ಉದಯವಾಹಿನಿ,ದೇವನಹಳ್ಳಿ:
ಗ್ರಾಹಕರ ಸುರಕ್ಷತೆ ಮತ್ತು ಮುಂಜಾಗೃತ ಕ್ರಮವಾಗಿ ಪ್ರತಿ 5 ವರ್ಷಕ್ಕೊಮ್ಮೆ ಪ್ರತಿ ಗ್ಯಾಸ್ ಸಂಪರ್ಕ ಹೊಂದಿರುವ ಮನೆಗಳಿಗೆ ಏಜೆನ್ಸಿ ಮೂಲಕ ತಜ್ಞರು ಬರಲಿದ್ದು, ಅವರೊಂದಿಗೆ ಗ್ರಾಹಕರು ಸಹಕಾರ ನೀಡಬೇಕು ಎಂದು ಎಸ್‌ಎಲ್‌ಎನ್‌ಎಸ್ ಭರತ್ ಗ್ಯಾಸ್ ಏಜೆನ್ಸಿಯ ಮಾಲೀಕ ಶ್ರೇಯಸ್.ಎನ್ ತಿಳಿಸಿದರು.
ದೇವನಹಳ್ಳಿ ಪಟ್ಟಣದ ಪ್ರಶಾಂತನಗರದಲ್ಲಿರುವ ಗ್ಯಾಸ್ ಸಂಪರ್ಕ ಹೊಂದಿರುವ ಮನೆಯೊಂದಕ್ಕೆ ಭೇಟಿ ನೀಡಿ, ಅವರು ಮಾತನಾಡಿದರು. ಗೃಹ ಬಳಕೆಯಲ್ಲಿರುವ ಗ್ಯಾಸ್ ಸಿಲೆಂಡರ್, ಗ್ಯಾಸ್ ಪೈಪ್, ಸ್ಟೌನ್ ಮತ್ತು ರೆಗ್ಯುಲೆಟರ್‌ಗೆ ಸಂಬಂಧಿಸಿದಂತೆ, ಪ್ರತಿ 5 ವರ್ಷಕ್ಕೊಮ್ಮೆ ತಪಾಸಣೆ ನಡೆಸಲಾಗುತ್ತಿದ್ದು, ಅವಧಿ ಮುಗಿದ ಹಾಗೂ ಶಿಥಿಲಗೊಂಡAತಹ ಗ್ಯಾಸ್ ಪರಿಕರಗಳಿಗೆ ನಿಗಧಿತ ಹಣವನ್ನು ಗ್ಯಾಸ್ ಏಜೆನ್ಸಿಯವರು ಪಡೆದು ಹೊಸ ಗುಣಮಟ್ಟದ ಪರಿಕರಗಳನ್ನು ನೀಡಲಾಗುತ್ತಿದೆ. ಸಿಲೆಂಡರ್ ಮತ್ತು ಗ್ಯಾಸ್ ಸಂಬಂಧಿತ ವಸ್ತುಗಳನ್ನು ತಜ್ಞರಿಂದ ಪರಿಶೀಲನೆ ನಡೆಸಲಾಗುತ್ತಿದ್ದು, ಕಂಪನಿಯ ಫಾರಂಅನ್ನು ಭರ್ತಿ ಮಾಡಿಕೊಂಡು ಗ್ರಾಹಕರ ಸುರಕ್ಷತೆ ಮತ್ತು ಮುಂಜಾಗೃತೆಯ ಕ್ರಮವನ್ನು ವಹಿಸಲಾಗುತ್ತಿದೆ. ಈಗಾಗಲೇ ಗ್ಯಾಸ್ ಕಂಪನಿಯಿAದ ಪ್ರತಿ ಏಜೆನ್ಸಿಗೆ 3 ತಿಂಗಳ ತಪಾಸಣಾ ನಿರ್ದೇಶನವಿದ್ದು, ಅದರಂತೆ, ಭರತ್ ಗ್ಯಾಸ್ ಸಂಪರ್ಕ ಹೊಂದಿರುವ 30ಸಾವಿರಕ್ಕೂ ಹೆಚ್ಚು ಗ್ರಾಹಕರ ಮನೆಗಳಿಗೆ ಏಜೆನ್ಸಿಯಿಂದ ನೇಮಿಸಿರುವ ತಜ್ಞ ಸಿಬ್ಬಂದಿಯನ್ನು ಕಳುಹಿಸಿ ತಪಾಸಣೆ ನಡೆಸಲಾಗುತ್ತಿದೆ. ಗ್ರಾಹಕರು ಸಹಕರಿಸಬೇಕು ಮತ್ತು ಶಿಥಿಲಗೊಂಡಂತಹ ಪರಿಕರಗಳನ್ನು ಬದಲಾಯಿಸಿಕೊಂಡರೆ ಸ್ವಯಂ ಸುರಕ್ಷತೆ ಮತ್ತು ಸುತ್ತಮುತ್ತಲಿನ ಜನರ ಸುರಕ್ಷತೆಗೆ ಅನುಕೂಲವಾಗಲಿದೆ. ಗ್ರಾಹಕರು ಕಂಪನಿಯಿಂದ ನಿರ್ಧರಿಸಿರುವ ಪರಿಶೀಲನೆಗೆ 236ರೂ., ಪರಿಕರವಾದ ಪೈಪ್‌ಗೆ 190 ಪ್ರತ್ಯೇಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಹೆಚ್ಚುವರಿ ಶುಲ್ಕ ಕೇಳಿದರೆ ಏಜೆನ್ಸಿ ಗಮನಕ್ಕೆ ತರಬೇಕು. ನಿಮ್ಮ ಮನೆಗೆ ಬರುವ ಸಿಬ್ಬಂದಿ ಬಳಿ ಭರತ್ ಗ್ಯಾಸ್ ಏಜೆನ್ಸಿಯ ಗುರುತಿನ ಚೀಟಿ ಇರುವುದನ್ನು ಖಚಿತಪಡಿಸಿಕೊಳ್ಳಿ ಗ್ರಾಹಕರು ಯಾವುದೇ ರೀತಿಯಲ್ಲಿ ಭಯಪಡುವ ಅಗತ್ಯವಿಲ್ಲ. ಹೆಚ್ಚಿನ ಮಾಹಿತಿಗಾಗಿ ಎಸ್‌ಎಲ್‌ಎನ್‌ಎಸ್ ಭರತ್ ಗ್ಯಾಸ್ ಕಚೇರಿ ಸಂಖ್ಯೆ 08027680801/08027680802/9686272616ಗೆ ಸಂಪರ್ಕಿಸಬಹುದು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಪ್ರಶಾಂತನಗರದ ನಿವಾಸಿಯೊಬ್ಬರ ಗ್ಯಾಸ್ ಪರಿಕರಗಳನ್ನು ತಜ್ಞರು ಪರಿಶೀಲಿಸಿದರು. ಫಾರಂಅನ್ನು ಭರ್ತಿ ಮಾಡಿಕೊಂಡು ಹೊಸದಾಗಿ ಪರಿಕರಗಳನ್ನು ನೀಡಲಾಯಿತು. ಈವೇಳೆ ಎಸ್‌ಎಲ್‌ಎನ್‌ಎಸ್ ಭರತ್ ಗ್ಯಾಸ್ ಏಜೆನ್ಸಿಯ ವ್ಯವಸ್ಥಾಪಕ ಸತೀಶ್, ಸಿಬ್ಬಂದಿ ಇದ್ದರು.
