ಉದಯವಾಹಿನಿ, ಭಾರತ ಹಾಗೂ ದಕ್ಷಿಣ ಆಫ್ರಿಕಾ ಜಂಟಿ ಆತಿಥ್ಯದಲ್ಲಿ ಫೆಬ್ರವರಿ ಹಾಗೂ ಮಾರ್ಚ್‌ ಅವಧಿಯಲ್ಲಿ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿ ನಡೆಯಲಿದೆ. ಈ ಟೂರ್ನಿಯ ಸಲುವಾಗಿ ಅಜಿತ್‌ ಅಗರ್ಕರ್‌ ಸಾರಥ್ಯದ ಬಿಸಿಸಿಐ ಆಯ್ಕೆ ಸಮಿತಿಯು 15 ಸದಸ್ಯರ ಭಾರತ ತಂಡವನ್ನು ಕಳೆದ ತಿಂಗಳು ಆಯ್ಕೆ ಮಾಡಿತ್ತು. ಅದರಂತೆ ಟಿ20 ವಿಶ್ವಕಪ್‌ ಭಾರತ ತಂಡದ ಬಗ್ಗೆ ಹಲವು ಮಾಜಿ ಆಟಗಾರರು ತಮ್ಮದೇ ಆದ ಅಭಿಪ್ರಾಯವನ್ನು ಹೊರ ಹಾಕಿದ್ದಾರೆ. ಇದೀಗ ಭಾರತ ತಂಡದ ಮಾಜಿ ನಾಯಕ ಹಾಗೂ ದಿಗ್ಗಜ ಬ್ಯಾಟ್ಸ್‌ಮನ್‌ ಸೌರವ್‌ ಗಂಗೂಲಿ , ಟಿ20 ವಿಶ್ವಕಪ್‌ ತಂಡದ ಬಗ್ಗೆ ತಮ್ಮದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಟಿ20 ವಿಶ್ವಕಪ್‌ ಭಾರತ ತಂಡಕ್ಕೆ ವರುಣ್‌ ಚಕ್ರವರ್ತಿ ಕೀ ಆಟಗಾರ ಎಂದು ಹೇಳಿದ್ದಾರೆ.
ಪಿಟಿಐ ಸುದ್ದಿ ಸಂಸ್ಥೆ ಜೊತೆ ಮಾತನಾಡಿದ ಸೌರವ್‌ ಗಂಗೂಲಿ, ಟಿ20 ವಿಶ್ವಕಪ್‌ ಟೂರ್ನಿಗೆ ಭಾರತ ತಂಡದ ತಯಾರಿಯ ಬಗ್ಗೆ ಉಲ್ಲೇಖಿಸಿದ್ದಾರೆ. ಭಾರತ ಹಾಗೂ ಶ್ರೀಲಂಕಾ ಕಂಡೀಷನ್ಸ್‌ಗೆ ಸ್ಪಿನ್‌ ನೆರವು ನೀಡಲಿದೆ. ಹಾಗಾಗಿ ತಂಡದಲ್ಲಿನ ಉತ್ತಮ ಗುಣಮಟ್ಟದ ಸ್ಪಿನ್‌ ಭಾರತ ತಂಡಕ್ಕೆ ಪ್ರಮುಖ ಅಸ್ತ್ರವಾಗಲಿದೆ ಎಂದಿದ್ದಾರೆ. ತವರಿನಲ್ಲಿ ವಿಶ್ವಕಪ್‌ ಟೂರ್ನಿಗಿಂತ ಬೇರೆ ಯಾವುದೂ ದೊಡ್ಡದಿಲ್ಲ. ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ. ಭಾರತ ತಂಡದಲ್ಲಿ ಬಲಿಷ್ಠ ಸ್ಪಿನ್‌ ಪಡೆ ಇದೆ ಹಾಗೂ ವರುಣ್‌ ಚಕ್ರವರ್ತಿ ಸಂಪೂರ್ಣವಾಗಿ ಫಿಟ್‌ ಇದ್ದರೆ, ಭಾರತ ತಂಡಕ್ಕೆ ಇದು ಒಳ್ಳೆಯದಾಗಲಿದೆ, ” ಎಂದು 2003ರ ವಿಶ್ವಕಪ್‌ ರನ್ನರ್‌ ಅಪ್‌ ಆಗಿದ್ದ ಭಾರತ ತಂಡದ ನಾಯಕ ತಿಳಿಸಿದ್ದಾರೆ.

ಟಿ20 ವಿಶ್ವಕಪ್‌ ಟೂರ್ನಿಯ ಭಾರತ ತಂಡದಲ್ಲಿ ಸ್ಪಿನ್‌ ವಿಭಾಗದಲ್ಲಿ ಬಲಿಷ್ಠ ಸ್ಪಿನ್ನರ್‌ಗಳಿದ್ದಾರೆ. ವರುಣ್‌ ಚಕ್ರವರ್ತಿ, ಕುಲ್ದೀಪ್‌ ಯಾದವ್‌, ಅಕ್ಷರ್‌ ಪಟೇಲ್‌ ಹಾಗೂ ವಾಷಿಂಗ್ಟನ್‌ ಸುಂದರ್‌ ಇದ್ದಾರೆ. ಫೆಬ್ರವರಿ 7 ರಿಂದ ಮಾರ್ಚ್‌ 8 ರವರಗೆ ಟಿ20 ವಿಶ್ವಕಪ್‌ ಟೂರ್ನಿ ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯಲಿವೆ. ಏಷ್ಯಾ ಉಪ ಖಂಡದಲ್ಲಿ ಪಿಚ್‌ಗಳು ಸ್ಪಿನ್‌ ಸ್ನೇಹಿಯಾಗುವೆ. ಹಾಗಾಗಿ ಎಲ್ಲಾ ತಂಡಗಳು ಹೆಚ್ಚಿನ ಸ್ಪಿನ್ನರ್‌ಗಳಿಗೆ ಒತ್ತು ನೀಡಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!