ಉದಯವಾಹಿನಿ, ನವದೆಹಲಿ: ಯಮುನಾ ನದಿಯ ನೀರಿನ ಮಟ್ಟವು ಮತ್ತೆ 205.75 ಮೀಟರ್‍ಗಳ ಅಪಾಯದ ಗಡಿ ದಾಟಿದ್ದು, ಪ್ರವಾಹ ಪೀಡಿತ ತಗ್ಗು ಪ್ರದೇಶಗಳಲ್ಲಿ ಪುನರ್ವಸತಿ ಪ್ರಯತ್ನಗಳನ್ನು ಮತ್ತಷ್ಟು ವಿಳಂಬಕ್ಕೆ ತಳ್ಳಿದೆ.
ಹರಿಯಾಣ, ಹಿಮಾಚಲ ಪ್ರದೇಶದಲ್ಲಿಸತತ ಮಳೆಯಿಂದ ಯಮುನೆ ಮತ್ತೆ ಅಪಾಯದ ಹಂತಕ್ಕೆ ಬಂದಿರುವುದು ದಿಲ್ಲಿ ಜನರಲ್ಲಿ ದಿಗಿಲು ಹುಟ್ಟಿಸಿದೆ. ಕಳೆದ ವಾರ ಸಂಭವಿಸಿದ ಪ್ರವಾಹದ ಅಬ್ಬರಕ್ಕೆ ಜರ್ಝರಿತವಾಗಿದ್ದ ಜನತೆಗೆ ಯಮುನೆಯ ನೀರಿನ ಮಟ್ಟ ಹೆಚ್ಚಳವಾಗಿರುವುದು ಕಂಡು ಆತಂಕಗೊಂಡಿದ್ದಾರೆ. ಕಳೆದ 36 ಗಂಟೆಯಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ದಿಲ್ಲಿಯ ಅನೇಕ ಪ್ರದೇಶಗಳು ಜಲಾವೃತವಾಗಿವೆ. ಆರೈಕೆ ಕೇಂದ್ರದಿಂದ ಮನೆಗೆ ತೆರಳಿದ್ದ ತಗ್ಗು ಪ್ರದೇಶದ ಜನರನ್ನು ಬೆಚ್ಚಿ ಬೀಳಿಸಿದೆ. ಪರಿಸ್ಥಿತಿ ನಿಭಾಯಿಸಲು ಸರಕಾರ ಪೂರ್ವ ತಯಾರಿ ಮಾಡಿಕೊಂಡಿದೆ.
ನೀರಿನ ಮಟ್ಟ 205.34 ಮೀಟರ್‍ಗೆ ತಲುಪಿದ್ದು, ಇದು ಇನ್ನು ಏರಬಹುದು ಕೇಂದ್ರ ಜಲ ಆಯೋಗ (ಸಿಡಬ್ಲ್ಯೂಸಿ) ಹೇಳಿದೆ. ನದಿಯ ಮೇಲ್ಭಾಗದ ಜಲಾನಯನ ಪ್ರದೇಶಗಳಲ್ಲಿ, ಮುಖ್ಯವಾಗಿ ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಮಳೆಯ ನಡುವೆ ಕಳೆದ ಎರಡು-ಮೂರು ದಿನಗಳಿಂದ ನೀರಿನ ಮಟ್ಟದಲ್ಲಿ ಅಲ್ಪ ಪ್ರಮಾಣದ ಏರಿಳಿತಗಳಿವೆ. 208.66 ಮೀಟರ್‍ಗಳ ಎತ್ತರವನ್ನು ತಲುಪಿದ ನಂತರ ಯಮುನಾ ನದಿ ನೀರಿನ ಮಟ್ಟ ಕ್ರಮೇಣ ಕಡಿಮೆಯಾಗುತ್ತಿದೆ.
