ಉದಯವಾಹಿನಿ, ವಾಂಖೆಡೆ ಕ್ರಿಕೆಟ್ ಮೈದಾನದಲ್ಲಿ ಆರಂಭವಾಗಿರುವ ಟಿ20 ವಿಶ್ವಕಪ್‌ನ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದ ಟಾಸ್ ಆಗುತ್ತಿದ್ದಂತೆ ಇಂಗ್ಲೆಂಡ್ ತಂಡದ ಅನುಭವಿ ಆಟಗಾರ ಜೋಸ್ ಬಟ್ಲರ್ ದಿಗ್ಗಜ ಆಟಗಾರರ ಸಾಲಿಗೆ ಸೇರಿದ್ದಾರೆ. ಅತೀ ವಿಶ್ವಕಪ್ ಪಂದ್ಯಾವಳಿ
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಪಂದ್ಯಾವಳಿಯ ಟಾಸ್ ಆಗುತ್ತಿದ್ದಂತೆ, ಉಭಯ ತಂಡದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಜೋಸ್ ಬಟ್ಲರ್ ಸ್ಥಾನ ಪಡೆದುಕೊಂಡಿದ್ದಾರೆ. ಆ ಮೂಲಕ ಟಿ20 ವಿಶ್ವಕಪ್‌ನಲ್ಲಿ ಅತೀ ಹೆಚ್ಚು ಪಂದ್ಯಾವಳಿಗಳನ್ನು ಆಡಿದ ಆಟಗಾರರ ಸಾಲಿನಲ್ಲಿ ಬಾಂಗ್ಲಾದೇಶದ ಸಕಿಬ್ ಅಲ್ ಹಸನ್ ಅವರ ದಾಖಲೆ ಸರಿಗಟ್ಟಿದ್ದಾರೆ.
ಇಂದಿನ ಪಂದ್ಯವು ಟಿ20 ವಿಶ್ವಕಪ್‌ನಲ್ಲಿ ಅವರ 43ನೇ ಪಂದ್ಯವಾಗಿದೆ. ಇಷ್ಟೇ ಪಂದ್ಯಗಳನ್ನು ಆಡಿರುವ ಸಕಿಬ್ ಅಲ್ ಹಸನ್ ಅವರ ದಾಖಲೆ ಸರಿಗಟ್ಟಿ ಬಟ್ಲರ್ ಜಂಟಿಯಾಗಿ ಎರಡನೇ ಸ್ಥಾನಕ್ಕೇರಿದ್ದಾರೆ. ಅಗ್ರಸ್ಥಾನದಲ್ಲಿ 47 ಟಿ20 ವಿಶ್ವಕಪ್ ಪಂದ್ಯಗಳನ್ನು ಆಡಿರುವ ಭಾರತ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಇದ್ದಾರೆ.
ಟಿ20 ವಿಶ್ವಕಪ್‌ನಲ್ಲಿ ಅತೀ ಹೆಚ್ಚು ಪಂದ್ಯಗಳನ್ನು ಆಡಿರುವ ಆಟಗಾರರು
ರೋಹಿತ್ ಶರ್ಮಾ-47
ಜೋಸ್ ಬಟ್ಲರ್-43
ಸಕಿಬ್ ಅಲ್ ಹಸನ್-43
ಡೇವಿಡ್ ವಾರ್ನರ್-41
ಆದಿಲ್ ರಶೀದ್-38
ಟಿ20 ವಿಶ್ವಕಪ್‌ನಲ್ಲಿ ಅತೀ ಹೆಚ್ಚು ನಾಕೌಟ್ ಪಂದ್ಯಗಳು
ಅತೀ ಹೆಚ್ಚು ಪಂದ್ಯಗಳ ಜೊತೆಗೆ, ಟಿ20 ವಿಶ್ವಕಪ್‌ನಲ್ಲಿ ಅತೀ ಹೆಚ್ಚು ಬಾರಿ ನಾಕೌಟ್ ಪಂದ್ಯಗಳನ್ನು ಆಡಿದ ಆಟಗಾರರ ಪಟ್ಟಿಯಲ್ಲೂ ಜೋಸ್ ಬಟ್ಲರ್ ಅವರು ಜಂಟಿಯಾಗಿ ಎರಡನೇ ಸ್ಥಾನಕ್ಕೇರಿದ್ದಾರೆ. ಈ ಸಾಧನೆಯನ್ನು 8 ಬಾರಿ ಮಾಡಿರುವ ರೋಹಿತ್ ಶರ್ಮಾ ಅಗ್ರಸ್ಥಾನದಲ್ಲಿದ್ದರೆ, 7 ಬಾರಿ ಈ ಸಾಧನೆ ಮಾಡಿರುವ ಕುಮಾರ ಸಂಗಾಕ್ಕರ, ಮಹೇಲಾ ಜಯವರ್ಧನೆ, ತಿಲಕರತ್ನ ದಿಲ್ಯಾನ್, ಲಸಿತ್ ಮಲಿಂಗ, ಅಂಜೆಲೊ ಮ್ಯಾಡ್ಯೂಸ್ ಸಾಲಿಗೆ ಜೋಸ್ ಬಟ್ಲರ್ ಸೇರಿದ್ದಾರೆ.
ಆದಿಲ್ ರಶೀದ್ ಕೂಡ ಇಂದಿನ ಪಂದ್ಯದ ಮೂಲಕ 7 ಬಾರಿ ಈ ಸಾಧನೆ ಮಾಡಿದ್ದಾರೆ.
