಾರರು ಬದಲಿ ಆಟಗಾರನನ್ನು ಹುಡುಕುತ್ತಿದೆ. ಒಂದು ವೇಳೆ ಕಿವೀಸ್‌ ಟಿ20ಐ ಸರಣಿಯಿಂದ ತಿಲಕ್‌ ಸಂಪೂರ್ಣವಾಗಿ ಹೊರ ಬಿದ್ದರೆ ಟಿ20 ವಿಶ್ವಕಪ್‌ ಟೂರ್ನಿಗೂ ಕೂಡ ಭಾರತ ತಂಡಕ್ಕೆ ಗಾಯದ ಭೀತಿ ಎದುರಾಗಬಹುದು.

ಅಂದ ಹಾಗೆ ಕವೀಸ್‌ ವಿರುದ್ಧದ ಟಿ20ಐ ಸರಣಿಗೆ ತಿಲಕ್‌ ವರ್ಮಾ ಸ್ಥಾನಕ್ಕೆ ಮೂವರು ಆಟಗಾರರನ್ನು ಬಿಸಿಸಿಐ ಪರಿಗಣಿಸಬಹುದು. ಈ ಮೂವರು ಆಟಗಾರರನ್ನು ಇಲ್ಲಿ ವಿವರಿಸಲಾಗಿದೆ.
ದೇಶಿ ಕ್ರಿಕೆಟ್‌ನಲ್ಲಿ ವಿಶೇಷವಾಗಿ ವಿಜಯ್ ಹಝಾರೆ ಟ್ರೋಫಿ ಟೂರ್ನಿ ಸೇರಿದಂತೆ ದೇವದತ್ ಪಡಿಕ್ಕಲ್ ಎಲ್ಲಾ ಮಾದರಿಗಳಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಕರ್ನಾಟಕದ ಬ್ಯಾಟ್ಸ್‌ಮನ್ ಇದುವರೆಗೆ ಕೇವಲ 7 ಇನಿಂಗ್ಸ್‌ಗಳಲ್ಲಿ 91.42 ರ ಸರಾಸರಿಯಲ್ಲಿ 620 ರನ್ ಗಳಿಸಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲೂ ಸಹ, ಅವರು ಉತ್ತಮ ಲಯದಲ್ಲಿದ್ದರು. ಅವರು ಇಲ್ಲಿ 167.02 ರ ಪ್ರಭಾವಶಾಲಿ ಸ್ಟ್ರೈಕ್ ರೇಟ್‌ನಲ್ಲಿ 6 ಪಂದ್ಯಗಳಲ್ಲಿ 309 ರನ್ ಸಿಡಿಸಿದ್ದರು.ಇದರ ಆಧಾರದ ಮೇಲೆ ಬಿಸಿಸಿಐ ಆಯ್ಕೆದಾರರು ಕರ್ನಾಟಕ ಆಟಗಾರನನ್ನು ಭಾರತ ತಂಡಕ್ಕೆ ಸೇರಿಸಬಹುದು. ತಿಲಕ್‌ ವರ್ಮಾ ಕೂಡ ಎಡಗೈ ಬ್ಯಾಟ್ಸ್‌ಮನ್‌ ಹಾಗಾಗಿ, ಅವರಿಗೆ ಪಡಿಕ್ಕಲ ಸೂಕ್ತ ಬದಲಿ ಆಟಗಾರನಾಗಬಹುದು.

Leave a Reply

Your email address will not be published. Required fields are marked *

error: Content is protected !!