ಉದಯವಾಹಿನಿ, ಇಂದಿನ ವೇಗದ ಜಗತ್ತಿನಲ್ಲಿ ಕಂಪನಿಗಳಲ್ಲಿ ಎಷ್ಟು ಕೆಲಸ ಮಾಡಿದರು ಸಾಕಾಗಲ್ಲ. ಉದ್ಯೋಗಿ ಎಷ್ಟೇ ಕಷ್ಟ ಪಟ್ಟು ತನ್ನ ಕೆಲಸ ಪೂರ್ಣಗೊಳಿಸಿ ಹೇಳಿದ್ದ ಟಾರ್ಗೆಟ್‌ ತಲುಪಿದರೂ, ಇನ್ನು ಸ್ವಲ್ಪ ಬೇಕಿತ್ತು ಎನ್ನುವ ಮನೋಭಾವ ಮ್ಯಾನೇಜರ್‌, ಸಿಇಒ ಬಳಿ ಇರುತ್ತದೆ. ಉದ್ಯೋಗಿಗೆ ಇದು ಯಾವ ರೀತಿ ಟಾರ್ಚರ್‌ ಅಂದ್ರೆ ಅವನು ಕುಳಿತಲ್ಲಿ, ನಿಂತಲ್ಲಿ ಅದೇ ಯೋಚನೆ ಆಗಿ ಬಿಡುತ್ತೆ. ಹಣ ದೊಡ್ಡ ಮಟ್ಟದಲ್ಲಿ ಬರುತ್ತಿದ್ದರೂ ಯಾವುದೇ ಪ್ರಯೋಜನಾ ಇರಲ್ಲ. ಇಂತಹ ಸಂದರ್ಭಕ್ಕೆ ಸಿಲುಕಿದ ಯುವಕ 2.7 ಕೋಟಿ ರೂಪಾಯಿ ಮೌಲ್ಯದ ಕೆಲಸಕ್ಕೆ ಗುಡ್‌ಬೈ ಹೇಳಿದ್ದಾನೆ.
ಡೇನಿಯಲ್‌ ಮಿಂಟ್ಸ್‌ ಎನ್ನುವ ಯುವಕ ತನ್ನ ಬ್ಯುಸಿ ಕೆಲಸ ಹೇಗಿತ್ತು ಎಂದು ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿದ್ದಾರೆ. ವಿಡಿಯೋದಲ್ಲಿ ಮಾತನಾಡಿರುವ ಡೇನಿಯಲ್‌ ಮಿಂಟ್ಸ್‌, ದಿ ವಾರ್ಟನ್‌ ಶಾಲೆಯಲ್ಲಿ ಮಾರ್ಕೆಟಿಂಗ್‌ ಮತ್ತು ಮ್ಯಾನೇಜ್‌ಮೆಂಟ್‌ ಅಧ್ಯಯನವನ್ನು ಪೂರ್ಣಗೊಳಿಸಿದ್ದೆ. ಇದೇ ವೇಳೆ ಕಾಲೇಜ್ ಕ್ಯಾಂಪಸ್‌ ಸೆಲೆಕ್ಷನ್‌ನಲ್ಲಿ ನನಗೆ ಅಮೆರಿಕದ ಎಐ ಸ್ಟಾರ್ಟ್‌ ಅಪ್‌ನ ಕ್ಲೂಲಿ ಕಂಪನಿಯಲ್ಲಿ ಚೀಫ್‌ ಮಾರ್ಕೆಟಿಂಗ್‌ ಆಫೀಸರ್‌ ಆಗಿ ಹುದ್ದೆ ಸಿಕ್ಕಿತು.

ಮೊದ ಮೊದಲು ಈ ಕೆಲಸ ನನಗೆ ತುಂಬಾ ಸಂತೋಷ ಹಾಗೂ ರೋಮಾಂಚನಾ ನೀಡುತ್ತಿತ್ತು. ಆದರೆ ಕೆಲಸ ಮಾಡುತ್ತ ಮಾಡುತ್ತ ನಾನು ಅದರಲ್ಲಿ ಲೀನವಾದಂತೆ ಆಯಿತು. ನೂರಕ್ಕೆ ನೂರರಷ್ಟು ಕೆಲಸ ಮಾಡುತ್ತಿದ್ದೆ. ಇದರಿಂದ ನನ್ನ ವೈಯಕ್ತಿ ಸಂತೋಷ ಮಾಯಾವಾಗಿತ್ತು. ದಿನಕ್ಕೆ 12 ಗಂಟೆಯ ಕೆಲಸದಿಂದ ಬೇರೆ ಕೆಲಸ ಮಾಡಲಾಗುತ್ತಿರಲಿಲ್ಲ. ಕಿರಿಯ ತಮ್ಮನ ಜೊತೆ ಸಮಯ ಕಳೆಯಲು ಆಗುತ್ತಿರಲಿಲ್ಲ. ಗೆಳೆಯರೊಂದಿಗೆ ಸೇರಿ ಊಟ ಮಾಡಲಾಗುತ್ತಿರಲಿಲ್ಲ ಎಂದಿದ್ದಾನೆ. ಎಂಟು ತಿಂಗಳು ನಾನು ಕಂಪನಿಯಲ್ಲಿ ಕೆಲಸ ಮಾಡಿದೆ. ಈ ವೇಳೆ ತಮ್ಮನ ಬರ್ತ್‌ಡೇಯನ್ನು ಮಿಸ್‌ ಆದೆ. ಕುಟುಂಬದ ಜೊತೆಗಿನ ಅತ್ಯಂತ ಅಮೂಲ್ಯವಾದ ಕ್ಷಣಗಳನ್ನು ನಾನು ಕಳೆದುಕೊಂಡೆ. ಕೇವಲ 21ನೇ ವಯಸ್ಸಿನಲ್ಲಿ ಇಷ್ಟೊಂದು ಕೆಲಸ ಮಾಡುವುದು ಒಳ್ಳೆಯದಲ್ಲ ಎಂದು ವರ್ಷಕ್ಕೆ 2.7 ಕೋಟಿ ರೂಪಾಯಿಯ ಚೀಫ್‌ ಮಾರ್ಕೆಟಿಂಗ್‌ ಆಫೀಸರ್‌ ಕೆಲಸ ಬಿಟ್ಟಿದ್ದೇನೆ. ಈಗ ನೆಮ್ಮದಿಯಾಗಿದ್ದೇನೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!