
ಉದಯವಾಹಿನಿ, ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ. ವರ್ಷದ ಆರಂಭವನ್ನ ಸಿಹಿ ತಿನ್ನುವ ಮೂಲಕ ಶುಭವಾಗಿ ಆರಂಭಿಸೋಣ. ಸಾಮಾನ್ಯವಾಗಿ ಸಂಕ್ರಾಂತಿಗೆ ಎಳ್ಳು ಬೆಲ್ಲ ತಿನ್ನುತ್ತಾರೆ. ಆದರೆ ಅದರ ಹೊರತಾಗಿಯೂ ಕೆಲವು ಸಿಹಿ ತಿನಿಸುಗಳು ಸವಿಯಬಹುದು. ಅವುಗಳಲ್ಲಿ ಉದ್ದಿನಬೇಳೆಯ ಖಿಚಿಡಿಯು ಕೂಡ ಒಂದು.
ಉದ್ದಿನ ಬೇಳೆ ಖಿಚಡಿಗೆ ಬೇಕಾಗುವ ಸಾಮಗ್ರಿಗಳು:
• ಅಕ್ಕಿ
• ಉದ್ದಿನ ಬೇಳೆ (ಸಿಪ್ಪೆ ತೆಗೆದದ್ದು ಅಥವಾ ಕಪ್ಪು ಉದ್ದಿನ ಬೇಳೆ)
• ತುಪ್ಪ
• ಜೀರಿಗೆ
• ಪಲಾವ್ ಎಲೆ
• ಶುಂಠಿ
• ಇಂಗು
• ಅರಿಶಿನ ಪುಡಿ
• ರುಚಿಗೆ ತಕ್ಕಷ್ಟು ಉಪ್ಪು
• ನೀರು
ಮಾಡುವ ವಿಧಾನ:
ಮೊದಲಿಗೆ ಅಕ್ಕಿ ಹಾಗೂ ಉದ್ದಿನಬೇಳೆಯನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ಬಳಿಕ ಅರ್ಧ ಗಂಟೆ ಕಾಲ ಎರಡನ್ನು ನೀರಿನಲ್ಲಿ ನೆನೆಯಲು ಬಿಡಿ.ಇನ್ನೊಂದು ಕಡೆ ಕುಕ್ಕರ್ ಅನ್ನು ಒಲೆಯ ಮೇಲಿಟ್ಟುಕೊಂಡು ತುಪ್ಪ ಹಾಕಿ. ಕಾದ ತುಪ್ಪಕ್ಕೆ ಜೀರಿಗೆ, ಇಂಗು, ತುರಿದ ಶುಂಠಿ ಹಾಗೂ ಪಲಾವ್ ಎಲೆಯನ್ನು ಹಾಕಿ, ಸ್ವಲ್ಪ ಉರಿದುಕೊಳ್ಳಿ. ಬಳಿಕ ಕುಕ್ಕರಿಗೆ ನೀರಿನಲ್ಲಿ ನೆನೆಸಿದ ಅಕ್ಕಿ ಹಾಗೂ ಉದ್ದಿನ ಬೆಳೆಯನ್ನು ಹಾಕಿ.
ಸ್ವಲ್ಪ ಉರಿದುಕೊಂಡು, ಇದಕ್ಕೆ ಉಪ್ಪು, ಅರಿಶಿಣ ಪುಡಿ ಹಾಗೂ ಅಗತ್ಯಕ್ಕೆ ತಕ್ಕಷ್ಟು ನೀರನ್ನು ಹಾಕಿ. ನಂತರ ಕುಕ್ಕರ್ ನ ಮುಚ್ಚಳ ಮುಚ್ಚಿ, ನಾಲ್ಕರಿಂದ ಐದು ಸೀಟಿ ಬರುವವರೆಗೂ ಬೇಯಿಸಿಕೊಳ್ಳಿ. ಸೀಟಿ ಆದ ಬಳಿಕ ಕುಕ್ಕರ್ ಆರಲು ಬಿಡಿ. ಆರಿದ ನಂತರ ಚೆನ್ನಾಗಿ ಕಲಸಿ. ಉದ್ದಿನ ಬೇಳೆ ಖಿಚಡಿ ತಯಾರಾಗುತ್ತದೆ.
